Asianet Suvarna News Asianet Suvarna News

ಕಬ್ಬಿಣದ ಕಡಲೆಯಾದ ಸಿಎಂ ಆಯ್ಕೆ: ಪೈಲೆಟ್ ಬೆಂಬಲಿಗರಿಂದ ಹಿಂಸಾಚಾರ!

ಇನ್ನೂ ಆಯ್ಕೆಯಾಗಿಲ್ಲ ರಾಜಸ್ಥಾನ, ಮಧ್ಯಪ್ರದೇಶ ಸಿಎಂ| ರಾಹುಲ್ ಗಾಂಧಿ ಅವರಿಂದ ಸಿಎಂ ಆಯ್ಕೆ ಕಸರತ್ತು| ಯಾರಾಗ್ತಾರೆ ರಾಜಸ್ಥಾನದ ರಾಜ?| ಮಧ್ಯಪ್ರದೇಶ ಸಿಎಂ ಗಾದಿ ಯಾರ ಪಾಲಿಗೆ?| ಅಶೋಕ್ ಗೆಹ್ಲೊಟ್ ನೇಮಕ ವದಂತಿಯಿಂದ ಪೈಲೆಟ್ ಬೆಂಬಲಿಗರು ಆಕ್ರೋಶ| ಕೌರಲಿಯಲ್ಲಿ ಸಚಿನ್ ಪೈಲೆಟ್ ಬೆಂಬಲಿಗರಿಂದ ಹಿಂಸಾಚಾರ| ಶಾಂತಿ ಕಾಪಾಡುವಂತೆ ಬೆಂಬಲಿಗರಲ್ಲಿ ಮನವಿ ಮಾಡಿದ ಪೈಲೆಟ್ 
 

Sachin Pilot Appeals For Calm As Supporters Fuels Protests
Author
Bengaluru, First Published Dec 13, 2018, 8:09 PM IST

ಜೈಪುರ್(ಡಿ.13): ಅಶೋಕ್ ಗ್ಲೆಹೊಟ್  ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವರದಿಗಳಿಂದ ರಾಜಸ್ಥಾನದ ಕೌರಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಸಚಿನ್ ಪೈಲೆಟ್ ಬೆಂಬಲಿಗರು ಹಿಂಸಾಚಾರದಲ್ಲಿ ನಿರತರಾಗಿದ್ದು, ಶಾಂತಿ ಕಾಪಾಡುವಂತೆ ಸಚಿನ್ ಪೈಲೆಟ್ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ. ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದು, ರಾಹುಲ್ ಗಾಂಧಿ, ಸೋನಿಯಾಗಾಂಧಿ ನಿರ್ಧಾರವನ್ನು ಸ್ವಾಗತಿಸುವುದಾಗಿ ಪೈಲೆಟ್ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಅಶೋಕ್ ಗೆಹ್ಲೋಟ್ , ಸಚಿನ್ ಪೈಲಟ್ ಹಾಗೂ ಮಧ್ಯಪ್ರದೇಶದ ಕಮಲ್ ನಾಥ್,  ಜ್ಯೋತಿರಾಧಿತ್ಯ ಸಿಂದಿಯಾ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಯುಪಿಎ ಅಧಿನಾಯಕಿ ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಸಹ ಪಾಲ್ಗೊಂಡಿದ್ದರು.

ಮೂರು ರಾಜ್ಯಗಳ ನೂತನ ಚುನಾಯಿತ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿದ ಕೇಂದ್ರ ವೀಕ್ಷಕರರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ , ಸೋನಿಯಾಗಾಂಧಿ ಮುಖ್ಯಮಂತ್ರಿ ಆಯ್ಕೆ ಸಂಬಂಧ ಚರ್ಚೆ ನಡೆಸಿದ್ದಾರೆ.

Follow Us:
Download App:
  • android
  • ios