Asianet Suvarna News Asianet Suvarna News

ಅವ್ರೂ ಅಲ್ಲೇ, ಇವ್ರೂ ಅಲ್ಲೇ: ಮೋದಿ-ರಾಹುಲ್ ಮಧ್ಯೆ ಮಾತಿಲ್ಲ ಕತೆಯಿಲ್ಲ!

ಪರಸ್ಪರ ಎದುರಾದರೂ ಮಾತನಾಡದ ಮೋದಿ, ರಾಹುಲ್| ಪಂಚ ರಾಜ್ಯಗಳ ವಿಧಾನಸಭೆ ಫಲಿತಾಂಶ ಕಾರಣವೇ?| ಸಂಸತ್ ಭವನದ ಉಗ್ರರ ದಾಳಿಗೆ 17 ವರ್ಷ| ಹುತಾತ್ಮರ ನಮನ ಕಾರ್ಯಕ್ರಮದಲ್ಲಿ ಎದುರಾದ ಮೋದಿ, ರಾಹುಲ್| ಪರಸ್ಪರ ಮಾತನಾಡದೇ ಹಾಗೆ ಹೋದರು ನಾಯಕರು

No Interaction Between PM Modi and Rahul Gandhi at Parliament
Author
Bengaluru, First Published Dec 13, 2018, 7:24 PM IST

ನವದೆಹಲಿ(ಡಿ.13): ಸಂಸತ್ ಭವನದ ಮೇಲಿನ ಉಗ್ರರ ದಾಳಿಗೆ 17 ವರ್ಷವಾಗಿದ್ದು, ಇಂದು ಸಂಸತ್ ಭವನದ ಆವರಣದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಪರಸ್ಪರ ಎದುರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬರಿಗೊಬ್ಬರು ಮಾತನಾಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮೋದಿ ಮತ್ತು ರಾಹುಲ್ ಎದುರಾದರೂ ಮಾತನಾಡದೇ ಹಾಗೆ ಹೊರಟು ಹೋಗಿದ್ದಾರೆ. 

ಆದರೆ ಪ್ರಧಾನಿ ಮೋದಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದ್ದು, ಬಿಜೆಪಿಯ ಕೆಲವು ನಾಯಕರು ರಾಹುಲ್ ಅವರೊಂದಿಗೆ ಮಾತನಾಡಿದ್ದಾರೆ.

ಮಂಗಳವಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಇದು ರಾಹುಲ್ ಗೆಲುವು ಎಂದೇ ಬಿಂಬಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಗೆಲುವು ಪ್ರಧಾನಿಯ ಹಿನ್ನಡೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಇಬ್ಬರೂ ಮಾತನಾಡಿಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

Follow Us:
Download App:
  • android
  • ios