Asianet Suvarna News Asianet Suvarna News

ಎಚ್ಚರ...! 2000, 500 ನೋಟು ಹೆಚ್ಚು ದಿನ ಬಾಳಲ್ಲ!

2000, 500 ನೋಟು ಹೆಚ್ಚು ದಿನ ಬಾಳಲ್ಲ....! ಹೌದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಇಂತಹ ವಿಚಾರವನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ವರದಿಯನ್ವಯ ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ಗುಣಮಟ್ಟ ಕಡಿಮೆ ಹೀಗಾಗಿ ಮಡಚಿದ ನೋಟುಗಳು ‘ನಿರುಪಯುಕ್ತ’ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಇಂತಹ ನೋಟುಗಳು ಎಟಿಎಂಗಳಲ್ಲೂ ಚಲಾವಣೆ ಆಗುವುದಿಲ್ಲ ಎಂದಿದ್ದಾರೆ.
 

quality of 2000 and 500 rupees notes are very bad says central govt officer
Author
New Delhi, First Published Nov 29, 2018, 9:04 AM IST

ನವದೆಹಲಿ[ನ.29]: ಅಪನಗದೀಕರಣ ಬಳಿಕ ಬಿಡುಗಡೆಯಾದ 2000 ಹಾಗೂ 500 ರು. ಮುಖಬೆಲೆಯ ನೋಟುಗಳು ಉತ್ತಮ ಗುಣಮಟ್ಟಹೊಂದಿಲ್ಲ, ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂಬ ಜನಸಾಮಾನ್ಯರ ಮಾತು ಈಗ ನಿಜವಾಗುತ್ತಿದೆಯೇ?

- ಹೌದು ಎನ್ನುತ್ತಿವೆ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಗಳು. 2016ರ ನವೆಂಬರ್‌ ನಂತರ ಚಲಾವಣೆಗೆ ಬಂದಿರುವ ಹೊಸ ರೂಪ, ಬಣ್ಣದ ನೋಟುಗಳು ಈ ಹಿಂದೆ ಚಲಾವಣೆಯಲ್ಲಿದ್ದ ಹಳೆಯ ನೋಟುಗಳಿಗೆ ಹೋಲಿಸಿದರೆ ಬಹುಬೇಗನೇ ಆಯಸ್ಸು ಕಳೆದುಕೊಳ್ಳುತ್ತಿದ್ದು, ನಿರುಪಯುಕ್ತವಾಗುತ್ತಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಗಳು ತಿಳಿಸಿವೆ.

"

‘ಹಿಂದೆ ಚಲಾವಣೆಯಲ್ಲಿದ್ದ ನೋಟುಗಳಿಗೆ ಹೋಲಿಸಿದರೆ ಹೊಸ ಬಗೆಯ ನೋಟುಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ ಎಂಬುದು ಹಳೆಯ ದೂರು. ಜನರು ನೋಟುಗಳನ್ನು ಮಡಚುವುದರಿಂದ ಹಾಗೂ ಸೀರೆ ಅಥವಾ ಪಂಚೆಗೆ ಕಟ್ಟಿಕೊಳ್ಳುತ್ತಿರುವುದರಿಂದ ನೋಟು ಬಹುಬೇಗನೆ ನಿರುಪಯುಕ್ತವಾಗುತ್ತಿವೆ’ ಎಂದು ಹಣಕಾಸು ಸಚಿವಾಲಯದ ಬ್ಯಾಂಕ್‌ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಒಂದು ವೇಳೆ ನೋಟುಗಳು ನಿರುಪಯುಕ್ತ ವಿಭಾಗಕ್ಕೆ ಸೇರ್ಪಡೆಯಾದರೆ, ಅದನ್ನು ಬ್ಯಾಂಕುಗಳಲ್ಲೂ ಚಲಾವಣೆ ಮಾಡಲಾಗದು. ಏಕೆಂದರೆ, ಎಟಿಎಂಗಳಲ್ಲಿನ ಸೆನ್ಸರ್‌ಗಳು ಈ ನೋಟನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.

2000 ಹಾಗೂ 500 ರು. ಮುಖಬೆಲೆಯ ನೋಟು ನಿರುಪಯುಕ್ತವಾದರೆ, ಅದೇ ಗುಣಮಟ್ಟಹೊಂದಿದೆ ಎನ್ನಲಾಗಿರುವ ಹಾಗೂ ಈ ವರ್ಷ ಬಿಡುಗಡೆಯಾದ 10 ರು. ಮುಖಬೆಲೆಯ ನೋಟು ಕೂಡ ನಿರುಪಯುಕ್ತವಾಗಲಿದೆ ಎಂದು ವರದಿ ಹೇಳಿದೆ.

Follow Us:
Download App:
  • android
  • ios