Asianet Suvarna News Asianet Suvarna News

ಹೆದ್ದಾರಿಯಲ್ಲಿ ಪತ್ತೆಯಾಯ್ತು ಮೂರು ಕಣ್ಣಿನ ಹಾವು: ಫೋಟೋ ವೈರಲ್

ಹೆದ್ದಾರಿಯಲ್ಲಿತ್ತು ಮೂರು ತಲೆಯ ಹಾವು| ಹಾವು ಹಿಡಿದ ಅಧಿಕಾರಿಗಳು ಶೇರ್ ಮಾಡಿಕೊಂಡ್ರು ಫೋಟೋ| ಫೋಟೋ ಶೇರ್ ಮಾಡಿದ್ದೇ ತಡ, ಫೇಸ್ಬುಕ್ ನಲ್ಲಿ ಫುಲ್ ವೈರಲ್

Three eyed snake found on Australian highway
Author
Bangalore, First Published May 3, 2019, 1:26 PM IST

ಕ್ಯಾನ್ಬೆರಾ[ಮೇ.03]: 

ಇತ್ತೀಚೆಗಷ್ಟೇ ವನ್ಯಜೀವಿ ಅಧಿಕಾರಿಗಳು ಆಸ್ಟ್ರೇಲಿಯಾದ ಉತ್ತರ ಭಾಗದ ಹೆದ್ದಾರಿಯಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದೆ. ನಾರ್ದನ್ ಟೆರಿಟರಿ ಪಾರ್ಕ್ ಹಾಗೂ ವೈಲ್ಡ್ ಲೈಫ್ ಅಧಿಕಾರಿಗಳು ಈ ಹಾವಿನ ಫೋಟವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಇಷ್ಟು ಮಾಡಿದ್ದೇ ತಡ ಫೋಟೋ ಭಾರೀ ವೈರಲ್ ಆಗಲಾರಂಭಿಸಿದೆ.

ಬಿಬಿಸಿ ವರದಿಯನ್ವಯ ಇದೊಂದು ಹೆಬ್ಬಾವು ಎಂದು ತಿಳಿದು ಬಂದಿದೆ. ಮಾರ್ಚ್ ತಿಂಗಳಲ್ಲಿ ಈ ಹಾವು ಪತ್ತೆಯಾದಾಗ ಕೇವಲ ಮೂರು ತಿಂಗಳ ಮರಿ. ಆದರೆ ಕೆಲವೇ ವಾರಗಳಲ್ಲಿ ಸಾವನ್ನಪ್ಪಿತ್ತು.

ವನ್ಯಜೀವಿ ಅಧಿಕಾರಿ ರೇ ಚಾಟೋ ಮಾತನಾಡುತ್ತಾ ಗಾಯಗೊಂಡ ಹಾವು ಕೆಲವು ವಾರಗಳವರೆಗೆ ಬದುಕಿದ್ದು ಅಸಾಧಾರಣ ವಿಚಾರ. ಜೀವವಿರುವವರೆಗೂ ಅದು ಆಹಾರ ಸೇವಿಸಲು ಬಹಳ ಕಷ್ಟವನುಭವಿಸಿತ್ತು ಎಂದಿದ್ದಾರೆ.

ಹಾವಿನ ಫೋಟೋ ಶೇರ್ ಮಾಡಿಕೊಂಡಿರುವ ನಾರ್ದನ್ ಟೆರಿಟರಿ ಪಾರ್ಕ್ ಹಾಗೂ ವೈಲ್ಡ್ ಲೈಫ್ 'ಹಾವಿನ ಮೂರನೇ ಕಣ್ಣು ಕೂಡಾ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈ ಅಂಗವಿಕಲತೆ ಅನುವಂಶೀಯವಾಗಿರಬಹುದು. ಇದೊಂದು ಅಸಾಧಾರಣ ಹಾವು. ನಾವು ತೆಗೆಸಿದ ಎಕ್ಸ್ ರೇನಲ್ಲೂ ಹಾವಿಗೆ ಕೇವಲ ಒಂದೇ ತಲೆ ಇದ್ದು, ಮೂರು ಕಣ್ಣುಗಳಿರುವುದು ದೃಢಪಟ್ಟಿದೆ. ಮೂರೂ ಕಣ್ಣುಗಳೂ ದೃಷ್ಟಿ ಹೊಂದಿತ್ತು' ಎಂದಿದ್ದಾರೆ.

Follow Us:
Download App:
  • android
  • ios