Asianet Suvarna News Asianet Suvarna News

ಮೆಟ್ರೋ ಪ್ರಯಾಣಿಕರೇ ಗಮನಿಸಿ; ಸಂಚಾರದಲ್ಲಿ ಬದಲಾವಣೆ

ನಮ್ಮ ಮೆಟ್ರೋ ಸಂಚಾರದಲ್ಲಿ ಬದಲಾವಣೆಯಾಗಲಿದೆ.  ಜಯದೇವ ವೃತ್ತದಿಂದ ಡೈರಿ ವೃತ್ತದ ವರೆಗಿನ ರೀಚ್‌ 6 ಮಾರ್ಗದ ಮೇಲು ರೈಲು ಮಾರ್ಗದ (ವಯಾಡಕ್ಟ್) ಕಾಮಗಾರಿ ಡಿ.19ರಿಂದ ಪ್ರಾರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

Namma Metro service will be differ due to construction
Author
Bengaluru, First Published Dec 19, 2018, 10:42 AM IST

ಬೆಂಗಳೂರು (ಡಿ. 19): ನಗರದ ಜಯದೇವ ವೃತ್ತದಿಂದ ಡೈರಿ ವೃತ್ತದ ವರೆಗಿನ ರೀಚ್‌ 6 ಮಾರ್ಗದ ಮೇಲು ರೈಲು ಮಾರ್ಗದ (ವಯಾಡಕ್ಟ್) ಕಾಮಗಾರಿ ಡಿ.19ರಿಂದ ಪ್ರಾರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜಯದೇವ ವೃತ್ತದಿಂದ ಬನಶಂಕರಿ ಮಾರ್ಗವಾಗಿ ಸಿಲ್‌್ಕಬೋರ್ಡ್‌ ವೃತ್ತದವರೆಗಿನ ಸವೀರ್‍ಸ್‌ ರಸ್ತೆ ಸಂಚಾರವನ್ನು ಬದಲಿಸಲಾಗಿದೆ. ಡೈರಿ ವೃತ್ತದಿಂದ ಸಿಲ್‌್ಕಬೋರ್ಡ್‌ ಕಡೆಗೆ ಹೋಗುವವರು ಗುರಪ್ಪನಪಾಳ್ಯ ವೃತ್ತದಲ್ಲಿ ಬಲಕ್ಕೆ ತಿರುಗಬೇಕು. 39ನೇ ಅಡ್ಡ ರಸ್ತೆ ಮೂಲಕ ಮುಂದೆ ಹೋಗಿ ಎಡಕ್ಕೆ ತಿರುಗಿ ಈಸ್ಟೆಂಡ್‌ ಮುಖ್ಯರಸ್ತೆಯಲ್ಲಿ ಪುನಃ ಎಡಕ್ಕೆ ತಿರುಗಿ ಮಾರೇನಹಳ್ಳಿ ರಸ್ತೆ ಮೂಲಕ ಸಿಲ್‌್ಕಬೋರ್ಡ್‌ ತಲುಪಬಹುದು.

ಡೈರಿ ವೃತ್ತದಿಂದ ಬನಶಂಕರಿಯತ್ತ ಸಂಚರಿಸುವ ವಾಹನ ಸವಾರರು ಗುರಪ್ಪನಪಾಳ್ಯದ ವೃತ್ತದಲ್ಲಿ ಬಲಕ್ಕೆ ತಿರುಗಿ 39ನೇ ಅಡ್ಡ ರಸ್ತೆ ಮೂಲಕ ಸಾಗಿ 28ನೇ ಮುಖ್ಯರಸ್ತೆಯಲ್ಲಿ ಪುನಃ ಬಲಕ್ಕೆ ತಿರುಗಿ ಮಾರೇನಹಳ್ಳಿ ರಸ್ತೆ ಮೂಲಕ ಬನಶಂಕರಿ ತಲುಪಬಹುದು. ಆದರೆ, ಜಯದೇವ ಅಂಡರ್‌ ಪಾಸ್‌ನಲ್ಲಿ ಯಾವುದೇ ಮಾರ್ಗ ಬದಲಾವಣೆ ಮಾಡಿಲ್ಲ. ಮೆಟ್ರೋ ಕಾಮ​ಗಾರಿ ಹಿನ್ನೆ​ಲೆ​ಯಲ್ಲಿ ಈ ಬದ​ಲಾ​ವಣೆ ಮಾಡ​ಲಾ​ಗಿದ್ದು, ವಾಹ​ನ ಸವಾ​ರರು ಸಹ​ಕ​ರಿ​ಸು​ವಂತೆ ಬಿಎಂಆ​ರ್‌​ಸಿ ಎಲ್‌ ತನ್ನ ಪ್ರಕ​ಟ​ಣೆ​ಯಲ್ಲಿ ಕೋರಿ​ದೆ.

ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ. ಒಣಹುಲ್ಲು ಹೊತ್ತು ಟ್ರಾಕ್ಟರ್ ಹೊರಟಿತ್ತು. ಶಾರ್ಟ್ ಸರ್ಕ್ಯೂಟ್ ಗಿ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಇಡೀ ಟ್ರಾಕ್ಟರನ್ನು ಆವರಿಸಿಕೊಳ್ಳ ತೊಡಗಿತ್ತು.ಕೂಡಲೇ ಎಚ್ಚೆತ್ತ ಚಾಲಕ ಹತ್ತಿರದಲ್ಲೇ ಇದ್ದ ಹಳ್ಳಕ್ಕೆ ಟ್ರಾಕ್ಟರ್ ಇಳಿಸಿದ್ದಾರೆ. ಒಟ್ಟಿನಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. 

Follow Us:
Download App:
  • android
  • ios