news
By Suvarna Web Desk | 01:16 PM November 14, 2017
ವೈದ್ಯಕೀಯ ‌ನಿಯಂತ್ರಣ ಕಾಯ್ದೆ ವಿಚಾರ; ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗಿ ಎಂದ ಸಿಎಂ

Highlights

ವೈದ್ಯಕೀಯ ‌ನಿಯಂತ್ರಣ ಕಾಯ್ದೆ ವಿಚಾರ ಸಂಬಂಧವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು  ಮುಷ್ಕರ ನಿರತ ಖಾಸಗಿ ವೈದ್ಯರ ಪ್ರತಿನಿಧಿಗಳು ಸುವರ್ಣ ಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಳಗಾವಿ (ನ.14): ವೈದ್ಯಕೀಯ ‌ನಿಯಂತ್ರಣ ಕಾಯ್ದೆ ವಿಚಾರ ಸಂಬಂಧವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು  ಮುಷ್ಕರ ನಿರತ ಖಾಸಗಿ ವೈದ್ಯರ ಪ್ರತಿನಿಧಿಗಳು ಸುವರ್ಣ ಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಾವು ಮಸೂದೆ ನಾಳೆಯೇ ಮಂಡಿಸುತ್ತೇವೆ ಎಂದು ಎಲ್ಲಿ‌ ಹೇಳಿದ್ದೇವೆ? ಅದೇನು ಕಾಯ್ದೆ ಇವತ್ತಿಂದ ನಾಳೆಗೆ ಆಗಿಬಿಡುತ್ತಾ? ನಾನು ಆರೋಗ್ಯ ಸಚಿವ ರಮೇಶ್ ಕುಮಾರ್ ಜೊತೆಗೆ ಮಾತಾನಾಡುತ್ತೇನೆ. ವಿಧೇಯಕದ ಜಂಟಿ‌ ಪರಿಶೀಲತಾ ಸಮಿತಿಯ ಜೊತೆಗೆ ಕೂಡಾ ಮಾತನಾಡುತ್ತೇನೆ. ಅದೆಲ್ಲಾ ಆದ ನಂತರ ನಿಮ್ಮನ್ನು ಕೂಡಾ ಕರೆದು ಮಾತಾಡುತ್ತೇನೆ.  ನೀವು ಸುಮ್ಮನೆ ಊಹಿಸಿಕೊಂಡು ಪ್ರತಿಭಟನೆ ಮಾಡೋದು ಸರಿಯಲ್ಲ.  ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗಿ ಎಂದು  ಖಾಸಗಿ ವೈದ್ಯರ ಸಂಘದ ಪ್ರತಿನಿಧಿಗಳ ಜೊತೆ ಮಾತುಕತೆ ವೇಳೆ ಸಿಎಂ ಹೇಳಿದ್ದಾರೆ.

 

Show Full Article


Recommended


bottom right ad