news
By Suvarna Web Desk | 09:32 PM February 12, 2018
ಬಾಹುಬಲಿ ಮಹಾಮಸ್ತಾಭಿಷೇಕ: ರೈಲ್ವೇ ಇಲಾಖೆಯಿಂದ ಹೆಚ್ಚುವರಿ ರೈಲು, ಹಲವು ವ್ಯವಸ್ಥೆ

Highlights

ಯಶವಂತಪುರ - ಶ್ರವಣಬೆಳಗೊಳ, ಶ್ರವಣಬೆಳಗೊಳ - ಹಾಸನಕ್ಕೆ ಹೆಚ್ಚುವರಿ ರೈಲು, ಮೀರಜ್‌ನಿಂದ ಹಾಸನಕ್ಕೆ ವಿಶೇಷ ರೈಲು  ವ್ಯವಸ್ಥೆ ಮಾಡಲಾಗಿದ್ದು ಫೆ.26ರವರೆಗೂ ರೈಲುಗಳು ಸಂಚರಿಸಲಿವೆ.

ಬೆಂಗಳೂರು(ಫೆ.12): ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಾಭಿಷೇಕ ಹಿನ್ನಲೆಯಲ್ಲಿ ಪ್ರಯಾಣಿಕರು, ಪ್ರವಾಸಿಗರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಹೆಚ್ಚುವರಿ ರೈಲುಗಳು ಸೇರಿದಂತೆ ಹಲವು ವ್ಯವಸ್ಥೆ  ಮಾಡಲಾಗಿದೆ.

ಯಶವಂತಪುರ - ಶ್ರವಣಬೆಳಗೊಳ, ಶ್ರವಣಬೆಳಗೊಳ - ಹಾಸನಕ್ಕೆ ಹೆಚ್ಚುವರಿ ರೈಲು, ಮೀರಜ್‌ನಿಂದ ಹಾಸನಕ್ಕೆ ವಿಶೇಷ ರೈಲು  ವ್ಯವಸ್ಥೆ ಮಾಡಲಾಗಿದ್ದು ಫೆ.26ರವರೆಗೂ ರೈಲುಗಳು ಸಂಚರಿಸಲಿವೆ. ಶ್ರವಣಬೆಳಗೊಳದಲ್ಲಿ 8 ವಿಶೇಷ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿದ್ದು ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ, ಶ್ರವಣಬೆಳಗೊಳದಲ್ಲಿ ಮಾಹಿತಿ ಫಲಕಗಳ ಅಳವಡಿಸಲಾಗಿದೆ.  

ಶ್ರವಣಬೆಳಗೊಳದಲ್ಲಿ 2 ಸಾವಿರ ಜನರು ಕೂರುವ ಶೆಲ್ಟರ್, ನಿಲ್ದಾಣದಲ್ಲಿ ಹೆಚ್ಚುವರಿ ಶೌಚಾಲಯಗಳು, ವಿಕಲಾಂಗರಿಗೆ ವೀಲ್ಹ್ ಚೇರ್, ರೈಲ್ವೆ ನಿಲ್ದಾಣಕ್ಕೆ ಬರುವ ವಾಹನಗಳಿಗೆ ಪಾರ್ಕಿಂಗ್,ಹೆಚ್ಚಿನ ಭದ್ರತಾ ಸಿಬ್ಬಂದಿ, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ, ಮೆಡಿಕಲ್ ವ್ಯವಸ್ಥೆ ಸೇರಿದಂತೆ ಪ್ರಯಾಣಿಕರಿಗೆ ಹಲವು ಅನುಕೂಲ ಕಲ್ಪಿಸಲಾಗಿದೆ.

Show Full Article


Recommended


bottom right ad