news
By Suvarna Web Desk | 05:06 AM March 19, 2017
ಏನಿದು ಭಾರತೀಯರ ಬಗ್ಗೆ ಶಾಕಿಂಗ್ ಸುದ್ದಿ !

Highlights

ವೈದ್ಯರು ಕಾರ್ಯನಿರ್ವಹಿಸುವ ಫಿಟ್'ಬಿಟ್ ಎಂಬ ಸ್ವಯಂಸೇವಾ ಸಂಸ್ಥೆ  ವಿಶ್ವದ 18 ದೇಶಗಳ ಆಯ್ದ ಜನರನ್ನು ಸಮೀಕ್ಷೆ ನಡೆಸಿ ಈ ಮಾಹಿತಿ ನೀಡಿದೆ.

ನವದೆಹಲಿ(ಮಾ.17): ವರದಿಯೊಂದು ಭಾರತೀಯರ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದೆ. ಅದೇನಂತೀರಾ ನಿದ್ರೆಗೆ ಸಂಬಂಧಿಸಿದ ವಿಷಯವನ್ನು ಸಂಶೋಧನಾ ಸಂಸ್ಥೆಯೊಂದು ವರದಿಯ ಮೂಲಕ ತಿಳಿಸಿದೆ.

ವಿಶ್ವದಲ್ಲಿಯೇ ಅತೀ ಹೆಚ್ಚು ಕಡಿಮೆ ನಿದ್ದೆ ಮಾಡುವವರಲ್ಲಿ ಭಾರತೀಯರು ಎರಡನೆ ಸ್ಥಾನದಲ್ಲಿದ್ದಾರೆ. ದಿನಕ್ಕೆ ಭಾರತೀಯರ ನಿತ್ಯದ ಕನಿಷ್ಠ ನಿದ್ರೆಯ ಸರಾಸರಿ ಅವಧಿ 6.55 ಗಂಟೆ.ವಿಶ್ವದಲ್ಲಿ ಅತೀ ಹೆಚ್ಚು ನಿದ್ರಿಸುವವರ ದೇಶ ನ್ಯೂಜಿಲೆಂಡ್ ಅವರು ನಿದ್ರಿಸುವ ಅವಧಿ 7.25 ಗಂಟೆ, ಅದರ ನಂತರದ ಸ್ಥಾನದಲ್ಲಿ ಇಂಗ್ಲೆಂಡ್ 7.16, ಆಸ್ಟ್ರೇಲಿಯಾ 7.16 ಗಂಟೆ ಅವಧಿ ನಿದ್ರಿಸುತ್ತಾರೆ.  

ಜಪಾನ್ ದೇಶದವರು ಕಡಿಮೆ ನಿದ್ದೆ ಮಾಡುವವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜಪಾನಿಗಳು ನಿತ್ಯ ನಿದ್ರಿಸುವ ಸರಾಸರಿ ಅವಧಿ 7.16 ಗಂಟೆ. ವೈದ್ಯರು ಕಾರ್ಯನಿರ್ವಹಿಸುವ ಫಿಟ್'ಬಿಟ್ ಎಂಬ ಸ್ವಯಂಸೇವಾ ಸಂಸ್ಥೆ  ವಿಶ್ವದ 18 ದೇಶಗಳ ಆಯ್ದ ಜನರನ್ನು ಸಮೀಕ್ಷೆ ನಡೆಸಿ ಈ ಮಾಹಿತಿ ನೀಡಿದೆ. ಅಮೆರಿಕಾ ಹಾಗೂ ಯುರೋಪಿಯನ್ ದೇಶದವರಿಗಿಂತ ಏಷ್ಯನ್ ದೇಶದವರು ಕಡಿಮೆ ನಿದ್ದೆ ಮಾಡುತ್ತಾರೆ. ನಿತ್ಯ ಪಥ್ಯ,ವ್ಯಾಯಾಮದಿಂದ ಆರೋಗ್ಯವು ಉತ್ತಮವಾಗಿ ಉತ್ತಮ ನಿದ್ರೆ ಮಾಡಬಹುದು ಜೊತೆಗೆ ಧೀರ್ಘಕಾಲ ಬಾಧಿಸುವ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಸಮೀಕ್ಷೆಯ ವರದಿ ತಿಳಿಸಿದೆ.

 

Show Full Article


Recommended


bottom right ad