Asianet Suvarna News Asianet Suvarna News

ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಹರಕೆ: ಬರಿಗಾಲಲ್ಲೇ ಹತ್ತುತ್ತಾರೆ 3 ಸಾವಿರ ಅಡಿ ಎತ್ತರದ ಬೆಟ್ಟ

ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿಯಲ್ಲಿ ದೇವರ ಮೊರೆ ಹೋಗ್ತಾರೆ. ಆದರೆ, ಚಿಕ್ಕಮಗಳೂರಿನ ದೇವಿರಮ್ಮನ ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ದೇವರೆದುರು ದೇಹವನ್ನು ದಂಡಿಸುತ್ತಾರೆ. ನರಕ ಚತುರ್ದಶಿಯಂದು ಈ ವಿಶಿಷ್ಟ ಆಚರಣೆ ನಡೆಯಲಿದೆ.

people complete their exvoto by climbing the 3000 steps bare footedly

ಚಿಕ್ಕಮಗಳೂರು(ಅ.18): ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿಯಲ್ಲಿ ದೇವರ ಮೊರೆ ಹೋಗ್ತಾರೆ. ಆದರೆ, ಚಿಕ್ಕಮಗಳೂರಿನ ದೇವಿರಮ್ಮನ ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ದೇವರೆದುರು ದೇಹವನ್ನು ದಂಡಿಸುತ್ತಾರೆ. ನರಕ ಚತುರ್ದಶಿಯಂದು ಈ ವಿಶಿಷ್ಟ ಆಚರಣೆ ನಡೆಯಲಿದೆ.

ಭಕ್ತರು ಬರಿಗಾಲಲ್ಲೇ 3000 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸುತ್ತಾರೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಬೆಟ್ಟವನ್ನೆರೋ ನಿರೀಕ್ಷೆಯಿದ್ದು, ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

Follow Us:
Download App:
  • android
  • ios