Asianet Suvarna News Asianet Suvarna News

ತುಮಕೂರು : ಎಗ್ಗಿಲ್ಲದೆ ಸಾಗಿದೆ ಮರಳು, ಜಲ್ಲಿ ಅಕ್ರಮ ಸಾಗಣೆ

ನಗರದ ಬಿಎಚ್ ರಸ್ತೆ ಮೂಲಕ ನಿತ್ಯ ನೂರಾರು ದೊಡ್ಡ ಲಾರಿಗಳಲ್ಲಿ ಜಲ್ಲಿ ಮತ್ತು ಮರಳು ಅಕ್ರಮ ಸಾಗಾಟ ಎಗ್ಗಿಲ್ಲದೆ ಸಾಗಿದೆ. ಸಾಲದೆಂಬಂತೆ ಓವರ್ ಲೋಡ್ ಮಾಡಿಕೊಂಡು ಸಂಚರಿಸುತ್ತಿರುವುದರಿಂದ ಲಾರಿಯಲ್ಲಿನ ಮರಳು, ಜಲ್ಲಿ ರಸ್ತೆಯುದ್ದಕ್ಕೂ ಬೀಳುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಂಡೂ ಕಾಣದಂತಿರುವ ಅಧಿಕಾರಿಗಳಿಗೆ ಸವಾರರು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Tumkur Illegal transportation of sand and gravel   snr
Author
First Published Apr 20, 2024, 2:53 PM IST

 ತಿಪಟೂರು :  ನಗರದ ಬಿಎಚ್ ರಸ್ತೆ ಮೂಲಕ ನಿತ್ಯ ನೂರಾರು ದೊಡ್ಡ ಲಾರಿಗಳಲ್ಲಿ ಜಲ್ಲಿ ಮತ್ತು ಮರಳು ಅಕ್ರಮ ಸಾಗಾಟ ಎಗ್ಗಿಲ್ಲದೆ ಸಾಗಿದೆ. ಸಾಲದೆಂಬಂತೆ ಓವರ್ ಲೋಡ್ ಮಾಡಿಕೊಂಡು ಸಂಚರಿಸುತ್ತಿರುವುದರಿಂದ ಲಾರಿಯಲ್ಲಿನ ಮರಳು, ಜಲ್ಲಿ ರಸ್ತೆಯುದ್ದಕ್ಕೂ ಬೀಳುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಂಡೂ ಕಾಣದಂತಿರುವ ಅಧಿಕಾರಿಗಳಿಗೆ ಸವಾರರು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಬಿಎಚ್ ರಸ್ತೆ, ಹಾಲ್ಕುರಿಕೆ, ಹಾಸನ, ತುರುವೇಕೆರೆ ರಸ್ತೆಗಳಲ್ಲಿ ಪ್ರತಿದಿನ ದೊಡ್ಡ ಟಿಪ್ಪರ್, ಲಾರಿ, ಟ್ರಕ್‌ಗಳು ಜಲ್ಲಿ, ಮರಳು ತುಂಬಿಕೊಂಡು ವಾಹನಗಳ ಮೇಲೆ ಟಾರ್ಪಾಲ್ ಹಾಕದೆ ಓಡಾಡುತ್ತಿವೆ. ಇದರಿಂದ ಜಲ್ಲಿ, ಮರಳು ರಸ್ತೆ ತುಂಬಾ ಚೆಲ್ಲಾಡು ತ್ತಿದೆ. ಇಂತಹ ಲಾರಿ ಹಿಂಬದಿಯಲ್ಲಿ ಬರುವ ಕಾರು, ಆಟೋ, ದ್ವಿಚಕ್ರ ವಾಹನ ಸವಾರರ ಮೇಲೆ ಮರಳು ಬೀಳುತ್ತಿದ್ದು, ಅಪ ಘಾತಗಳಾಗುತ್ತಿವೆ. ಮರಳಿನ ಧೂಳು ಪಾದಚಾರಿ, ವಾಹನ ಸವಾರರ ಕಣ್ಣಿಗೆ ಬೀಳುತ್ತಿರುವುದರಿಂದ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಲಾರಿಗಳಲ್ಲಿರುವ ಜಲ್ಲಿ ಕಲ್ಲುಗಳು ರಸ್ತೆಯುದ್ದಕ್ಕೂ ಚೆಲ್ಲುವುದರಿಂದ ದ್ವಿಚಕ್ರ ವಾಹನಗಳು ಆಯತಪ್ಪಿ ಬೀಳುತ್ತಿವೆ. ಆದರೆ ಈ ಕುರಿತು ಪೊಲೀಸರು, ಆರ್‌ಟಿಒ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

 ರಸ್ತೆಗಳಲ್ಲಿ ಕೀಳುತ್ತಿರುವ ಡಾಂಬರ್‌ ಸಂಚಾರಕ್ಕೆ ತೊಂದರೆ: 

ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತೂಕದ ಮರಳು, ಜಲ್ಲಿ ಕಲ್ಲು ತುಂಬಿಕೊಂಡು ಓಡಾಡುತ್ತಿರುವ ಲಾರಿಗಳಿಂದ ರಸ್ತೆ ಡಾಂಬ ರ್ ಕಿತ್ತು ಹೋಗುತ್ತಿದೆ. ಇದರಿಂದ ರಸ್ತೆಗಳಲ್ಲಿ ತಗ್ಗು ಗುಂಡಿ ಬೀಳುತ್ತಿವೆ. ಪೊಲೀಸರು, ಆರ್‌ಟಿಒ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರ ಯಾವುದೇ ಕ್ರಮ ಜರುಗಿಸದೆ ಲಾರಿಗಳಿಗೆ ಸಹಕಾರ ನೀಡುತ್ತಿದ್ದಾರೆಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

 ಗ್ರಾಮೀಣ ರಸ್ತೆಗಳು ಹಾಳು : 

ನಿತ್ಯ ನೂರಾರು ಲೋಡ್ ಮಣ್ಣನ್ನು ಲಾರಿಗಳು ಓವರ್‌ ಲೋಡ್ ಮಾಡಿಕೊಂಡು ತುಮಕೂರು-ಹೊನ್ನಾವರ ಚತುಷ್ಪಥ ರಸ್ತೆ ಕಾಮಗಾರಿ ಸಾಗಿಸುತ್ತಿವೆ. ಇದರಿಂದ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗುತ್ತಿವೆ. ಕೋಟ್ಯಂತರ ರು. ವೆಚ್ಚದ ರಸ್ತೆಗಳೆಲ್ಲ ಲಾರಿಗಳ ಆರ್ಭಟಕ್ಕೆ ಹಾಳಾಗಿದ್ದು, ಇವುಗಳನ್ನು ರಿಪೇರಿ ಮಾಡುವವರು ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಮುಂದೆಯೇ ಇಂತಹ ಲಾರಿಗಳು ಅಕ್ರಮವಾಗಿ ಮಣ್ಣು, ಮರಳು, ಜಲ್ಲಿ ತುಂಬಿಕೊಂಡು ಓಡಾಡುತ್ತಿದ್ದರೂ ಯಾರೂ ಕೇಳುತ್ತಿಲ್ಲ.

ಇದು ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗಳಿ ಲ್ಲದೆ ರೈತರು ಗುಂಡಿ ಬಿದ್ದ ರಸ್ತೆಯಲ್ಲೇ ಓಡಾಡುತ್ತಿದ್ದರು. ಆಗ ಕೇಂದ್ರ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ವಿವಿಧ ಯೋಜನೆಗಳ ಮೂಲಕ ಉತ್ತಮ ಡಾಂಬರ್ ರಸ್ತೆ ನಿರ್ಮಿಸಿತ್ತು. ಆದರೆ ಆ ರಸ್ತೆಗಳು ಅಕ್ರಮ ಮಣ್ಣು, ಜಲ್ಲಿ, ಮರಳು ಲಾರಿ ಗಳ ಹಾವಳಿಯಿಂದ ಹಾಳಾಗಿವೆ. ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ವಾಹನ ಸವಾರರು, ಜನರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios