news
By Suvarna Web Desk | 03:13 PM July 17, 2017
ರೈಲಿನ ಒಳಗೆ ಸಿಗರೇಟ್ ಹಾಗೂ ಮದ್ಯ ಮಾರಾಟ: ಪ್ರಶ್ನಿಸಿದ ಪ್ರಯಾಣಿಕರಿಗೆ ಬೇಜವಾಬ್ದಾರಿಯುತ ಉತ್ತರ!

Highlights

ತಿರುವನಂತಪುರಂ ಸೂಪರ್ ಫಾಸ್ಟ್ ಎಕ್ಸ್'ಪ್ರೆಸ್ ರೈಲಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಈ ಕುರಿತಾಗಿ ದೂರು ನೀಡಲು ತೆರಳಿದ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡಿರುವ ಪ್ರಕರಣ ನಡೆದಿದೆ.

ಮಂಗಳೂರು(ಜು.17): ತಿರುವನಂತಪುರಂ ಸೂಪರ್ ಫಾಸ್ಟ್ ಎಕ್ಸ್'ಪ್ರೆಸ್ ರೈಲಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಈ ಕುರಿತಾಗಿ ದೂರು ನೀಡಲು ತೆರಳಿದ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡಿರುವ ಪ್ರಕರಣ ನಡೆದಿದೆ.

ತಿರುವನಂತಪುರಂ ಸೂಪರ್ ಫಾಸ್ಟ್ ಎಕ್ಸ್'ಪ್ರೆಸ್ ರೈಲಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಒಂದೆಡೆ ರೈಲಿನ ಒಳಗೆ ಸಿಗರೇಟ್ ಹಾಗೂ ಮದ್ಯ ಮಾರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕಳ್ಳನೊಬ್ಬ ಚಿನ್ನದ ಸರ ಎಳೆದೊಯ್ಯುವ ಪ್ರಯತ್ನ ಮಾಡಿದ್ದಾನೆ. ಇಷ್ಟು ಸಾಲದು ಎಂಬಂತೆ ಎರಡು ದಿನಗಳಿಂದ ಈ ರೈಲಿನಲ್ಲಿ ಟಿಸಿ ಕೂಡಾ ಕಾಣಿಸಿಕೊಂಡಿಲ್ಲ.

ಇನ್ನು ನೊಂದ ಪ್ರಯಾಣಿಕರು ಈ ಕುರಿತಾಗಿ ರೈಲ್ವೇ ಇಲಾಖೆಗೆ ದೂರು ನೀಡಲು ತೆರಳಿದರೆ, ಆರ್ ಪಿಎಫ್ ಪೊಲೀಸರು ಪ್ರಯಾಣಿಕರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ರೈಲ್ವೇ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಬೇಸತ್ತ ಪ್ರಯಾಣಿಕರು ಮಹಾರಾಷ್ಟ್ರದಲ್ಲಿ ರೈಲು ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

 

Show Full Article


Recommended


bottom right ad