news
By Suvarna Web desk | 06:41 PM October 12, 2017
ದೆಹಲಿಯಲ್ಲಿ ಸಿಎಂ ಕಾರನ್ನೇ ಅಪಹರಿಸಿದ ಕಳ್ಳರು

Highlights

ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಅವರು ಬ್ಲ್ಯೂ ವ್ಯಾಗನಾರ್ ಕಾರನ್ನು ಬಳಸುತ್ತಿದ್ದರು.

ನವದೆಹಲಿ(ಅ.12): ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕಾರನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ದೆಹಲಿ ಸಚಿವಾಲಯದ ಕಟ್ಟಡದ ಬಳಿ ನಿಂತಿದ್ದ ಬ್ಲ್ಯೂ ವ್ಯಾಗನಾರ್​​  ಕಾರನ್ನು ಕಳ್ಳರು ಕಳವು ಮಾಡಿದ್ದಾರೆ. ಕಾರು ಕಳವಾಗಿರುವ ಬಗ್ಗೆ ದೆಹಲಿ ಪೊಲೀಸರು ಎಫ್'ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಅವರು ಬ್ಲ್ಯೂ ವ್ಯಾಗನಾರ್ ಕಾರನ್ನು ಬಳಸುತ್ತಿದ್ದರು. ದೆಹಲಿ ಪೊಲೀಸರ ವಿರುದ್ಧದ ಪ್ರತಿಭಟನೆಯಲ್ಲಿ ಇದೇ ಕಾರನ್ನು ಬಳಸಿದ್ದ ಕೇಜ್ರಿವಾಲ್ ಅಲ್ಲಿಯೇ ಮಲಗಿದ್ದರು. ಇದು ಒಂದು ರೀತಿಯಲ್ಲಿ ಅವರಿಗೆ ಅದೃಷ್ಟದ ಕಾರಾಗಿತ್ತು.

Show Full Article


Recommended


bottom right ad