Asianet Suvarna News Asianet Suvarna News

ಬಿಸಿಯೂಟ ತಯಾರಿ ಕೆಲಸದಿಂದ ಶಿಕ್ಷಕರಿಗೆ ಶೀಘ್ರ ಮುಕ್ತಿ ಸಂಭವ

ಶಿಕ್ಷಕರು ಬೋಧನೆಗೆ ಹೊರತಾದ ಕೆಲಸಗಳಲ್ಲೇ ಹೆಚ್ಚು ವ್ಯಸ್ತ | ಚುನಾವಣೆ, ಜನಗಣತಿ ಸೇರಿದಂತೆ ಇನ್ನೂ ಕೆಲವು ಸಂದರ್ಭಗಳಲ್ಲಿ ಶಿಕ್ಷಕರನ್ನು ಬಳಸಿಕೊಳ್ಳುವ ಪದ್ಧತಿಗೆ ಶೀಘ್ರ ಕಡಿವಾಣ ಬೀಳುವ ಸಾಧ್ಯತೆಗಳಿವೆ | ಕೇಂದ್ರ ಸರ್ಕಾರದಿಂದ ಚಿಂತನೆ

Teachers may be relieved of some mid day meal task
Author
Bengaluru, First Published Nov 4, 2019, 2:05 PM IST

ನವದೆಹಲಿ (ನ. 04): ಮತದಾರರ ಪಟ್ಟಿಪರಿಷ್ಕರಣೆ ಹಾಗೂ ಬಿಸಿಯೂಟ ತಯಾರಿಯಂತಹ ಕೆಲಸಗಳಿಂದ ಶಿಕ್ಷಕರಿಗೆ ಶೀಘ್ರದಲ್ಲೇ ಮುಕ್ತಿ ದೊರಕುವ ಸಾಧ್ಯತೆಗಳಿವೆ. ಶಿಕ್ಷಕರು ಬೋಧನೆಗೆ ಹೊರತಾದ ಕೆಲಸಗಳಲ್ಲೇ ಹೆಚ್ಚು ವ್ಯಸ್ತರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಆ ಕಾರ್ಯಗಳಿಂದ ಬಿಡುಗಡೆ ಮಾಡಿಸಲು ರಾಷ್ಟ್ರೀಯ ಶೈಕ್ಷಣಿಕ ನೀತಿಗೆ ಕೆಲವೊಂದು ಅಂಶಗಳನ್ನು ಸೇರ್ಪಡೆಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ ಎನ್ನಲಾಗಿದೆ.

ಎನ್ ಆರ್ ಸಿ ಭಾರತದ ಭವಿಷ್ಯಕ್ಕೆ ಒಳ್ಳೆಯದು ಎಂದ ಸಿಜೆಐ ಗಗೋಯ್

ಚುನಾವಣೆ ಸಂದರ್ಭದಲ್ಲಿ ಮಾತ್ರವೇ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಬೇಕು. ಚುನಾವಣೆ ಇಲ್ಲದ ಸಂದರ್ಭದಲ್ಲಿ ಮತದಾರರ ಪಟ್ಟಿಪರಿಷ್ಕರಣೆಯಂತಹ ಕಾರ್ಯಗಳಿಗೆ ಅವರನ್ನು ತೊಡಗಿಸಿಕೊಳ್ಳಬಾರದು. ಶಿಕ್ಷಕರ ಮೂಲವೃತ್ತಿಗೆ ತೊಂದರೆಯಾಗುವಂತಹ ಯಾವುದೇ ಕೆಲಸಕ್ಕೂ ಅವರನ್ನು ನಿಯೋಜನೆ ಮಾಡಬಾರದು. ಬಿಸಿಯೂಟ ತಯಾರಿ, ಆಡಳಿತ ಕೆಲಸ ಮಾಡುವಂತೆಯೂ ಸೂಚಿಸಬಾರದು ಎಂಬ ಅಂಶವನ್ನು ಸೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ, ಜನಗಣತಿ ಸೇರಿದಂತೆ ಇನ್ನೂ ಕೆಲವು ಸಂದರ್ಭಗಳಲ್ಲಿ ಶಿಕ್ಷಕರನ್ನು ಬಳಸಿಕೊಳ್ಳುವ ಪದ್ಧತಿಗೆ ಶೀಘ್ರ ಕಡಿವಾಣ ಬೀಳುವ ಸಾಧ್ಯತೆಗಳಿವೆ. ಇಂಥದ್ದೊಂದು ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಶಿಕ್ಷಕೇತರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಶಿಕ್ಷಕರು ಶಿಕ್ಷಣದ ಗುಣಮಟ್ಟದತ್ತ ಹೆಚ್ಚಿನ ಒಲವು ಹೊಂದಿರಬೇಕು. ಇದೊಂದು ವಿಶೇಷ ಉದ್ಯೋಗ ಎಂದು ಪರಿಗಣಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸಲು ಮುಂದಾಗಿದೆ.

ಪ್ರತಿ ಜಿಲ್ಲೆಗಳಲ್ಲೂ ಆಯುಷ್ ಆಸ್ಪತ್ರೆ ಸ್ಥಾಪನೆ: ಕೇಂದ್ರ

ಶಿಕ್ಷಕರು ಶಿಕ್ಷಣ ಕ್ಷೇತ್ರದಿಂದ ಹೊರತಾದ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಕೊಂಡಿರಬೇಕಾದ ಸ್ಥಿತಿ ಇದೆ. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿ ಎಲ್ಲಾ ಸಂದರ್ಭಗಳಲ್ಲಿಯೂ ಶಿಕ್ಷಕರ ಮೇಲೆ ಒತ್ತಡ ಹೇರುವುದು ಅಷ್ಟುಸಮಂಜಸವಲ್ಲ. ಚುನಾವಣೆ ಸಂದರ್ಭಗಳಲ್ಲಿ ಮತದಾರರ ಪಟ್ಟಿಗಳನ್ನೆಲ್ಲ ಸಿದ್ಧಪಡಿಸುವ ಕೆಲಸಗಳಲ್ಲಿ, ಆಡಳಿತ ಕಾರ್ಯಗಳಲ್ಲಿ ಮತ್ತು ಬಿಸಿಯೂಟ ಸಿದ್ಧಪಡಿಸಬೇಕಾದ ಸಂದರ್ಭಗಳು ಪದೇ ಪದೇ ಬರಬಾರದು ಎನ್ನುವ ಕಾರಣದಿಂದ ಈ ಅಂಶವನ್ನು ಶಿಕ್ಷಣ ನೀತಿಯಲ್ಲಿ ಸೇರಿಸಲಾಗುತ್ತಿದೆ ಎಂದು ಎಚ್‌ಆರ್‌ಡಿ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios