Asianet Suvarna News Asianet Suvarna News

ಸಿಬಿಐ, ಐಬಿ, ದೆಹಲಿ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಬುಲಾವ್!

ಸಿಜೆಐ ರಂಜನ್​ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ| ಸಿಬಿಐ, ಐಬಿ, ದೆಹಲಿ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಕೋರ್ಟ್ ಬುಲಾವ್| ಗಗೋಯ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ಆರೋಪ ಎಂದು ವಕೀಲ ಉತ್ಸವ್​ ಭೈನ್ಸ್ ಪ್ರಮಾಣಪತ್ರ| ಸ್ಪಷ್ಟನೆ ಕೋರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ| ಸುಪ್ರೀಂ ಕೋರ್ಟ್​ನ ಇತರೆ ನ್ಯಾಯಮೂರ್ತಿಗಳನ್ನು ಬೆದರಿಸಲು ಕೆಲವರು ಪಿತೂರಿ?| 

Supreme Court Summons CBI, Intelligence Bureau, Cops
Author
Bengaluru, First Published Apr 24, 2019, 2:59 PM IST

ನವದೆಹಲಿ(ಏ.24): ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಪಷ್ಟನೆಗೆ ಹಾಜರಾಗುವಂತೆ ಸಿಬಿಐ, ಗುಪ್ತಚರ ಮತ್ತು ದೆಹಲಿ ಪೊಲೀಸ್ ಕಮಿನಿಷರ್‌ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 

ಗಗೋಯ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದ್ದು, ಇದರಲ್ಲಿ ಪಿತೂರಿ ನಡೆದಿದೆ ಎಂದು ಆರೋಪಿಸಿ ವಕೀಲ ಉತ್ಸವ್​ ಭೈನ್ಸ್​ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದರು.

ಗಗೋಯ್ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಸುಪ್ರೀಂ ಕೋರ್ಟ್​ನ ಇತರೆ ನ್ಯಾಯಮೂರ್ತಿಗಳನ್ನು ಬೆದರಿಸಲು ಕೆಲವರು ಪಿತೂರಿ ನಡೆಸಿದ್ದು, ನ್ಯಾಯಾಂಗ ವ್ಯವಸ್ಥೆ ದೃಷ್ಟಿಯಿಂದ ಇದು ತುಂಬಾ ಗಂಭೀರವಾದ ಘಟನೆ ಎಂದು ಉತ್ಸವ್​ ಭೈನ್ಸ್ ತಮ್ಮ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಬಿಐ, ಗುಪ್ತಚರ ಮತ್ತು ದೆಹಲಿ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios