40 ವರ್ಷದ ಕಾಂಗ್ರೆಸ್ ನಂಟು ಬಿಟ್ಟು ಬೆಂಬಲಿಗರ ಜೊತೆ ಜೆಡಿಎಸ್ ಸೇರಿದ ಮುಖಂಡ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೋರ್ವರು 40 ವರ್ಷದ ಪಕ್ಷದ ನಂಟು ಬಿಟ್ಟು ಜೆಡಿಎಸ್ ಸೇರಿದ್ದಾರೆ. ತಮ್ಮ ಬೆಂಬಲಿಗರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.  

Congress Leader CH Nagaraju Joins JDS in Mandya

ಕೆ.ಆರ್.ಪೇಟೆ [ಜ.13]:  ತಾಲೂಕಿನ ಶೀಳನೆರೆ ಹೋಬಳಿಯ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಚಟ್ಟೇನಹಳ್ಳಿ ಸಿ. ಎಚ್. ನಾಗರಾಜು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್‌ಗೆ ಬರಮಾಡಿಕೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ೫ ಬಾರಿ ಸತತವಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವ, ಶಕ್ತಿಯನ್ನು ಉಳಿಸಿಕೊಂಡು ಬಂದಿರುವ ಚಟ್ಟೇನಹಳ್ಳಿ ಗ್ರಾಮದ ಹಿರಿಯ ಮುಖಂಡರಾದ ಸಿ.ಎಚ್.ನಾಗರಾಜು ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ  ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. 

‘ಕುಮಾರಸ್ವಾಮಿ ಕ್ಯಾಸೆಟ್‌ ಮನುಷ್ಯ : ಇದು ಅವರಿಗೆ ಹೊಸತಲ್ಲ...

ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ನಾಯಕತ್ವವನ್ನು ಒಪ್ಪಿ, ಹಾಗೂ ಜೆಡಿಎಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಬೆಂಬಲಿಗರೊಂದಿಗೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದರು.

'HDK ಸಿಡಿ, ವಿಡಿಯೋಗಳು ಬಹಳ ಇವೆ, ಬಿಜೆಪಿಯವರದ್ದು ಏನು ಬದನೆಕಾಯಿ ನೋಡ್ತೀರಾ'?...

ಚಟ್ಟೇನಹಳ್ಳಿ ನಾಗರಾಜು ಅವರೊಂದಿಗೆ ಮುತ್ತು  ರಾಜ್, ಟ್ರಾಕ್ಟರ್ ನಂಜಪ್ಪ, ಪಟೇಲ್ ಅಶೋಕ್, ಡೈರಿ ನಂಜೇಗೌಡ, ರಮೇಶ್, ಬಸವೇಗೌಡ, ಕರೀಗೌಡ, ಸಿ.ಎಚ್.ಹನುಮೇಗೌಡ, ಸತೀಶ್, ರವಿ, ಯೋಗಣ್ಣ, ಲೋಕಿಶೆಟ್ಟಿ, ಪ್ರಕಾಶ್ ಯೋಗೇಶ್, ಹನುಮೇಗೌಡ, ನಟರಾಜಚಾರಿ, ಗೋಪಾಲಶೆಟ್ಟಿ, ರಾಜೇಗೌಡ, ಎಲ್ .ಐ.ಸಿ.ಮಹಾದೇವ್, ಬಸವರಾಜು, ಹರೀಶ್, ಪ್ರೇಮ್ ಸೇರಿದಂತೆ ನೂರಾರು ಬೆಂಬಲಿಗರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಎಲ್ಲರಿಗೂ ಹೆಚ್.ಟಿ. ಮಂಜು ಅವರು ಜೆಡಿಎಸ್ ಪಕ್ಷದ ಬಾವುಟ ನೀಡಿ ಮತ್ತು ಹಾರ ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬೇಲದಕೆರೆ ನಂಜಪ್ಪ, ಸಣ್ಣಪಾಪೇಗೌಡ, ಭೈರಾಪುರ ಹರೀಶ್, ನೀತಿಮಂಗಲ ಉಮೇಶ್, ಹೆಚ್.ಟಿ.
ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. 

Latest Videos
Follow Us:
Download App:
  • android
  • ios