Asianet Suvarna News Asianet Suvarna News

ಉಪ್ಪನ್ನು ಅಡುಗೆಗೆ ಮಾತ್ರವಲ್ಲ, ಬೇರೆ ರೀತಿಯಲ್ಲಿ ಹೇಗ್ಹೇಗೆ ಬಳಸಿಕೊಳ್ಳಬಹುದು ಗೊತ್ತಾ?

ಉಪ್ಪನ್ನು ರುಚಿಗೆ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂಬುದು ಗೊತ್ತು. ಕೇವಲ ಹಲ್ಲು, ಪಾತ್ರೆ,ಪಗಡುಗಳನ್ನೂ ಸ್ವಚ್ಛಗೊಳಿಸಲು ಅಲ್ಲದೇ ಬೇರೆ ಬೇರೆ ರೀತಿಯಲ್ಲಿ ಹೇಗೆ ಬಳಸುತ್ತಾರೆಂಬುದು ಗೊತ್ತಾ?
 

Multi Utilisation of Salt
ಬೆಂಗಳೂರು (ಡಿ.21):ಉಪ್ಪನ್ನು ರುಚಿಗೆ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂಬುದು ಗೊತ್ತು. ಕೇವಲ ಹಲ್ಲು, ಪಾತ್ರೆ,ಪಗಡುಗಳನ್ನೂ ಸ್ವಚ್ಛಗೊಳಿಸಲು ಅಲ್ಲದೇ ಬೇರೆ ಬೇರೆ ರೀತಿಯಲ್ಲಿ ಹೇಗೆ ಬಳಸುತ್ತಾರೆಂಬುದು ಗೊತ್ತಾ?

* ಉಪ್ಪಿನ ಜತೆ ಹುಣಸೇಹುಳಿ ಬೆರೆಸಿ ತಾಮ್ರ, ಹಿತ್ತಾಳೆ ಪಾತ್ರೆ ತಿಕ್ಕಿದರೆ ಫಳ ಫಳ ಹೊಳೆಯುತ್ತದೆ.
* ಉಪ್ಪನ್ನು  ವಿನೆಗರ್ ಜತೆ ಬಳಸಿ ತಿಕ್ಕಿದರೆ ಪಾತ್ರೆಗಳ ಹೊಳಪು ಹೆಚ್ಚುತ್ತದೆ.
* ಪಾತ್ರೆ ತೊಳೆವ ಸೋಪ್ ದ್ರಾವಣದಲ್ಲಿ ಉಪ್ಪು ಸೇರಿಸಿ ಪೋರ್ಸಿಲೈನ್, ಗಾಜಿನ ಪಾತ್ರೆಗಳನ್ನು ತೊಳೆದರೆ ಹೊಳಪು ಹೆಚ್ಚುತ್ತದೆ.

* ಬಿಸಿನೀರಿಗೆ ಉಪ್ಪು ಹಾಕಿ ನಿತ್ಯ ಸಿಂಕ್ ತೊಳೆದರೆ ಎಣ್ಣೆ ಪಸೆ, ಕೊಳೆ ನಿವಾರಣೆಯಾಗುತ್ತದೆ.

* ಟೂತ್‌’ಪೇಸ್ಟಿಗೆ ಸ್ವಲ್ಪ ಉಪ್ಪು ಬೆರೆಸಿ ಬೆಳ್ಳಿಯ ಪಾತ್ರೆ ತಿಕ್ಕಿದರೆ ಹೊಳಪು ಮೂಡುತ್ತದೆ.

* ನೆಲ ಒರೆಸುವಾಗ ನೀರಿಗೆ ಉಪ್ಪು ಸೇರಿಸಿ ಒರೆಸಿದರೆ ನೆಲ ಶುಭ್ರವಾಗುವುದರ ಜತೆಗೆ ನೊಣ, ಕ್ರಿಮಿಕೀಟಗಳು ಹರಿದಾಡುವುದಿಲ್ಲ.
* ಕಾಫಿ ಹಾಗೂ ಟೀ ಕಲೆಗಳು ಕಪ್‌ನಲ್ಲಿದ್ದರೆ,ಉಪ್ಪಿ ಹಾಕಿ ತಿಕ್ಕಿ.
* ನೆಲದ ಮೇಲೆ ಉಂಟಾದ ಕಲೆ ತೆಗೆಯಲು ಉಪ್ಪು ಮಿಶ್ರಿತ ಸೋಪು ದ್ರಾವಣ ಬಳಸಿದರೆ ಶೀಘ್ರ ಕಲೆ ನಿವಾರಣೆಯಾಗುತ್ತದೆ.
* ಕಬ್ಬಿಣದ ವಸ್ತುಗಳು ತುಕ್ಕು ಹಿಡಿದರೆ, ಉಪ್ಪಿನಿಂದ ತಿಕ್ಕಿ ತೊಳೆದರೆ ಸ್ವಚ್ಛವಾಗುತ್ತದೆ.
* ಕುಕ್ಕರ್ ತಳ ಕಪ್ಪಾದರೂ ಉಪ್ಪಿನಲ್ಲಿ ತಿಕ್ಕಬಹುದು.

 

Follow Us:
Download App:
  • android
  • ios