Asianet Suvarna News Asianet Suvarna News

ಡಿಜಿಟಲ್ ಪಾವತಿ ಸೇವೆಗೆ ಹೊಸ ಸೇರ್ಪಡೆ: ಗೂಗಲ್ ತೇಝ್’ಗೆ ಚಾಲನೆ

ಭಾರತೀಯ ಮಾರುಕಟ್ಟೆ ಹಾಗೂ ಇಲ್ಲಿನ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಗೂಗಲ್ ಅಭಿವೃದ್ಧಿ ಪಡಿಸಿರುವ ಡಿಜಿಟಲ್ ಪಾವತಿ ಸೇವೆ ‘ತೇಝ್’ ಗೆ ಇಂದು ಹಣಕಾಸು ಸಚಿವ ಅರುಣ್ ಜೇಟ್ಲೀ ಚಾಲನೆ ನೀಡಿದ್ದಾರೆ.

Digital payment Service Google Tez Launched

ನವದೆಹಲಿ: ಭಾರತೀಯ ಮಾರುಕಟ್ಟೆ ಹಾಗೂ ಇಲ್ಲಿನ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಗೂಗಲ್ ಅಭಿವೃದ್ಧಿ ಪಡಿಸಿರುವ ಡಿಜಿಟಲ್ ಪಾವತಿ ಸೇವೆ ‘ತೇಝ್’ ಗೆ ಇಂದು ಹಣಕಾಸು ಸಚಿವ ಅರುಣ್ ಜೇಟ್ಲೀ ಚಾಲನೆ ನೀಡಿದ್ದಾರೆ.

ತೇಝ್ ಮೊಬೈಲ್ ಅಪ್ಲಿಕೇಶನ್ ಅಂಡ್ರಾಯಿಡ್ ಹಾಗೂ ಐಓಎಸ್ ಫೋನ್’ಗಳಿಗೆ ಲಭ್ಯವಿದ್ದು, ಬಳಕೆದಾರರು ತಕ್ಷಣವಾಗಿ ತಮ್ಮ ಬ್ಯಾಂಕು ಖಾತೆಗಳಿಂದ ಹಣವನ್ನು ಇತರರಿಗೆ ವರ್ಗಾಯಿಸಬಹುದಾಗಿದೆ.

Digital payment Service Google Tez Launched

ಗೂಗಲ್ ತೇಝ್ ಸುರಕ್ಷಿತವಾಗಿದ್ದು, ಭಾರತದ ಬಹುತೇಕ ಬ್ಯಾಂಕುಗಳು ಖಾತೆಗಳನ್ನು ಸಂಯೋಜಿಸಬಹುದಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಕನ್ನಡ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಹೆಲ್ಪ್ ಸೆಂಟರ್ ಕೂಡಾ ಲಭ್ಯವಿದೆಯೆಂದು ತೇಜ್ ವೆಬ್’ಸೈಟ್ ಹೇಳಿಕೊಂಡಿದೆ.

ಡಿಜಿಟಲ್ ಪಾವತಿ ಸೇವೆ ದಗಿಸುವ ಆ್ಯಪ್‌ಗಳಲ್ಲಿ ಬಳಕೆದಾರರು ತಮ್ ಬ್ಯಾಂಕ್ ಖಾತೆಯನ್ನು ಸಂಯೋಜಿಸಬೇಕಾಗುತ್ತದೆ. ಬಳಿಕ ಹಣ ಪಾವತಿಸಬೇಕಾದವರಿಂದ ವಿಶಿಷ್ಟ ಕೋಡ್ ಪಡೆದು ಅವರಿಗೆ ತಕ್ಷಣ ಹಣ ವರ್ಗಾಯಿಸಬಹುದಾಗಿದೆ.

Follow Us:
Download App:
  • android
  • ios