Asianet Suvarna News Asianet Suvarna News

ಭಯದಿಂದ ಬಿಡುಗಡೆ ಹೊಂದುವುದು ಹೇಗೆ

ಮುಂದೆ ಏನಾಗುವ ಸಾಧ್ಯತೆ ಇದೆ ಎಂಬುದು ನಮ್ಮ ಮನಸ್ಸಿನಲ್ಲಿ ಸಾವಿರಾರು ರೂಪಗಳನ್ನು ಪಡೆದುಕೊಂಡು ನಮ್ಮನ್ನು ಭಯಕ್ಕೆ ತಳ್ಳಬಹುದು. ಕೊನೆಗೆ ಇವುಗಳಲ್ಲಿ ಒಂದೂ ಸಂಭವಿಸದೆ ಹೋಗಬಹುದು. ಆಗ ಭಯಪಟ್ಟಿದ್ದೆಲ್ಲ ವ್ಯರ್ಥ. ಒಂದು ಸಮೀಕ್ಷೆ ಮಾಡಿ ನೋಡಿ. ನೀವು ಯಾವುದರ ಬಗ್ಗೆ ಬಹಳ ಭಯಪಟ್ಟಿದ್ದೀರೋ ಅಂತಹ 100 ಸಂಗತಿಗಳನ್ನು ಬರೆದಿಡಿ.

Sadguru Jaggi column

ನಾನು ಸೋಲುತ್ತೇನೆ, ನನಗೆ ಏನಾದರೂ ಆಗಿಬಿಡುತ್ತದೆ, ನನ್ನ ಹೆಂಡತಿ ಮಕ್ಕಳಿಗೆ ಏನಾದರೂ ಆಗಬಹುದು, ಬಿಸಿನೆಸ್‌ನಲ್ಲಿ ನಷ್ಟವಾಗ ಬಹುದು.. ಹೀಗೆ ಹಲವಾರು ಭಯಗಳು ಬಹಳಷ್ಟು ಜನರನ್ನು ಸದಾ ಕಾಡುತ್ತಿರುತ್ತವೆ. ಭಯದಿಂದ ಬಿಡುಗಡೆ ಹೊಂದುವುದು ಹೇಗೆಂದು ಅವರು ಕೇಳುತ್ತಿರುತ್ತಾರೆ. ಉತ್ತರ ಏನು ಗೊತ್ತಾ? ಯಾವುದು ಅಸ್ತಿತ್ವದಲ್ಲಿಲ್ಲವೋ ಅದರಿಂದ ಬಿಡುಗಡೆ ಹೊಂದುವ ಅಗತ್ಯವೇ ಇಲ್ಲ! ಭಯ ಪಡುವವರು ಜೀವನದ ಪ್ರತಿ ಕ್ಷಣದಲ್ಲೂ ಭಯ ಪಡುತ್ತಿರುವುದಿಲ್ಲ. ಭಯವಿಲ್ಲದ ಸಮಯದಲ್ಲಿ ನಿಮ್ಮ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಗಮನಿಸಿ ನೋಡಿ. ಅದೇ ಮನಸ್ಥಿತಿಯಲ್ಲಿ ಯಾವಾಗಲೂ ಇರುವುದಕ್ಕೆ ಪ್ರಯತ್ನ ಮಾಡಿ. ಆಗ ಭಯ ದೂರವಾಗುತ್ತದೆ.

ಭಯಕ್ಕೆ ನಿಜವಾದ ಕಾರಣ ನಮ್ಮ ಕಲ್ಪನೆಗಳು. ಇವು ಬರೀ ಕಲ್ಪನೆಗಳಷ್ಟೇ ಅಲ್ಲ, ವಿಪರೀತ ಕಲ್ಪನೆಗಳು. ಹಾಗಾಗಿ ಭಯಪಡದೆ ಇರಬೇಕು ಅಂದರೆ ಅದಕ್ಕೆ ಏನೂ ಮಾಡಬೇಕಿಲ್ಲ. ಅನಗತ್ಯವಾಗಿ ಏನೇನನ್ನೋ ಕಲ್ಪಿಸಿ ಕೊಳ್ಳುವುದನ್ನು ಬಿಟ್ಟರೆ ಸಾಕು. ಮುಂದೆ ಏನಾಗುವ ಸಾಧ್ಯತೆ ಇದೆ ಎಂಬುದು ನಮ್ಮ ಮನಸ್ಸಿನಲ್ಲಿ ಸಾವಿರಾರು ರೂಪಗಳನ್ನು ಪಡೆದುಕೊಂಡು ನಮ್ಮನ್ನು ಭಯಕ್ಕೆ ತಳ್ಳಬಹುದು. ಕೊನೆಗೆ ಇವುಗಳಲ್ಲಿ ಒಂದೂ ಸಂಭವಿಸದೆ ಹೋಗಬಹುದು. ಆಗ ಭಯಪಟ್ಟಿದ್ದೆಲ್ಲ ವ್ಯರ್ಥ. ಒಂದು ಸಮೀಕ್ಷೆ ಮಾಡಿ ನೋಡಿ. ನೀವು ಯಾವುದರ ಬಗ್ಗೆ ಬಹಳ ಭಯಪಟ್ಟಿದ್ದೀರೋ ಅಂತಹ 100 ಸಂಗತಿಗಳನ್ನು ಬರೆದಿಡಿ.

ಒಂದು ವರ್ಷದ ನಂತರ ಅವುಗಳನ್ನು ಓದುತ್ತಾ ಹೋಗಿ. ಆಗ 99 ಸಂಗತಿಗಳು ಸಂಭವಿಸಲೇ ಇಲ್ಲ ಎಂಬುದು ನಿಮಗೆ ಕಾಣಿಸುತ್ತದೆ! ನನ್ನ ಸಲಹೆ ಏನೆಂದರೆ, ಭಯವನ್ನು ಎಂಜಾಯ್ ಮಾಡಿ. ಹಾರರ್ ಸಿನಿಮಾಗಳನ್ನು ನೋಡಿ ಖುಷಿಪಡು ವುದಿಲ್ಲವೇ, ಹಾಗೆ. ಆದರೆ, ಮನಸ್ಸಿನಲ್ಲಿ ಹಾರರ್ ಸಿನಿಮಾಗಳನ್ನು ನಿರ್ಮಿಸಲು ಹೋಗಬೇಡಿ. ಅದರ ಬದಲು ಲವ್ ಸ್ಟೋರಿ, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳನ್ನು ನಿರ್ಮಿಸಿ. ಇಂತಹ ಬೇರೆ ಬೇರೆ ರೀತಿಯ ಐದೈದು ನಿಮಿಷದ ಸಿನಿಮಾಗಳನ್ನು ಮನಸ್ಸಿನಲ್ಲೇ ಸೃಷ್ಟಿ ಮಾಡಿ. ಇದಕ್ಕೆ ಯಾವುದೇ ಖರ್ಚಿಲ್ಲ. ಪುಕ್ಕಟೆ ಸಿನಿಮಾ ಮಾಡುವಾಗ ಹಾರರ್ ಸಿನಿಮಾ ಮಾಡಿ ಏಕೆ ಮನಸ್ಸಿಗೆ ನಷ್ಟ ಮಾಡಿ ಕೊಳ್ಳುತ್ತೀರಿ. ಅದರ ಬದಲು ಮನಸ್ಸಿಗೆ ಖುಷಿ ನೀಡುವ ಸಿನಿಮಾ ತಯಾರಿಸಿ ನೋಡಿ. ನೆಮ್ಮದಿಯಾಗಿರುತ್ತೀರಿ. ಭಯದಿಂದ ದೂರವಾಗುತ್ತೀರಿ

(ಲೇಖನ: ಸದ್ಗುರು ಜಗ್ಗಿ)

Follow Us:
Download App:
  • android
  • ios