news
By Suvarna Web Desk | 04:10 PM December 07, 2017
ರಾಹುಲ್ ಗಾಂಧಿಗೆ ಭರ್ಜರಿ ಸ್ವಾಗತ; ಹುಬ್ಬಳ್ಳಿ-ಧಾರಾವಾಡದಲ್ಲಿ ಅದ್ದೂರಿ ಸಮಾವೇಶ?

Highlights

ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್​ ಗಾಂಧಿ ಮೊದಲ ಬಾರಿಗೆ ರಾಜ್ಯಕ್ಕೆ ಭೆಟಿ ನೀಡಲಿದ್ದು ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಕೆಪಿಸಿಸಿ ನಿರ್ಧರಿಸಿದೆ.

ಬೆಗಳೂರು (ಡಿ.07): ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್​ ಗಾಂಧಿ ಮೊದಲ ಬಾರಿಗೆ ರಾಜ್ಯಕ್ಕೆ ಭೆಟಿ ನೀಡಲಿದ್ದು ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಕೆಪಿಸಿಸಿ ನಿರ್ಧರಿಸಿದೆ.

ಹುಬ್ಬಳ್ಳಿ- ಧಾರವಾಡದಲ್ಲಿ ಅದ್ದೂರಿ ಸಮಾವೇಶ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು  ರಾಜ್ಯದೆಲ್ಲೆಡೆಯಿಂದ 5  ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸುವ ಬಗ್ಗೆ ತೀರ್ಮಾನಿಸಲಾಗಿದೆ.  ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ, ಟ್ರಾಫಿಕ್ ಸಮಸ್ಯೆಯಿಲ್ಲ.  ರಾಜ್ಯದ ಎಲ್ಲ ಭಾಗಗಳಿಂದಲೂ ಜನರು ಆಗಮಿಸಲು ಸುಲಭ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.

ಹುಬ್ಬಳ್ಳಿಯಲ್ಲಿ ಸಾಧ್ಯವಾಗದಿದ್ದರೆ ಚಿಕ್ಕಮಗಳೂರಿನಲ್ಲಿ ಸಮಾರಂಭ ನಡೆಸಲು ಇನ್ನೊಂದು ಚಿಂತನೆ ನಡೆಸಲಾಗಿದೆ.  ಡಿಸೆಂಬರ್ 23  ರಂದು ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ  ರಾಹುಲ್  ಗಾಂಧಿ ಆಗಮಿಸುವ ಸಾಧ್ಯತೆಯಿದ್ದು  ಆ ಕಾರ್ಯಕ್ರಮವನ್ನೇ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.   ಇದು ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಪಾಲ್ಗೊಳ್ಳುವ ಮೊದಲ ಸಮಾವೇಶವಾಗಿದ್ದು

ಎಲ್ಲಿ ಸಮಾವೇಶ ಎನ್ನುವ ಅಂತಿಮ ನಿರ್ಧಾರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟಿದ್ದು ಎಂದು ಕಾಂಗ್ರೆಸ್ ಹೇಳಿದೆ.

 

Show Full Article


Recommended


bottom right ad