Asianet Suvarna News Asianet Suvarna News

ಸೂರ್ಯನ ಕಾಟಕ್ಕೆ ಚಿತ್ರದುರ್ಗದ ಜನ ತತ್ತರ: ಬಿಸಿಲಿನಿಂದ ಬಚಾವ್ ಆಗಲು ಎಸಿ, ಕೂಲರ್‌ಗೆ ಮೊರೆ..!

ಪ್ರತಿ ವರ್ಷದ ಬೇಸಿಗೆಗಿಂತ‌ ಈ ಬಾರಿ ಬಿಸಿಲ ತಾಪ ಹೆಚ್ಚಾಗಿದೆ. ಗ್ರಾಹಕರನ್ನು ಆಕರ್ಷಿಸಲು‌ ವಿವಿಧ ಆಫರ್ ಕೊಟ್ರು ಸಹ ಎಸಿ, ಕೂಲರ್ ಗಳನ್ನು ಖರೀದಿಸಲು ಹಿಂದೇಟು ಹಾಕ್ತಿದ್ದ ಜನರಿಂದ ಬೇಡಿಕೆ ಹೆಚ್ಚಾಗಿದೆ. ಅಗತ್ಯಕ್ಕಿಂತ ಹೆಚ್ಚು ಎಸಿಸ,ಕೂಲರ್ ಗಳನ್ನು  ತರಿಸಿದ್ರು ಸಹ‌‌‌‌ ಕ್ಷಣ ಮಾತ್ರದಲ್ಲಿ‌‌‌ ಎಲ್ಲಾ  ಸೋಲ್ಡ್ ಔಟ್ ಆಗ್ತಿವೆ. 

People of Chitradura Rush to Buy Air Conditioners and Air Coolers For Increasing temperature grg
Author
First Published May 3, 2024, 5:14 PM IST

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಮೇ.03): ಎಲ್ಲೆಡೆ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗ್ತಿದೆ. ಹೀಗಾಗಿ ಜನರು ಬಿಸಿಲ ಬೇಗೆಯಿಂದ ಪಾರಾಗಲು ಎಸಿ ಹಾಗೂ ಕೂಲರ್‌ಗಳ ಮೊರೆ ಹೋಗೋದು ಸಹಜವಾದ್ರೆ ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಎಸಿ ಮತ್ತು ಕೂಲರ್ ಗಳು ಸೋಲ್ಡ್ ಔಟ್ ಆದ ಪರಿಣಾಮ ಅಲ್ಲಿನ ಜನರು ಬಿಸಿಲ‌ ಝಳಕ್ಕೆ‌ ತತ್ತರಿಸಿ ಹೋಗಿದ್ದಾರೆ.  ಕುರಿತು ಒಂದು ವರದಿ ಇಲ್ಲಿದೆ ನೋಡಿ... 

ವಾತಾವರಣಕ್ಕೆ‌ ತಕ್ಕಂತೆ ಜನರು ಅಗತ್ಯ ವಸ್ತುಗಳನ್ನು ಖರೀದಿಸೋದು ವಾಡಿಕೆ. ಅಂತೆಯೇ ಕಳೆದ ಒಂದು ತಿಂಗಳಿಂದ ಬೇಸಿಗೆ ಬಿಸಿಲು ಹೆಚ್ಚಾಗಿರುವ ಪರಿಣಾಮ ಶೆಕೆ‌ಯಿಂದ ಪಾರಾಗಲು ಚಿತ್ರದುರ್ಗದ ಜನರು ಫ್ಯಾನ್ ಮೊರೆ ಹೋಗಿದ್ರು. ಆದ್ರೆ ದಿನದಿಂದ‌ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗ್ತಿದ್ದು, ಪ್ರಸ್ತುತ 40% ಗಡಿಯಲ್ಲಿದೆ. ಹೀಗಾಗಿ ಫ್ಯಾನ್ ಗಾಳಿ ಸಹ ಬಿಸಿಯಾಗ್ತಿದ್ದು, AC ಹಾಗೂ ಕೂಲರ್ ಗಳಿಗೆ ಬಹು ಬೇಡಿಕೆ ಬಂದಿದ್ದು, ದಿನ ಬೆಳಗಾದ್ರೆ ಎಸಿ, ಫ್ರಿಡ್ಜ್ ಹಾಗೂ ಕೂಲರ್ ಖರೀದಿಸಲು ಗ್ರಾಹಕರು ಷೋರೂಂಗಳಲ್ಲಿ ಮುಗಿಬೀಳ್ತಿದ್ದಾರೆ. ದುಬಾರಿ‌ ಬೆಲೆ ಕೊಟ್ಟು ದೇಹವನ್ನು ತಂಪಾಗಿರಿಸಲು ಎಲಕ್ಟ್ರಾನಿಕ್ಸ್  ಉಪಕರಣಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರಿಂದಾಗಿ ಚಿತ್ರದುರ್ಗದ  ಮೆದೆಹಳ್ಳಿ ರಸ್ತೆ, ಸಂತೆ ಮೈದಾನದ ಅಂಗಡಿಗಳಲ್ಲಿ ಎಲ್ಲಾ ಅಂಗಡಿಗಳಲ್ಲು ಜನಜಂಗುಳಿ ತುಂಬಿದ್ದು, ಎಷ್ಟೇ‌‌ ಹಣ ಕೊಡ್ತಿವಿ ಅಂದ್ರು ಉತ್ತಮ ಗುಣಮಟ್ಟದ ಎಸಿ,ಕೂಲರ್ ಸಿಗ್ತಿಲ್ಲ. ಹಲವೆಡೆ ಎಸಿ,ಕೂಲರ್ ಗಳು ಸ್ಟಾಕ್‌ ಇಲ್ಲ ಅಂತ ಗ್ರಾಹಕರು ನಿರಾಸೆಯಿಂದ ವಾಪಾಸ್ ಆಗುವಂತಾಗಿದೆಯಂತೆ.

ರಾಜ್ಯದಲ್ಲಿ 43 ಡಿಗ್ರಿ ತಲುಪಿದ ಉಷ್ಣಾಂಶ: ಇಬ್ಬರು ವೃದ್ಧೆಯರು ಬಲಿ

ಇನ್ನು ಪ್ರತಿ ವರ್ಷದ ಬೇಸಿಗೆಗಿಂತ‌ ಈ ಬಾರಿ ಬಿಸಿಲ ತಾಪ ಹೆಚ್ಚಾಗಿದೆ. ಗ್ರಾಹಕರನ್ನು ಆಕರ್ಷಿಸಲು‌ ವಿವಿಧ ಆಫರ್ ಕೊಟ್ರು ಸಹ ಎಸಿ, ಕೂಲರ್ ಗಳನ್ನು ಖರೀದಿಸಲು ಹಿಂದೇಟು ಹಾಕ್ತಿದ್ದ ಜನರಿಂದ ಬೇಡಿಕೆ ಹೆಚ್ಚಾಗಿದೆ. ಅಗತ್ಯಕ್ಕಿಂತ ಹೆಚ್ಚು ಎಸಿಸ,ಕೂಲರ್ ಗಳನ್ನು  ತರಿಸಿದ್ರು ಸಹ‌‌‌‌ ಕ್ಷಣ ಮಾತ್ರದಲ್ಲಿ‌‌‌ ಎಲ್ಲಾ  ಸೋಲ್ಡ್ ಔಟ್ ಆಗ್ತಿವೆ. ಹೀಗಾಗಿ ಸ್ಟಾಕ್ ಕೊರತೆ ಹೆಚ್ಚಾಗಿದೆ. ಒಮ್ಮೆ ಆರ್ಡರ್ ಹಾಕಿದರೆ ಬರೋದು ಕನಿಷ್ಟ ಎರಡರಿಂದ ಮೂರುದಿನವಾಗುವ ಪರಿಣಾಮ ಗ್ರಾಹಕರಿಗೆ ತೀವ್ರ ಸಮಸ್ಯೆ ಆಗ್ತಿದೆ ಅಂತಾರೆ‌ ಅಂಗಡಿ ಮಾಲೀಕರು.

ಒಟ್ಟಾರೆ ಬಿಸಿಲ ತಾಪಮಾನ ಹೆಚ್ಚಾದಂತೆ ಜನರು ಎಸಿ,ಕೂಲರ್ ಖರೀದಿಸಲು ಮುಂದಾಗಿದ್ದಾರೆ.ಆದ್ರೆ ಎಲ್ಲೆಡೆ ಅಗತ್ಯ ಉಪಕರಣಗಳು ಸ್ಟಾಕ್ ಇಲ್ಲದೇ ಬಿಸಿಲ ಝಳದಿಂದ ಪಾರಾಗಲು ಕೋಟೆನಾಡಿನ ಜನರು ಯೋಚಿಸುವಂತಾಗಿದೆ. 

Follow Us:
Download App:
  • android
  • ios