Asianet Suvarna News Asianet Suvarna News

ಸೌಂದರ್ಯ ವರ್ಧಕ ಬೆಳ್ಳುಳ್ಳಿ...ಬ್ಯೂಟಿ ಹ್ಯಾಕ್!

ಮನೆಯಲ್ಲೇ ಸಿಗೋ ಮದ್ದು ಬೆಳ್ಳುಳ್ಳಿ. ಸಿಕ್ಕಾಪಟ್ಟೆ ಔಷಧೀಯ ಗುಣಗಳಿರುವ ಈ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚೆಚ್ಚು ಬಳಸಬೇಕು. ಇದು ಸೌಂದರ್ಯ ವರ್ಧಕವೂ ಹೌದು. ಹೇಗೆ? 

Garlic for beauty hack
Author
Bengaluru, First Published Nov 17, 2018, 1:39 PM IST

ಅಡುಗೆಗೆ ಹಾಕಿರುವ ಬೆಳ್ಳುಳ್ಳಿಯನ್ನು ಎತ್ತಿಡುವ ಮಂದಿ ಇದ್ದಾರೆ. ಇನ್ನು ಕೆಲವರಂತು ಇದನ್ನು ಅಡುಗೆಗೆ ಬಳಸುವುದೇ ಇಲ್ಲ. ಸಿಕ್ಕಾಪಟ್ಟೆ ಔಷಧೀಯ ಗುಣವಿರೋ ಬೆಳ್ಳುಳ್ಳಿ ಕಫ, ಉದರ ಸಂಬಂಧಿ ರೋಗಗಳಿಗೆ ಮಾತ್ರವಲ್ಲ, ತುರಿಕೆ, ಕಜ್ಜಿ, ಮೊಡವೆಯಂಥ ಚರ್ಮ ಸಂಬಂಧಿ ಸಮಸ್ಯೆಗಳಿಗೂ ಮದ್ದಾಗಬಹುದು. ಹೇಗೆ?

  • ಮುಖದ ತುಂಬ ಮೊಡವೆಗಳಿಗೆ ಒಂದು ಎಸಳು ಬೆಳ್ಳುಳ್ಳಿಯನ್ನು ರಸ ಬರುವಂತೆ ಜಜ್ಜಿ. ಆ ರಸವನ್ನು 5 ನಿಮಿಷ ಕಾಲ ಲೇಪಿಸಿ. ಬೆಚ್ಚನೆ ನೀರಿನಲ್ಲಿ ತೊಳೆದರೆ ಮೊಡವೆ, ಕಲೆ ಮಾಯವಾಗುತ್ತದೆ. 
  • ಗುಳ್ಳೆಗಳಿಂದ ಮುಖದ ಮೇಲೆ ಕಲೆ ಉಂಟಾಗುತ್ತದೆ. ಇದಕ್ಕೆ ಟೊಮ್ಯಾಟೊ ರಸ ಹಾಗೂ ಬೆಳ್ಳುಳ್ಳಿ ಎಸಳಿನ ರಸ ಬೆರೆಸಿ 10 ನಿಮಿಷ ಹಚ್ಚಿದರೆ ಸರಿ ಹೋಗುತ್ತದೆ. 
  • ಸ್ಟ್ರೆಚ್ ಮಾರ್ಕ್‌ಗೆ  ಬೆಳ್ಳುಳ್ಳಿ ರಸ ಹಾಗೂ ಆಲೀವ್ ಎಣ್ಣೆ ಹಚ್ಚಿ 5 ನಿಮಿಷ ಮಸಾಜ್ ಮಾಡಬೇಕು. ಮಸಾಜ್ ಮಾಡುತ್ತಿದ್ದ ಹಾಗೆ ಚರ್ಮ ಬಿಸಿಯಾಗುತ್ತದೆ. ಇದನ್ನು ಒಂದು ವಾರ ಮಾಡಿದರೆ ಮಾರ್ಕ್ ಮಾಯವಾಗುತ್ತದೆ. 
  • ಸುಕ್ಕು ಮಾಯವಾಗಿಸಲು ಜೇನು ಹಾಗು ನಿಂಬೆ ರಸದ ಜೊತೆ ದಿನ ಬೆಳಗ್ಗೆ ಬೆಳ್ಳುಳ್ಳಿ ರಸ ಸೇವಿಸುವುದೂ ತ್ವಚೆಯ ಆರೋಗ್ಯಕ್ಕೆ ಮದ್ದು.
Follow Us:
Download App:
  • android
  • ios