Asianet Suvarna News Asianet Suvarna News

197 ದಿನ ಅಂತರಿಕ್ಷದಲ್ಲಿದ್ದವ ಭೂಮಿಗೆ ಬಂದ ನಂತ್ರ ಏನಾಯ್ತು? ವಿಡಿಯೋ ವೈರಲ್

ಭೂಮಿಯ ಕಕ್ಷೆಯ ದಾಟಿ ಅಂತರಿಕ್ಷದಲ್ಲಿ ಹಾರಾಡಬೇಕು ಎಂಬ ಕನಸನ್ನು ಒಂದೆಲ್ಲಾ ಒಂದು ಸಾರಿ ಮಾನವ ಕಂಡಿರುತ್ತಾನೆ. ಅದೇ ಅಂತರಿಕ್ಷದಲ್ಲಿ ನೂರಾರು ದಿನ ಕಳೆದು ಭೂಮಿಗೆ ಹಿಂದಿರುಗಿದರೆ ಏನಾಗುತ್ತದೆ ಎಂಬುದಕ್ಕೆ ಒಂದು ನೈಜ ಉದಾಹರಣೆ ಇಲ್ಲಿದೆ.

Spending 197 days in space NASA astronaut Andrew J. Feustel struggles to walk on Earth
Author
Bengaluru, First Published Dec 26, 2018, 4:52 PM IST

ನವದೆಹಲಿ[ಡಿ.26] ಅಂತರಿಕ್ಷದಲ್ಲಿ 197 ದಿನ ಕಳೆದು ಬಂದ ಗಗನಯಾನಿ  ಭೂಮಿ ಮೇಲೆ ನಡೆಯಲು ಹರಸಾಹಸ ಪಟ್ಟರು. ಅಂತರಿಕ್ಷದಲ್ಲಿ ಕಾಲ ಕಳೆದ ಇವರಿಗೆ ಭೂಮಿಯ ಮೇಲಿನ ಕೆಲವು ಕೆಲಸಗಳು ಸಂಕಷ್ಟ ತಂದೊಡ್ಡಿದ್ದವು.

ಎ ಜೆ.ಪ್ಯೂಸ್ಟೆಲ್​ ಜತೆ ಮತ್ತಿಬ್ಬರು ಗಗನಯಾತ್ರಿಗಳು 197 ದಿನ ಅಂತರಿಕ್ಷದಲ್ಲಿ ಕಳೆದು ಭೂಮಿಗೆ ಮರಳಿದ್ದಾರೆ. ಅಂತರಿಕ್ಷದಲ್ಲಿ ತೇಲಿ ತೇಲಿ ಅನುಭವವಿದ್ದ ಇವರಿಗೆ ಭೂಮಿಗೆ ಬಂದ ಬಳಿಕ ಇಲ್ಲಿನ  ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಈ ವಿಚಾರವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅವರೆ ಹಂಚಿಕೊಂಡಿದ್ದಾರೆ.

ಡಿಸೆಂಬರ್ 21ರ ಹಿಂದಿದೆ ಅತಿ ಚಿಕ್ಕಹಗಲು, ಅತಿ ಚಿಕ್ಕ ರಾತ್ರಿ...ಏನಿದು ಕತೆ?

ಭೂಮಿಯ ಗುರುತ್ವಾಕರ್ಷಣೆ ಮೀರಿ ಹಲವು ದಿನ ಇದ್ದ ಇವರಿಗೆ ಆದ ಅನುಭವದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

Follow Us:
Download App:
  • android
  • ios