Asianet Suvarna News Asianet Suvarna News

ಉಡುಪಿ: ಟಿಪ್ಪು ಬದಲು ಸಂತ ಶಿಶುನಾಳ ಶರೀಫ ಜಯಂತಿ

ಟಿಪ್ಪು ಜಯಂತಿ ಆಚರಣೆಗೆ ಸಾಕಷ್ಟು ಪರ ವಿರೋಧಗಳಿರುವ ಸಂದರ್ಭದಲ್ಲಿಯೇ ಇದೀಗ ಸಚಿವ ಸಿ. ಟಿ ರವಿ ಅವರು ಸಂತ ಶಿಶುನಾಳ ಶರೀಫ ಜಯಂತಿ ಬಗ್ಗೆ ಮಾತನಾಡಿದ್ದಾರೆ. ಶರೀಫರ ಜಯಂತಿ ಎರಡೂ ಧರ್ಮಕ್ಕೆ ಖುಷಿಯಾಗುವ ಜಯಂತಿ ಆಗಬಹುದು ಎಂದು ಹೇಳಿದ್ದಾರೆ.

Shishunala Sharif jayanthi instead of Tippu jayanthi says ct ravi
Author
Bangalore, First Published Oct 2, 2019, 1:11 PM IST

ಉಡುಪಿ(ಅ.02): ಟಿಪ್ಪು ಜಯಂತಿ ಆಚರಣೆಗೆ ಸಾಕಷ್ಟು ಪರ ವಿರೋಧಗಳಿರುವ ಸಂದರ್ಭದಲ್ಲಿಯೇ ಇದೀಗ ಸಚಿವ ಸಿ. ಟಿ ರವಿ ಅವರು ಸಂತ ಶಿಶುನಾಳ ಶರೀಫ ಜಯಂತಿ ಬಗ್ಗೆ ಮಾತನಾಡಿದ್ದಾರೆ. ಶರೀಫರ ಜಯಂತಿ ಎರಡೂ ಧರ್ಮಕ್ಕೆ ಖುಷಿಯಾಗುವ ಜಯಂತಿ ಆಗಬಹುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಂತ ಶಿಶುನಾಳ ಶರೀಫ ಜಯಂತಿ ಆಚರಣೆಗೆ ನನ್ನ ಅಪೇಕ್ಷೆ ಇದೆ. ಅವರು ಹಿಂದೂ ಮುಸಲ್ಮಾನ ಇಬ್ಬರೂ ಸೇರಿ ಒಪ್ಪಿಕೊಂಡ ವ್ಯಕ್ತಿ. ಶರೀಫರ ಜಯಂತಿ ಎರಡೂ ಧರ್ಮಕ್ಕೆ ಖುಷಿಯಾಗುವ ಜಯಂತಿ ಆಗಬಹುದು. ಅಬ್ದುಲ್‌ ಕಲಾಂ ಜಯಂತಿಯನ್ನೂ ಮಾಡಬಹುದು. ಕಲಾಂ ವಿದ್ಯಾರ್ಥಿಗಳಿಗೆ ಪ್ರೇರಣೆ ಕೊಟ್ಟವ್ಯಕ್ತಿ ಎಮದಿದ್ದಾರೆ.

ಕೊಡಗಿನ ಕಾಫಿ ಕೇಳಿ ಪಡೆದ ಕ್ರೇಜಿಸ್ಟಾರ್

ಜಯಂತಿ ಆಚರಣೆಯ ಸ್ವರೂಪದ ಬಗ್ಗೆ ಎಲ್ಲಾ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಲ್ಲಾ ಜಿಲ್ಲೆಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡುತ್ತೇವೆ. ನಮ್ಮ ದೇಶದಲ್ಲಿ ಎಲ್ಲವೂ ರಾಜಕೀಯಕರಣಗೊಳ್ಳುತ್ತದೆ. ಈ ಬಗ್ಗೆ ಎಲ್ಲಾ ಪಕ್ಷಗಳ ನಾಯಕರ ಅಭಿಪ್ರಾಯ ಪಡೆಯುತ್ತೇನೆ. ಕ್ಯಾಬಿನೆಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಮಾಲೋಚನೆ ನಡೆಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ದಸರಾ: ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ದಿನವೇ ಕುರ್ಚಿಗಳೆಲ್ಲ ಖಾಲಿ

Follow Us:
Download App:
  • android
  • ios