ತಾಯಿ ಮರಣಹೊಂದಿದರೂ ಕೊರೋನಾ ಚಿಕಿತ್ಸೆ ಕರ್ತವ್ಯ ಮುಂದುವರಿಸಿದ ಡಾಕ್ಟರ್

ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಹರಡದಂತೆ ತಡೆಯವು ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ಹಗಳಿರುಳು ಶ್ರಮಿಸುತ್ತಿದ್ದಾರೆ. ತಮ್ಮ ವೈಯುಕ್ತಿ ಜೀವನ, ನೋವು, ನಲಿವುಗಳನ್ನು ಬದಿಗಿಟ್ಟು ಜನರ ಸೇವೆ ಮಾಡುತ್ತಿದ್ದಾರೆ. ಹೀಗೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತ ಡಾಕ್ಟರ್ ಅಶೋಕ್ ದಾಸ್ ಬದ್ಧತೆಗೆ ಇಡೀ ದೇಶವೇ ಹ್ಯಾಟ್ಸಾಫ್ ಹೇಳಿದೆ.

Odisha doctor goes on COVID-19 duty despite losing her mother

ಒಡಿಶಾ(ಮಾ.21): ಕೊರೋನಾ ವೈರಸ್ ತಡೆಗಟಲ್ಲು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿದೆ. ನಗರ, ಜಿಲ್ಲೆ, ತಾಲೂಕುಗಳಲ್ಲಿ ವೈದ್ಯಾದಿಕಾರಿಗಳನ್ನು ನೇಮಕ ಮಾಡಿ ಜನರಿಗೆ ನೆರವು ನೀಡುತ್ತಿದೆ. ವಿಶೇಷ ನೂಡಲ್ ಅಧಿಕಾರಿಗಳು, ತಜ್ಞರ ತಂಡ ಜನರ ನೆರವಿಗೆ ನಿಂತಿದೆ. ಹೀಗೆ ಕೊರೋನಾ ವೈರಸ್ ತಡೆಗಟ್ಟವ ಜವಾಬ್ದಾರಿ ಹೊತ್ತ ವೈದ್ಯಾದಿಕಾರಿಯ ಬದ್ಧತೆಯನ್ನು ದೇಶವೆ ಕೊಂಡಾಡಿದೆ.

ಸಿದ್ದರಾಮಯ್ಯಗೂ ಭಯ ಹುಟ್ಟಿಸಿದ ಕೊರೋನಾ ವೈರಸ್

ಒಡಿಶಾದ ಸಂಬಾಲ್ಪುರ ಜಿಲ್ಲೆಯ ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ ಅಶೋಕ್ ದಾಸ್ ಕರ್ತವ್ಯ ಬದ್ಧತೆಗೆ ತಲೆಬಾಗಲೇಬೇಕು. ಸರಿಸುಮಾರು ಒಂದು ತಿಂಗಳಿನಿಂದ ಅಶೋಕ ದಾಸ್ ಜಿಲ್ಲೆಯ ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಸಭೆ ನಡೆಸುತ್ತಿದ್ದಾರೆ. ಇತ್ತ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಮಾರ್ಚ್ 17ರಂದು ಅಶೋಕ್ ದಾಶ್ ತಾಯಿ ಪದ್ಮಿನಿ(80 ವರ್ಷ) ಮರಣ ಹೊಂದಿದ್ದಾರೆ. 

ಕೊರೋನಾ ಭೀತಿ: ಮಂಗಳೂರಲ್ಲಿ 51 ಜನರಿಗಾಗಿ ಹುಡುಕಾಟ

ಬೆಳಗ್ಗೆ ಆಸ್ಪತ್ರೆಗೆ ತೆರಳಿ ಕೊರೋನಾ ವೈರಸ್ ತಡೆಗಟ್ಟಲು ವೈದ್ಯರ ಜೊತೆ ಸಭೆ ನಡೆಸಿದ ಡಾಕ್ಟರ್ ಆಶೋಕ್ ದಾಸ್‌ಗೆ ತಾಯಿ ಮರಣ ಹೊಂದಿದ ಸುದ್ದಿ ತಲುಪಿದೆ. ಅಶೋಕ್ ದಾಸ್‌ಗೆ ಒಂದು ಕ್ಷಣ ದಿಕ್ಕೇ ತೋಚಲಿಲ್ಲ. ತಕ್ಷಣವೇ ಮನೆಗೆ ಹಿಂತಿರುಗಲು ಅಶೋಕ್ ದಾಸ್‌ಗೆ ಯಾವ ಅಧಿಕಾರಿಯ ಪರ್ಮಿಶನ್ ಬೇಕಿರಲಿಲ್ಲ. ಆದರೆ ಆಶೋಕ್ ದಾಸ್, ಜಿಲ್ಲಾ ವೈದ್ಯರ ಜೊತೆ ಸಭೆ ಮುಗಿಸಿ, ಬಳಿಕ ರೈತರು, ಕಾರ್ಮಿಕರಿಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಕುರಿತು ತಿಳಿ ಹೇಳಿದ್ದಾರೆ. ಸಾರ್ವಜನಿಕ ಸಭೆಯನ್ನು ನಡೆಸಿದ್ದಾರೆ.

ಕೊರೋನಾ ವೈರಸ್ ಜಿಲ್ಲೆಗೆ ಹರಡದಂತೆ ಬೇಕಾದ ಎಲ್ಲಾ ಕ್ರಮಗಳನ್ನು, ಜಾಗೃತಿಯನ್ನು ಕೈಗೊಂಡಾಗ ಸಂಜೆಯಾಗಿದೆ. ಬಳಿಕ ಮನೆಗೆ ಮರಳಿದ ಡಾಕ್ಟರ್ ಅಶೋಕ್ ದಾಸ್ ತಾಯಿ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಮರುದಿನ ಎಂದಿನಂತೆ ಡಾಕ್ಟರ್ ಅಶೋಕ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ಅಶೋಕ್ ದಾಸ್ ಕಾರ್ಯಕ್ಕೆ ಒಡಿಶಾ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. 

ಕೊರೋನಾ ವೈರಸ್ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಒಡಿಶಾದ IAS ಅಧಿಕಾರಿ ನಿಕುಂಜ ಧಾಲ್ ಬದ್ಧತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಾರ್ಚ್ 16ರಂದು ಕರ್ತವ್ಯದಲ್ಲಿದ್ದ ನಿಕುಂಜ ಧಾಲ್‌ಗೆ ತಂದೆ ಸಾವನ್ನಪ್ಪಿರುವ ಸುದ್ದಿ ತಿಳಿದರೂ ಕರ್ತವ್ಯದಲ್ಲಿ ಮುಂದುವರಿದಿದ್ದಾರೆ. ಬಳಿಕ ತಂದೆಯ ಅಂತ್ಯಕ್ರೀಯೆಯಲ್ಲಿ ಪಾಲ್ಗೊಂಡು ಮರುದಿನ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವೈದ್ಯರು, ಅಧಿಕಾರಿಗಳು ತಮ್ಮ ವೈಯುಕ್ತಿಕ ವಿಚಾರಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದಾರೆ. ಇವರ ಜೊತೆಗೆ ಜನಸಾಮಾನ್ಯರೂ ಕೂಡ ಕೈಜೋಡಿಸಬೇಕಿದೆ.
 

Latest Videos
Follow Us:
Download App:
  • android
  • ios