Asianet Suvarna News Asianet Suvarna News

ಕೋಲಾರ: ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾ ಪಟ್ಟಿ ಪ್ರಕಟ

ಕೋಲಾರ ಜಿಲ್ಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಗರ ಸ್ಥಳೀಯ ಸಂಸ್ಥೆಗಳಾದ ಕೋಲಾರ, ಮುಳಬಾಗಿಲು, ಕೆ.ಜಿ.ಎಫ್‌ (ರಾಬರ್ಟ್‌ಸನ್‌ಪೇಟೆ) ಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ. ಸದಾಚಾರ ಸಂಹಿತೆಯು ಅಕ್ಟೋಬರ್‌ 20 ರಿಂದ ನವೆಂಬರ್‌ 14 ರವರೆಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ.

election date announced
Author
Bangalore, First Published Oct 22, 2019, 2:01 PM IST

ಕೋಲಾರ(ಅ.22): ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಘೋಷಣೆ ಮಾಡಿದ್ದು ಕೋಲಾರ ಜಿಲ್ಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಗರ ಸ್ಥಳೀಯ ಸಂಸ್ಥೆಗಳಾದ ಕೋಲಾರ, ಮುಳಬಾಗಿಲು, ಕೆ.ಜಿ.ಎಫ್‌ (ರಾಬರ್ಟ್‌ಸನ್‌ಪೇಟೆ) ಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಅಕ್ಟೋಬರ್‌ 24 ರ ಗುರುವಾರದಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ಅಕ್ಟೋಬರ್‌ 31 ರ ಗುರುವಾರದಂದು ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕವಾಗಿದ್ದು, ನವಂಬರ್‌ 2 ರ ಶನಿವಾರದಂದು ನಾಮಪತ್ರಗಳನ್ನು ಪರಿಶೀಲಿಸುವುದಾಗಿದೆ.

ನವೆಂಬರ್‌ 13ರಂದು ಮತದಾನ

ನವಂಬರ್‌ 4 ರ ಸೋಮವಾರದಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಬಹುದಾಗಿದ್ದು, ಮತದಾನ ಅವಶ್ಯವಿದ್ದರೆ, ಮತದಾನವನ್ನು ನವಂಬರ್‌ 12 ರಂದು (ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ) ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ, ನವಂಬರ್‌ 13 ರ ಬುಧವಾರದಂದು ಮತದಾನ ನಡೆಸಬೇಕಾದ (ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ) ನಡೆಸಲಾಗುವುದು. ನವಂಬರ್‌ 14 ರ ಗುರುವಾರದಂದು (ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿದ್ದು) ಮತದಾನದ ಎಣಿಕೆ ಮಾಡಲಾಗುವುದು ಹಾಗೂ ಚುನಾವಣೆಯನ್ನು ಮುಕ್ತಾಯಗೊಳಿಸಲಾಗುವುದು.

20 ರಿಂದಲೇ ನೀತಿ ಸಂಹಿತೆ ಜಾರಿ

ಸದಾಚಾರ ಸಂಹಿತೆಯು ಅಕ್ಟೋಬರ್‌ 20 ರಿಂದ ನವೆಂಬರ್‌ 14 ರವರೆಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಕೋಲಾರ ನಗರಸಭೆಯ 35 ವಾರ್ಡ್‌ಗಳಿಗೆ 107 ಮತಗಟ್ಟೆಗಳಲ್ಲಿ, ಮುಳಬಾಗಿಲು ನಗರಸಭೆಯ 31 ವಾರ್ಡ್‌ಗಳಿಗೆ 51 ಮತಗಟ್ಟೆಗಳಲ್ಲಿ 51 ಮತಗಟ್ಟೆಗಳಲ್ಲಿ ಹಾಗೂ ರಾಬರ್ಟ್‌ಸನ್‌ಪೇಟೆ ಕೆಜಿಎಫ್‌ ನಗರಸಭೆಯ 35 ವಾರ್ಡ್‌ಗಳಿಗೆ 118 ಮತಗಟ್ಟೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ದಿಢೀರ್ ಕ್ರಮ: 7 ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿದ ಕರ್ನಾಟಕ ಕಾಂಗ್ರೆಸ್.

ಕೋಲಾರ ನಗರಸಭೆಗೆ 5 ಚುನಾವಣಾಧಿಕಾರಿಗಳನ್ನು, 5 ಸಹಾಯಕ ಚುನಾವಣಾದಕಾರಿಗಳನ್ನು, ಮುಳಬಾಗಲು ನಗರಸಭೆಗೆ 4 ಚುನಾವಣಾಧಿಕಾರಿಗಳನ್ನು, 4 ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯ ನಗರಸಭೆಗೆ 5 ಚುನಾವಣಾಧಿಕಾರಿಗಳನ್ನು, 5 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್‌ ಅವರು ಆದೇಶ ಹೊರಡಿಸಿದ್ದಾರೆ.

ಆಸಕ್ತಿ ಇಲ್ವಾ..? ಜಾಗ ಖಾಲಿ ಮಾಡಿ, ವೈದ್ಯರಿಗೆ ಸಚಿವರ ಖಡಕ್ ವಾರ್ನಿಂಗ್..!

Follow Us:
Download App:
  • android
  • ios