life
By Suvarna Web Desk | 09:19 AM January 19, 2017
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಭುವಿಯ ಮೇಲಿನ ಸ್ವರ್ಗ ಮಲೇಶಿಯಾ

Highlights

ಮಲೇಶಿಯಾದ ಸೊಬಗು ವರ್ಣಿಸಲಸಾಧ್ಯ, ಅದನ್ನು ಅನುಭವಿಸಬಹುದಷ್ಟೇ. ಹರಳುಗಳಿಂದಾಲಂಕೃತವಾದ ದ್ವೀಪಗಳಿಂದ ಹಿಡಿದು ನಿತ್ಯಹರಿದ್ವರ್ಣ ಅರಣ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಮಲೇಶಿಯಾದಲ್ಲಿ ಸಾಹಸ-ಚಟುವಟಿಕೆಗಳಿಗೆ ಕೊರತೆಯಿಲ್ಲ. ಪ್ರವಾಸಿಗರನ್ನು ವಸಾಹತುಶಾಹಿ-ಯುಗದೊಳಗೆ ಕರೆದೊಯ್ಯುವ ಮಲೇಶಿಯಾ, ಸ್ಥಳೀಯ ಸಂಸ್ಕೃತಿಯ ಉತ್ತುಂಗಕ್ಕೂ ಕೊಂಡೊಯ್ಯುತ್ತದೆ. ಸ್ವಾದಿಷ್ಟವಾದ ತಿಂಡಿ-ತಿನಿಸುಗಳಿಂದ ಹಿಡಿದು ಭರ್ಜರಿ ಶಾಪಿಂಗ್ ಸ್ಥಳಗಳು ಭಾರತೀಯ ಕುಟುಂಬಗಳನ್ನು ಕೈಬೀಸಿ ಕರೆಯುತ್ತದೆ. ಜತೆಗೆ, ನಯನ-ಮನೋಹರ ದ್ವೀಪಗಳಿಂದ ಹಿಡಿದು ದಟ್ಟಾರಣ್ಯಗಳಿಗೆ ಸಂಪರ್ಕ ಕಲ್ಪಿಸುವ ಏರ್-ಏಶಿಯಾ ಜಾಲವು ನೀವು ಕೊಡುವ ಹಣಕ್ಕೆ ಸಾರ್ಥಕ ಸೇವೆಯನ್ನೊದಗಿಸುತ್ತದೆ.

ಕೌಲಲಾಂಪುರದ 15 ಪ್ರೇಕ್ಷಣೀಯ ಸ್ಥಳಗಳು


ಮೂಕವಿಸ್ಮಿತರಾಗಿಸುವ ಪೆಟ್ರೋನಾ ಟವರ್ಸ್:

ಸಮುದ್ರ ಮಟ್ಟದಿಂದ 452 ಮೀ. ಎತ್ತರದವೆರೆಗೆ ಚಾಚಿರುವ ಹಾಗೂ ಕೌಲಲಾಂಪುರದ ಪ್ರಮುಖ ಆಕರ್ಷಣೆಯಾಗಿರುವ ಪೆಟ್ರೋನಾ ಟವರ್ಸ್ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುವುದರಲ್ಲಿ ಸಂಶಯವಿಲ್ಲ.  ಜಗತ್ತಿನ ಅತೀ ಎತ್ತರದ ಗಗನಚುಂಬಿಗಳ ಪೈಕಿ ಒಂದಾಗಿರುವ  ಅವಳಿ ಕಟ್ಟಡವು ತನ್ನ 86ನೇ ಅಂತಸ್ತಿನಿಂದ ನಗರದ ವಿಹಂಗಮ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. 41ನೇ ಅಂತಸ್ತಿನಲ್ಲಿರುವ ‘ಗಗನ ಸೇತುವೆ’ಯೂ ಅದ್ಭುತ ಅನುಭವವನ್ನು ನೀಡುತ್ತದೆ.

ಶಾಪಿಂಗ್, ಶಾಪಿಂಗ್, ಶಾಪಿಂಗ್:
ಚೌಕಾಶಿ ಹಾಗೂ ಖರೀದಿ ಉತ್ಸವಗಳಿಗೆ ಸುಪ್ರಸಿದ್ಧವಾಗಿರುವ ಕೌಲಲಾಂಪುರವು ಜಗತ್ತಿನ ಅಗ್ರ-5 ನಗರಗಳಲ್ಲೊಂದು. ಬುಕಿತ್ ಬಿಂಟಾಂಗ್’ನಿಂದ ನಿಮ್ಮ ದಿನವನ್ನು ಆರಂಭಿಸಿ, ನಿಮಗಾಗಿ ಕಾಯುತ್ತಿರುವ 9 ಶಾಪಿಂಗ್ ಮಾಲ್’ಗಳಿಗೆ ಭೇಟಿ ನೀಡಿ, ಕೌಲಲಾಂಪುರ್ ಸಿಟಿ ಸೆಂಟರ್’ನಲ್ಲಿ ನಿಮ್ಮ ಖರೀದಿ-ಪರ್ವಕ್ಕೆ ವಿರಾಮ ನೀಡಬಹುದು.

ನಿಮ್ಮ ಟಿಕೇಟ್’ಗಳನ್ನು ಕಾಯ್ದಿರಿಸಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ.

ಗೆಂಟಿಂಗ್ ಹೈಲ್ಯಾಂಡ್ಸ್’ನಲ್ಲಿ ಮೋಜೇ ಮೋಜು!
ಕೌಲಲಾಂಪುರಕ್ಕೆ ಬಂದಾಗ ಮಲೇಶಿಯಾದ ಮನೋರಂಜನಾ ತಾಣವೆಂದೇ ಪ್ರಸಿದ್ಧವಾಗಿರುವ ಗೆಂಟಿಂಗ್ ಹೈಲ್ಯಾಂಡ್ಸ್’ಗೆ ಭೇಟಿ ನೀಡಲೇ ಬೇಕು. ಬೆಟ್ಟದ ತುದಿಯಲ್ಲಿ ನಿರ್ಮಾಣಗೊಂಡಿರುವ ಗೆಂಟಿಂಗ್ ಹೈಲ್ಯಾಂಡ್ಸ್’ನಲ್ಲಿ ಕ್ಯಾಸಿನೋಗಳು, ಥೀಮ್ ಪಾರ್ಕ್’ಗಳು ಹಾಗೂ ರೆಸ್ಟೊರೆಂಟ್’ಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ.

ಲಾಂಕವಿ ದ್ವೀಪಗಳಲ್ಲಿ ಮಿಂದೇಳಿರಿ:
ಹರಳುಗಳನ್ನು ಧರಿಸಿದ ನೂರಕ್ಕಿಂತ ಹೆಚ್ಚು ದ್ವೀಪಗಳನ್ನು ಹೊಂದಿರುವ  ಈ ದ್ವೀಪ-ಸಮೂಹದಲ್ಲಿ ವಿಸ್ಮಯಕಾರಿ ಕಥೆಗಳನ್ನು ಕೇಳಿ ಆನಂದಪಡೆಯಿರಿ. ಕೇಬಲ್ ಕಾರ್’ನಲ್ಲಿ ಪ್ರಯಾಣಿಸಿ, ಜಲ ಕ್ರೀಡೆಗಳನ್ನಾಡಿ ತೊಯ್ಯಿರಿ…ಮಿಂದೇಳಿರಿ… ಉಸಿರುಕೊಳವೆಗಳನ್ನು ಬಳಸಿ ಜಲಗರ್ಭದೊಳಗೆ ಧುಮುಕಿರಿ. ಡೈವ್/ಈಜುಪ್ರಿಯರ ಮೆಚ್ಚಿನ ಸ್ಥಳವಾದ ಪಲೌ ಪಾಯರ್’ಗೂ ಭೇಟಿ ನೀಡಬಹುದು.


ಕೆ.ಎಲ್. ಪಕ್ಷಿಧಾಮಕ್ಕೆ ಪಯಣಿಸಿ:

ನಗರದ ಹೃದಯಭಾಗದಲ್ಲಿ 20.9 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಉಷ್ಣವಲಯದ ಕಾಡಿನಲ್ಲಿ ತಮ್ಮ ಸುಂದರವಾದ ವಾಸಸ್ಥಾನಗಳಲ್ಲಿ ನೆಲೆನಿಂತಿರುವ 3000 ಸಾವಿರಕ್ಕಿಂತಲೂ ಹೆಚ್ಚು ವಿಧದ ಪಕ್ಷಿಸಂಕುಲವನ್ನು ನೋಡಿ ಆನಂದಿಸಬಹುದು. ನೀವು ಚಿಟ್ಟೆಗಳನ್ನು ಇಷ್ಟಪಡುವವರಾದರೆ, ಅಲ್ಲೇ ನಿಮಗೆ ಚಿಟ್ಟೆಗಳಿಂದಲೇ ತುಂಬಿರುವ ನೈಸರ್ಗಿಕ ಕೆ.ಎಲ್.ಪಾರ್ಕ್ ನಿಮ್ಮನ್ನು ಸ್ವಾಗತಿಸುತ್ತದೆ.

ಪುರಾತನ ನಗರಿ ಪೆನಾಂಗ್:
ಯುನಸ್ಕೋ- ವಿಶ್ವ ಪಾರಂಪರಿಕ ಸ್ಥಳ ಹೆಗ್ಗಳಿಕೆಗೆ ಪಾತ್ರವಾಗಿರುವ ಪೆನಾಂಗ್ ಗತವೈಭವ ನೆನಪಿಸುವ ಹಾಗೂ ಮನಸ್ಸಿಗೆ ಮುದ ನೀಡುವ ತಾಣವಾಗಿದೆ. ಜಾರ್ಜ್ ಟೌನ್’ನಲ್ಲಿ ಪಾರಂಪರಿಕ ವಿಹಾರ ಕೈಗೊಂಡು ಅಲ್ಲಿನ ವಾಸ್ತುಶಿಲ್ಪವನ್ನು ವೀಕ್ಷಿಸುತ್ತಾ, ಸ್ಥಳೀಯ ಖಾದ್ಯಗಳನ್ನು ಸೇವಿಸುತ್ತಾ ಮೈಮರೆಯಿರಿ.

ನಿಮ್ಮ ಟಿಕೇಟ್’ಗಳನ್ನು ಕಾಯ್ದಿರಿಸಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ.

ಪಾರಂಪರಿಕ ತಾಣ- ಮಲಕ್ಕಾ ಸುತ್ತಾಡಿ
ಮಲಕ್ಕಾ, ಮಲೇಶಿಯಾದ ಇನ್ನೊಂದು ವಿಶ್ವ ಪಾರಂಪರಿಕ ಸ್ಥಳ. ಪ್ರವಾಸಿಗರನ್ನು ಡಚ್, ಬ್ರಿಟಿಷ್, ಹಾಗೂ ಪೋರ್ಚುಗೀಸ್ ವಸಾಹತುಶಾಹಿ ಯುಗದೊಳಗೆ ಕರೆದೊಯ್ಯುತ್ತದೆ. ಗತ ಪರಂಪರೆಯನ್ನು ಅನ್ವೇಷಿಸುತ್ತಾ ಕ್ರ್ಯೂಸ್’ನಲ್ಲಿ ಪ್ರಯಾಣಿಸಿ, ಪ್ರಾಚೀನ ವಸ್ತುಗಳನ್ನು ಖರೀದಿಸಿ ಹಾಗೂ ಹಳೇ ಸಂಗತಿಗಳನ್ನು ಕೇಳಿ ತಿಳಿಯಿರಿ..

ಮೌಂಟ್ ಕಿನಬಾಲು ಪರ್ವತವನ್ನೇರಿ:
ನೀವು ಎತ್ತರಕ್ಕೇರುವುದನ್ನಿಷ್ಟ ಪಡುವವರಾದರೆ ಮೌಂಟ್ ಕಿನಬಾಲು ಕಡೆ ಪಯಣ ಬೆಳೆಸಿ. ಇದು ಕೂಡಾ ಯುನಸ್ಕೋ- ವಿಶ್ವ ಪಾರಂಪರಿಕ ಸ್ಥಳವಾಗಿದೆ. ಸಾಹಸ-ಚಟುವಟಿಕೆಗಳಿಗೆಂದೇ ಇರುವ  ಕಿನಬಾಲು ಪಾರ್ಕ್’ನ ಕಾಡುಗಳಲ್ಲಿ ಟ್ರೆಕ್ಕಿಂಗ್ ಮಾಡಿ ಅಥವಾ ಪರ್ವತಗಳನ್ನು ನೋಡಿ ರೋಮಾಂಚಿತರಾಗಿ.  

ಸೆಪಿಲೊಕ್ ಸಂರಕ್ಷಿತಾರಣ್ಯ:
ಸಬಾ ನಿತ್ಯಹರಿದ್ವರ್ಣ ಅರಣ್ಯಕ್ಕೆ ಭೇಟಿ ನೀಡಿ; ಸೆಪಿಲೊಕ್ ವಾನರ ಪುನರ್ವಸತಿ ಕೇಂದ್ರದಲ್ಲಿರುವ ವಾನರಗಳನ್ನು ಭೇಟಿ ಮಾಡಿ. ಇಲ್ಲಿನ ಮನಸೂರೆಗೊಳ್ಳುವ ಪೃಕೃತಿ ಸೌಂದರ್ಯವನ್ನು ಅನುಭವಿಸುತ್ತಾ, ಪಕ್ಷಿಸಂಕುಲವನ್ನೂ ನೋಡಿ ಆನಂದಿಸಬಹುದು. 

ನದಿ ಸಫಾರಿ!!!
ವನ್ಯಜೀವಿ ಹಾಗೂ ಪಕ್ಷಿಸಂಕುಲವನ್ನು ಇಷ್ಟಪಡುವವರಿಗೆಂದೇ ಕಿನಾಬಾತಂಗನ್ ನದಿ ಸಫಾರಿ ಇದೆ. ಜಲವಿಹಾರ ಮಾಡುತ್ತಾ ಅಪರೂಪದ ಹಾರ್ನ್’ಬಿಲ್ ಹಕ್ಕಿಗಳನ್ನು ಹಾಗೂ ಪ್ರೊಬೊಸಿಸ್ ವಾನರಗಳನ್ನು ನೋಡಬಹುದು. ನೀವು ಸಾಹಸಿಗರಾಗಿದ್ದರೆ, ರಾತ್ರಿ ವೇಳೆ ಸಫಾರಿ ಹೊರಟು, ನಿಶಾಚಾರಿ ಪ್ರಾಣಿಗಳನ್ನು ಭೇಟಿಮಾಡಬಹುದು!


ಜಾಲನ್ ಅಲೋರ್’ನ ‘ರಸ್ತೆ-ತಿಂಡಿ’/ ಸ್ಟ್ರೀಟ್ ಫುಡ್  ಚಪ್ಪರಿಸಿ:

ಜಾಲನ್ ಅಲೋರ್’ನ ‘ತಿಂಡಿ-ರಸ್ತೆ/ ಫುಡ್ ಸ್ಟ್ರೀಟ್’’ಗೆ ಭೇಟಿ ನೀಡಿ, ಮಲೇಶಿಯಾದ ರುಚಿಕರವಾದ ತಿಂಡಿ-ತಿನಿಸುಗಳ ಲೋಕದೊಳಗೆ ಹೊಕ್ಕುಬಿಡಿ. ಸೂರ್ಯಾಸ್ತವಾಗುತ್ತಿದ್ದಂತೆ, ಹುರುಪು, ಬಣ್ಣ ಹಾಗೂ ಸ್ವಾದಿಷ್ಟವಾದ ಸ್ಥಳೀಯ ತಿನಿಸುಗಳನ್ನು ಒಡಲಿನಲ್ಲಿರಿಸಿ ಜಾಲನ್ ಅಲೋರ್ ನಿಮಗೆ ಭೋಜನೋತ್ಸವವನ್ನು ಏರ್ಪಡಿಸುತ್ತದೆ.

ಡೈವ್ @ ರೆಡಾಂಗ್ ದ್ವೀಪ!
ವಿಶ್ವಸಮರ-2ರ ನೌಕಾವಶೇಷಗಳಿರುವ ಸ್ಥಳವನ್ನು ಒಳಗೊಂಡಂತೆ, ಡೈವಿಂಗ್’ಗೆ ಪ್ರಶಸ್ತವಾದ 31 ತಾಣಗಳನ್ನು ಹೊಂದಿರುವ ರೆಡಾಂಗ್ ದ್ವೀಪವು ಪ್ರವಾಸಿಗರಿಗೆ ಜಲಲೋಕದ ಬಾಗಿಲನ್ನು ತೆರೆಯುತ್ತದೆ. ಸುಮಾರು 500 ಜಾತಿಯ ಹವಳಗಳು  ಹಾಗೂ  3000 ವಿಧದ ಮೀನುಗಳು  ತನ್ನ ಒಡಲಿನಲ್ಲಿಟ್ಟುಕೊಂಡಿರುವ ಈ ದ್ವೀಪವು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ.

ನಿಮ್ಮ ಟಿಕೇಟ್’ಗಳನ್ನು ಕಾಯ್ದಿರಿಸಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ.

ತಮನ್ ನೆಗಾರ -ವಿಶ್ವದ ಅತಿ ಪುರಾತನ ನಿತ್ಯಹರಿದ್ವರ್ಣ ಕಾಡುಗಳು
ಸುಮಾರು 130 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರುವ ವಿಶ್ವದ ಅತೀ ಪುರಾತನ ನಿತ್ಯಹರಿದ್ವರ್ಣ ಕಾಡುಗಳಲ್ಲೊಂದಾಗಿರುವ ತಮನ್ ನೆಗಾರದಲ್ಲಿ ವಿಹರಿಸಿರಿ. ವಿಶ್ವದ ಅತೀ ಉದ್ದ ಕೊನೊಪಿ ವಾಲ್ಕ್’ವೇ (ಕಾಲು/ ಮೇಲ್ಸೆತುವೆ)ಗಳಲ್ಲಿ ನಡೆಯುತ್ತಾ ಕಾಡಿನ ದೃಶ್ಯಗಳನ್ನು ಆನಂದಿಸಿರಿ ಅಥವಾ ಲೈಮ್’ಸ್ಟೋನ್/ ಸುಣ್ಣದ ಗುಹೆಗಳಿಗೆ ಭೇಟಿ ನೀಡಿ.  ಈ ಅರಣ್ಯಗಳಲ್ಲಿ ಚಾರಣವನ್ನು ಕೈಗೊಳ್ಳಬಹುದು ಅಥವಾ ಇನ್ನಿತರ ಸಾಹಸ-ಚಟುವಟಿಕೆಗಳನ್ನು ಆಡಲು ಪ್ರಯತ್ನಿಸಬಹುದು.


ಬಾಟು ಗುಹೆಯನ್ನು ಏರಿ:

ಸುಮಾರು 200 ಮೆಟ್ಟಲುಗಳನ್ನು ಹತ್ತಿ ಬಾಟು ಗುಹೆಯನ್ನು ಏರಿದಾಗ, ವಿಶ್ವದೆಲ್ಲೆಡೆಯಿಂದ ಭಕ್ತರನ್ನು ಆಕರ್ಷಿಸುವ ಪುರಾತನ  ಮುರುಗಾ ದೇವಾಲಯವನ್ನು ಕಾಣುವಿರಿ. ವಿಸ್ಮಯಗಳಿಂದ ಕೂಡಿದ ಲೈಮ್’ಸ್ಟೋನ್ ಗುಹೆಗಳನ್ನು ನೀವು ಖುದ್ದಾಗಿ ಅನ್ವೇಷಿಸಿ. ಬೃಹತ್ ಸಂಖ್ಯೆಯಲ್ಲಿ ತಮಿಳಿಗರು ಸೇರಿ ಮೆರವಣಿಗೆ ತೆಗೆಯುವ ತೈಪೂಸಂ ಸಂದರ್ಭ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ.

ಸಾರವಾಕ್ ಸಾಂಸ್ಕೃತಿಕ ಗ್ರಾಮ:
ಈ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಇತಿಹಾಸ, ಅವರ ಆಚಾರ-ಸಂಪ್ರದಾಯಗಳನ್ನು ಪರಿಚಯಿಸುವ, ವಾಸ್ತವರೂಪದ ಸಾಂಸ್ಕೃತಿಕ ಮ್ಯೂಸಿಯಂನಂತಿರುವ ಸಾರವಾಕ್’ ಗ್ರಾಮದಲ್ಲಿ ಸುತ್ತಾಡಿ. ಅವರ ಜೀವನಶೈಲಿಯನ್ನು ಕಣ್ಣಾರೆ ನೋಡಿಕೊಂಡು, ಕರಕುಶಲ ವಸ್ತುಗಳನ್ನು ಖರೀದಿಸಬಹುದು.

ಹಾಗಾದರೆ ಇನ್ನೇಕೆ ತಡ? ಬ್ಯಾಗ್ ಪ್ಯಾಕ್ ಮಾಡಿ, ಕಡಿಮೆ ದರದಲ್ಲಿ ಲಭ್ಯವಿರುವ ವಿಮಾನ ಟಿಕೇಟ್ ಪಡೆಯಿರಿ, ಮಲೇಶಿಯಾದ ಅವಿಸ್ಮರಣೀಯ ಪ್ರವಾಸಕ್ಕೆ ಕೂಡಲೇ ಹೊರಡಿ....

ಕೈಗೆಟಕುವ ದರದಲ್ಲಿ ಟಿಕೆಟ್ ಲಭ್ಯವಿರುವ ಏರ್ ಏಶಿಯಾದಲ್ಲಿ ಪ್ರಯಾಣಿಸಿ. ವಿಶ್ವದ ಅತ್ಯುತ್ತಮ ದರ್ಜೆಯ ವಿಮಾನಯಾನ ಅನುಭವ ಪಡೆಯಿರಿ. ಏರ್ ಏಶಿಯಾದ ಕೈಗೆಟಕುವ ಟಿಕೆಟ್ ದರಗಳ ಮೂಲಕ ಏಶಿಯಾ ಹಾಗೂ ಆಸ್ಟ್ರೇಲಿಯಾ ಸುತ್ತಾಡಿ. ಏರ್ ಏಶಿಯಾದೊಂದಿಗೆ ಏಶಿಯಾ ಹಾಗೂ ಆಸ್ಟ್ರೇಲಿಯಾದ ಸುಮಾರು 100ಕ್ಕಿಂತಲೂ ಹೆಚ್ಚು ಸ್ಥಳಗಳಿಗೆ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದು.

ನಿಮ್ಮ ಟಿಕೇಟ್’ಗಳನ್ನು ಕಾಯ್ದಿರಿಸಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ.

Show Full Article


Recommended


bottom right ad