news
By Suvarna Web Desk | 11:50 PM March 07, 2018
ಸಿದ್ದರಾಮಯ್ಯ ಕುರುಬನೋ, ಲಿಂಗಾಯತನೋ ? ಸ್ವಾಮೀಜಿ  ಪ್ರಶ್ನೆ

Highlights

ವೀರಶೈವ ಲಿಂಗಾಯತ ಒಂದೇ.  ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯ ಧರ್ಮದಿಂದ ಲಿಂಗಾಯತ ಪ್ರತ್ಯೇಕಕ್ಕೆ ಕೆಲವೇ ಕೆಲವು ಮಠಾಧೀಶರು ಹೋರಾಟ ನಡೆಸಿದರು. ವೀರಶೈವ ಧರ್ಮದಿಂದ ಲಿಂಗಾಯತವನ್ನ ಎಂದೂ ಪ್ರತ್ಯೇಕ ಮಾಡಲು ಆಗುವುದಿಲ್ಲ.

ದಾವಣಗೆರೆ(ಮಾ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬನೋ ಅಥವಾ ಲಿಂಗಾಯತನೋ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಮಠದ ಶ್ರೀದಿಂಗಾಲೇಶ್ವರ ಸ್ವಾಮೀಜಿ ಪ್ರಶ್ನಿಸಿದರು.

99 ಲಿಂಗಾಯತ ಉಪ ಪಂಗಡದಲ್ಲಿ ಕುರುಬ ಕುಂಚಿಟಿಗ ಭೋವಿ ಕಮ್ಮಾರ ಬಡಿಗೇರ ಹೀಗೆ ಇವೆ. ಹೀಗಾಗಿ ಮುಖ್ಯಮಂತ್ರಿಗಳು ಕುರುಬನೋ ಅಥವಾ ಲಿಂಗಾಯತನೋ ಎಂದು ಕೇಳಿದರು.

ದಾವಣಗೆರೆಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ನಿವಿಧ ಮಠದ ಸ್ವಾಮೀಜಿಗಳು, ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮನ್ನಣೆಗೆ ವಿರೋಧ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಒಂದೇ.  ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯ ಧರ್ಮದಿಂದ ಲಿಂಗಾಯತ ಪ್ರತ್ಯೇಕಕ್ಕೆ ಕೆಲವೇ ಕೆಲವು ಮಠಾಧೀಶರು ಹೋರಾಟ ನಡೆಸಿದರು. ವೀರಶೈವ ಧರ್ಮದಿಂದ ಲಿಂಗಾಯತವನ್ನ ಎಂದೂ ಪ್ರತ್ಯೇಕ ಮಾಡಲು ಆಗುವುದಿಲ್ಲ. ವೀರಶೈವ-ಲಿಂಗಾಯತ ಎರಡೂ ಒಂದೇ . ರಾಜ್ಯ ಸರ್ಕಾರ ಬಹುಸಂಖ್ಯಾತರ ಮಾತು ಕೇಳದೆ, ಕೆಲವೇ ಕೆಲವರ ಮಾತು ಕೇಳಿದೆ. ತರಾತುರಿಯಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿತು.  ಸಮಿತಿಯಲ್ಲಿ ಇದ್ದವರೆಲ್ಲರೂ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಇದ್ದವರು' ಎಂದು ತಿಳಿಸಿದರು.

 

Show Full Article


Recommended


bottom right ad