Asianet Suvarna News Asianet Suvarna News

‘ಮೇ ಏಕ್ ದಿನ್ ಆವುಂಗಾ’: ಸೈನಿಕನ ಹಾಡು, ತಲುಪಿಸಿ ಆತನ ಗೂಡು!

ದೇಶ ಸೇವೆಯಲ್ಲಿ ಯಾವತ್ತೂ ಮುಂಚೂಣಿಯಲ್ಲಿ ಯೋಧ| ತನ್ನ ಕಂಠಸಿರಿಯಿಂದ ದೇಶಕ್ಕೆ ಸಂದೇಶ ತಲುಪಿಸಿದ ಸೈನಿಕ| ಬಿಎಸ್ ಎಫ್ ಯೋಧ ಸುರಿಂಧರ್ ಸಿಂಗ್ ವಿಡಿಯೋ ವೈರಲ್| ಬಾರ್ಡರ್ ಚಿತ್ರದ ‘ಸಂದೆಸೆ ಆತೆ ಹೇ...’ ಹಾಡು| ಯೋಧನ ಕಂಠಸಿರಿಗೆ ತಲೆದೂಗಿದ ಅರವಿಂದ್ ಕೇಜ್ರಿವಾಲ್ 

BSF Jawan Sings Sandese Aate Hain Song Goes Viral
Author
Bengaluru, First Published Jan 15, 2019, 1:23 PM IST

ನವದೆಹಲಿ(ಜ.15): ಸೈನಿಕನೇ ಹಾಗೆ. ಗಡಿಯಲ್ಲಿ ಬಂದೂಕು ಹಿಡಿದು ದೇಶ ಸೇವೆ ಮಾಡ್ತಾನೆ. ತನ್ನ ಕಂಠದಿಂದ ಸುಮಧುರ ಹಾಡೊಂದನ್ನು ಹಾಡಿ ಸಂಗೀತ ಸೇವೆಯನ್ನೂ ಮಾಡಬಲ್ಲ. ಒಟ್ಟಿನಲ್ಲಿ ದೇಶಕ್ಕೆ ತನ್ನ ಸರ್ವಸ್ವವನ್ನೂ ಧಾರೆ ಎರೆಯುವುದು ಹೇಗೆಂದು ಆತನಿಗೆ ಗೊತ್ತು.

ಅದರಂತೆ ಹಿಂದಿ ಚಲನಚಿತ್ರ ಬಾರ್ಡರ್‌ನ ಜನಪ್ರಿಯ ಹಾಡು ‘ಸಂದೆಸೆ ಆತೆ ಹೇ...’ ಹಾಡನ್ನು ಬಿಎಸ್‌ಎಫ್ ಯೋಧನೋರ್ವ ಹಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಹೌದು, ‘ಸಂದೆಸೆ ಆತೆ ಹೇ...’ ಹಾಡನ್ನು ಬಿಎಸ್‌ಎಫ್ ಯೋಧ ಸುರಿಂಧರ್ ಸಿಂಗ್ ಎಂಬಾತ ಹಾಡಿದ್ದು, ಸಹೋದ್ಯೋಗಿಗಳು ಆತನೊಂದಿಗೆ ಧ್ವನಿಗೂಡಿಸಿದ ವಿಡಯೋ ವೈರಲ್ ಆಗಿದೆ.

ಅಷ್ಟೇ ಅಲ್ಲ ಈ ಯೋಧನ ಕಂಠಸಿರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಮರುಳಾಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು ಯೋಧ ಸುರಿಂಧರ್ ಸಿಂಗ್ ಕಳೆದ ವರ್ಷ ಜನಪ್ರಿಯ ಮ್ಯೂಸಿಕ್ ಶೋ ಇಂಡಿಯನ್ ಐಡಲ್‌ನಲ್ಲಿ ಪ್ಲಾಗೊಂಡಿದ್ದರು.

Follow Us:
Download App:
  • android
  • ios