life
By Suvarna Web desk | 08:00 PM December 12, 2017
ಭಾರತದಲ್ಲಿ ಸೆಕ್ಸ್ ವ್ಯಾಮೋಹ ಯಾವ ರಾಜ್ಯದವರಿಗೆ ಹೆಚ್ಚು? ಬೆಂಗಳೂರಿಗರು ಯಾವ ಸ್ಥಾನದಲ್ಲಿದ್ದಾರೆ ಗೊತ್ತೆ ?

Highlights

ವರ್ಷದಿಂದ ವರ್ಷಕ್ಕೆ ಏರುತ್ತಿರುವ ಉತ್ಪನ್ನಗಳ ಮಾರಾಟದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಹಿಂದೆ ಬಿದ್ದಿಲ್ಲ.

ಇತ್ತೀಚಿಗಷ್ಟೆ ಕೇಂದ್ರ ವಾರ್ತಾ ಮತ್ತು ಮಾಹಿತಿ ಪ್ರಸಾರ ಸಚಿವಾಲಯ ಟಿವಿ ಚಾನಲ್'ಗಳಿಗೆ ಪ್ರೈಮ್ ಟೈಮ್'ಗಳಲ್ಲಿ (ರಾತ್ರಿ 10ರಿಂದ ಬೆಳಿಗ್ಗೆ 6) ಕಾಂಡೋಮ್ ಜಾಹಿರಾತುಗಳನ್ನು ಸೀಮಿತಗೊಳಿಸುವಂತೆ ಆದೇಶ ನೀಡಿತ್ತು.

ಇತ್ತೀಚಿಗೆ ಕಾಂಡೋಮ್ ಮಾರಾಟ ಸಂಸ್ಥೆಯೊಂದು ಲೈಂಗಿಕ ಉತ್ಪನ್ನಗಳ ಖರೀದಿಯ ಆಧಾರದ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಲೈಂಗಿಕ ಆಸಕ್ತಿ ಇರುವವರಿದ್ದಾರೆ. 2ನೇ ರಾಜ್ಯ ಕರ್ನಾಟಕ. ಲೈಂಗಿಕ ಉತ್ಪನ್ನಗಳನ್ನು ಕೊಳ್ಳುವ ರಾಜ್ಯಗಳಲ್ಲಿ ನಮ್ಮ ರಾಜ್ಯದವರು ಕೂಡ ಹಿಂದೆ ಬಿದ್ದಿಲ್ಲ. ವರ್ಷದಿಂದ ವರ್ಷಕ್ಕೆ ಏರುತ್ತಿರುವ ಉತ್ಪನ್ನಗಳ ಮಾರಾಟದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಹಿಂದೆ ಬಿದ್ದಿಲ್ಲ. 2600 ಕೋಟಿ ರೂ. ಮೌಲ್ಯದ ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗಿವೆ. ಅಲ್ಲದೆ ಭಾರತದಲ್ಲಿ ನಿತ್ಯ ಸೆಕ್ಸ್'ನಲ್ಲಿ ತೊಡಗುವವರ ಸಂಖ್ಯೆ 10 ಕೋಟಿಗೂ ಮೀರಿದ್ದರೆ, ಬಹುತೇಕರು ರಾತ್ರಿ ವೇಳೆಯಲ್ಲಿಯೇ ಸೆಕ್ಸ್ ಬಯಸುತ್ತಾರೆ.      

ಪ್ರೇಮಿಗಳ ದಿನದಂದು ಹೆಚ್ಚು ಮಾರಾಟ

ಈ ರೀತಿಯ ಉತ್ಪನ್ನಗಳು  ಹಬ್ಬಗಳ ಸಮಯದಲ್ಲಿ ಅದರಲ್ಲೂ ನವರಾತ್ರಿ, ಪ್ರೇಮಿಗಳ ದಿನಗಳ ಸಮಯದಲ್ಲಿ ಹೆಚ್ಚಾಗಿ ಮಾರಾಟವಾಗುತ್ತದೆ. ಮೆಟ್ರೋ ನಗರಗಳಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಮೆಟ್ರೋಯೇತರ ಪಟ್ಟಣಗಳಲ್ಲಿ ಕರ್ನಾಟಕದ ಬಳ್ಳಾರಿ ಲೈಂಗಿಕ ಉತ್ಪನ್ನಗಳನ್ನು ಕೊಂಡುಕೊಳ್ಳುವುದರಲ್ಲಿ 7ನೇ ಸ್ಥಾನದಲ್ಲಿದೆ.

ಉತ್ಪನ್ನಗಳಲ್ಲಿ  ಲೈಂಗಿಕ ಶಕ್ತಿ ಹೆಚ್ಚಿಸುವ ತೈಲಗಳು ಹೆಚ್ಚು ಮಾರಾಟವಾಗುತ್ತವೆ. ಕಾಂಡೋಮ್'ಗಳ ಮಾರಾಟ 10ನೇ ಸ್ಥಾನದಲ್ಲಿದೆ. ವಿವಿಧ ರೀತಿಯ ಲೋಷನ್'ಗಳು, ಪ್ರಚೋದನೆ ಹೆಚ್ಚಿಸುವ ಉತ್ಪನ್ನಗಳು ಹಾಗೂ ಆಟಿಕೆ ವಸ್ತುಗಳು ಉಳಿದ ಸ್ಥಾನದಲ್ಲಿವೆ.

Show Full Article


Recommended


bottom right ad