Asianet Suvarna News Asianet Suvarna News

ಬಿಜೆಪಿ ಬಿಟ್ಟು ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದ ಪಿಡಿಪಿಗೆ ಮುಖಭಂಗ

ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನ ಸರ್ಕಾರವನ್ನ ಪತನಗೊಳಿಸಿದ ಬೆನ್ನಲ್ಲಿಯೇ ಕಾಂಗ್ರೆಸ್ ನೊಂದಿಗೆ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದ ಪಿಡಿಪಿಗೆ ಭಾರಿ ಮುಖಭಂಗವಾಗಿದೆ.

Jammu and Kashmir Governor passed an order dissolving the Legislative Assembly
Author
Bengaluru, First Published Nov 21, 2018, 10:04 PM IST

ಶ್ರೀನಗರ, [ನ.21]: ಜಮ್ಮು-ಕಾಶ್ಮೀರದ ವಿಧಾನಸಭೆಯನ್ನ ರಾಜ್ಯಪಾಲ ಸತ್ಯಪಾಲ್​​ ಮಲಿಕ್ ವಿಸರ್ಜಿಸಿದ್ದಾರೆ, ಇದ್ರಿಂದ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಕನಸು ಕಂಡಿದ್ದ ಪಿಡಿಪಿಗೆ ನಿರಾಸೆಯಾಗಿದೆ.

 ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಬದ್ಧ ವೈರಿಗಳೇ ಎಂದು ಬಿಂಬಿತವಾಗಿದ್ದ ಕಾಂಗ್ರೆಸ್‌ ಮತ್ತು ಪಿಡಿಪಿ ಮತ್ತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿದ್ದವು. ಈ ಮೈತ್ರಿಗೆ ನ್ಯಾಷನಲ್‌ ಕಾನ್ಫರೆನ್ಸ್ ಕೂಡ ಬೆಂಬಲ ವ್ಯಕ್ತಪಡಿಸಿತ್ತು. 

ಅದ್ರಂತೆ ಇಂದು ಸರ್ಕಾರ ರಚನೆ ಮಾಡುವ ಸಂಬಂಧ ರಾಜ್ಯಪಾಲರಿಗೆ ಪಿಡಿಪಿ ಪತ್ರ ಬರೆದಿತ್ತು. 87 ಶಾಸಕ ಬಲವನ್ನು ಹೊಂದಿರುವ ವಿಧಾನಸಭೆಯಲ್ಲಿ ಪಿಡಿಪಿ 29 ಶಾಸಕರ ಬಲವನ್ನು ಹೊಂದಿದೆ. 

ಕಾಂಗ್ರೆಸ್ ಮತ್ತು ರಾಷ್ಟ್ರೀಯ ಸಮ್ಮೇಳನವು ಪಿಡಿಪಿಯೊಂದಿಗೆ ಸರ್ಕಾರವನ್ನು ರೂಪಿಸಲು ಒಪ್ಪಿಕೊಂಡಿದ್ದು, ಎನ್​​ಸಿಪಿ 15 ಶಾಸಕರು ಮತ್ತು ಕಾಂಗ್ರೆಸ್​ 12 ಶಾಸಕರನ್ನು ಹೊಂದಿದೆ. ಈ ಮೂಲಕ 56 ಶಾಸಕರ ಬೆಂಬಲವನ್ನು ಹೊಂದಿದ್ದೇವೆ. ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯಪಾಲರಿಗೆ ಪಿಡಿಪಿ ಪತ್ರ ಬರೆದಿತ್ತು.

ಆದ್ರೆ ಇದ್ಯಾವುದನ್ನ ಪರಿಗಣಿಸದ ರಾಜ್ಯಪಾಲ ಸತ್ಯಪಾಲ್​​ ಮಲಿಕ್ ಅವರು  ಜಮ್ಮು-ಕಾಶ್ಮೀರದ ವಿಧಾನಸಭೆಯನ್ನ ವಿಸರ್ಜಿಸಿದ್ದಾರೆ. ಇದ್ರಿಂದ ಮೈತ್ರಿ ಪಕ್ಷಗಳಿಗೆ ಮುಖಭಂಗವಾಗಿದೆ.

ಕಾಶ್ಮೀರದಲ್ಲಿ ಅಧಿಕಾರದಲ್ಲಿದ್ದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಜೂನ್ 16ರಂದು ಪತನಗೊಂಡಿತ್ತು. ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಸರ್ಕಾರ ಪತನಗೊಂಡಿತ್ತು.

Follow Us:
Download App:
  • android
  • ios