news
By Suvarna Web Desk | 04:51 PM August 11, 2017
ಮತ್ತೆ ಸುದ್ದಿಯಲ್ಲಿ ಪ್ರಥಮ್ :ಕೊಟ್ಟ ಮಾತು ಉಳಿಸಿಕೊಂಡ  ಒಳ್ಳೆ ಹುಡುಗ

Highlights

ಕೊಟ್ಟ ಮಾತು ಉಳಿಸಿಕೊಂಡ ಒಳ್ಳೆ ಹುಡುಗ

ಬಿಗ್ ಬಾಸ್ ಪ್ರಥಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಇನ್ನೇನು ಅನಾಹುತ ಮಾಡಿಕೊಂಡು ಬಿಟ್ಟರಪ್ಪಾ ಎಂದು ಅಂದುಕೊಳ್ಳಬೇಡಿ. ಈ ಬಾರಿ ಪ್ರಥಮ್ ಒಳ್ಳೆ ಕೆಲಸಕ್ಕಾಗಿ ಸುದ್ದಿಯಲ್ಲಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಪ್ರಥಮ್ ತಾವು ಗೆದ್ದ  ವಿಜೇತ ಹಣವನ್ನು ರೈತರಿಗೆ, ಯೋಧರಿಗೆ,  ದಾನ ನೀಡುವುದಾಗಿ ಹೇಳಿದ್ರು. ಈಗ ಪ್ರಥಮ್ ತಾವು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಬಿಗ್​ಬಾಸ್​ ಶೋನಲ್ಲಿ ಗೆದ್ದ ಹಣದಲ್ಲಿ 10ಲಕ್ಷ ಹಣವನ್ನ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

3 ದಿನಗಳಿಂದ ದಿಲ್ಲಿಯಲ್ಲೇ ಇದ್ದ ಪ್ರಥಮ್​

ಬಿಗ್ ಬಾಸ್ ವಿನ್ನರ್ ಆಗುತಿದ್ದಂತೆ  ತಾವು ಗೆದ್ದ ಎಲ್ಲ ಹಣವನ್ನ ದಾನ ಮಾಡುವುದಾಗಿ ಹೇಳಿದ್ದ ಪ್ರಥಮ್ ತಮ್ಮ ಮಾತನ್ನ ನಿಜ ಮಾಡಿದ್ದಾರೆ. 3 ದಿನಗಳಿಂದ ದಿಲ್ಲಿಯಲ್ಲೇ ಇದ್ದ ಪ್ರಥಮ್​, ಘೋಷಣೆಯನ್ವಯ  ಪ್ರಧಾನಿ ಪರಿಹಾರ ನಿಧಿಗೆ 10ಲಕ್ಷ ರೂ ಹಣವನ್ನ ನೀಡಿದ್ದಾರೆ.  ಇನ್ನು ಪ್ರಥಮ್ ತಾನು ಗೆದ್ದಿರುವ 50 ಲಕ್ಷ ರೂ. ಬಹುಮಾನದ ಹಣದಲ್ಲಿ 15ಲಕ್ಷ ತೆರಿಗೆ ಕಟ್ಟಿದ್ದು, ಉಳಿದ ‘ಬಹುಮಾನದ  35ಲಕ್ಷ  ಎಲ್ಲಾ ಹಣ ಪರಿಹಾರಕ್ಕೆ ನೀಡಿದ್ದೇನೆ ಎಂದು ಪ್ರಥಮ್ ಹೇಳಿದ್ದಾರೆ.

ಒಟ್ಟಿನಲ್ಲಿ ಕೊಟ್ಟ ಮಾತು ಉಳಿಸಿಕೊಂಡಿರುವ ಪ್ರಥಮ್ ನಡೆ ಎಲ್ಲರಿಗೂ ಮೆಚ್ಚಿಗೆಯಾಗಿದ್ದು,  ಪ್ರಥಮ್'ನ  ಈ ಒಳ್ಳೆ ಕೆಲಸ ಹೀಗೆ ಮುಂದುವರೆಯಲ್ಲಿ . ಪ್ರಥಮ್ ಸಮಾಜ ಮುಖಿ ಕಾರ್ಯ ಇನ್ನೊಬ್ಬರಿಗೆ ಮಾರ್ಗದರ್ಶನವಾಗಲಿ

 

Show Full Article


Recommended


bottom right ad