Asianet Suvarna News Asianet Suvarna News

ಮಧ್ಯಪ್ರದೇಶದ ‘ಆನಂದ ಇಲಾಖೆ’ ಸಿಬ್ಬಂದಿಗಳಿಗೇ ಆನಂದದ ಭಾಗ್ಯವಿಲ್ಲ!

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಜನರಲ್ಲಿ ‘ಆನಂದ’ ಪಸರಿಸಲು ‘ಆನಂದ ಇಲಾಖೆ’ಯನ್ನು ಹುಟ್ಟುಹಾಕಿತ್ತು. ಜನರಲ್ಲಿ ಆನಂದ ತರಲು ಸುಮಾರು 33 ಸಾವಿರ ‘ಆನಂದಕ’ರನ್ನೂ ನೇಮಿಸಲಾಗಿತ್ತು. ಆದರೆ ಖುದ್ದು ಈ ಆನಂದಕರಲ್ಲೇ ‘ಆನಂದ’ವಿಲ್ಲ!

No Anand to Anandaks in MP

ಭೋಪಾಲ್: ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಜನರಲ್ಲಿ ‘ಆನಂದ’ ಪಸರಿಸಲು ‘ಆನಂದ ಇಲಾಖೆ’ಯನ್ನು ಹುಟ್ಟುಹಾಕಿತ್ತು. ಜನರಲ್ಲಿ ಆನಂದ ತರಲು ಸುಮಾರು 33 ಸಾವಿರ ‘ಆನಂದಕ’ರನ್ನೂ ನೇಮಿಸಲಾಗಿತ್ತು. ಆದರೆ ಖುದ್ದು ಈ ಆನಂದಕರಲ್ಲೇ ‘ಆನಂದ’ವಿಲ್ಲ!

ಹೌದು.. ಅಚ್ಚರಿ ಎನ್ನಿಸಿದರೂ ಸತ್ಯ. ಜನರು ಸಾವಿರಾರು ಕಷ್ಟ ಕೋಟಲೆಗಳನ್ನು ಅನುಭವಿಸುತ್ತಿರುವಾಗ ಅವರನ್ನು ಹೇಗೆ ಆನಂದವಾಗಿ ಇಡುವುದು ಎಂಬುದು ಆನಂದಕರ ದೊಡ್ಡ ಸಮಸ್ಯೆಯಾದರೆ, ಇನ್ನೊಂದೆಡೆ 33 ಸಾವಿರ ಆನಂದಕರಿಗೇ ಸೂಕ್ತ ಸಂಬಳ ದೊರಕುತ್ತಿಲ್ಲ.

ಆನಂದಕರ ಜವಾಬ್ದಾರಿಯೆಂದರೆ ಜನರನ್ನು ತಬ್ಬಿಕೊಂಡು ಆನಂದಗೊಳಿಸುವುದು, ಬಸ್ಸಿನಲ್ಲಿ ಅಗತ್ಯವಿದ್ದವರಿಗೆ ಸೀಟು ಬಿಡಿಸಿಕೊಡುವುದು, ಸರ್ಕಾರದ ಯೋಜನೆ ಜನರಿಗೆ ತಲುಪುವಂತಾಗುವಂತೆ ಮಾಡುವುದು, ಸಾರ್ವಜನಿಕರ ಸರ್ಕಾರಿ ಕೆಲಸ ಮಾಡಿಸಿಕೊಡುವುದು ಇತ್ಯಾದಿ.

ಆದರೆ ಬೆಳೆ ವೈಫಲ್ಯದಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಕೆಲವು ಯೋಜನೆಗಳು ಕೇವಲ ಕಾಗದದಲ್ಲೇ ಉಳಿದಿವೆ. ಹೀಗಿದ್ದಾಗ ಜನರನ್ನು ನಾವು ಹೇಗೆ ಆನಂದದಿಂದ ಇಡುವುದು ಎಂದು ಪ್ರಶ್ನಿಸುತ್ತಾರೆ ಈಶ್ವರ ಪಾಟೀದಾರ್ ಎಂಬ ಆನಂದಕ.

Follow Us:
Download App:
  • android
  • ios