Asianet Suvarna News Asianet Suvarna News

ಮನೆಗೆ ನುಗ್ಗಿ 5 ತಿಂಗಳ ಮಗು ಕೊಂದು ತಿಂದ ಬೀದಿ ನಾಯಿ: ಜನರಿಂದ ನಾಯಿಯ ಹತ್ಯೆ

ಮನೆಗೆ ನುಗ್ಗಿದ್ದ ಬೀದಿನಾಯಿಯೊಂದು  ಐದು ತಿಂಗಳ ಮಗುವೊಂದನ್ನು ಕಚ್ಚಿ ಕೊಂದು ಹಾಕಿದ ಆಘಾತಕಾರಿ ಘಟನೆ ತೆಲಂಗಾಣದ ವಿಕರಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. 

Stray dog killed five month old baby Angry people killed dog in Vikarabad Telangana akb
Author
First Published May 15, 2024, 1:27 PM IST

ಹೈದರಾಬಾದ್: ಮನೆಗೆ ನುಗ್ಗಿದ್ದ ಬೀದಿನಾಯಿಯೊಂದು  ಐದು ತಿಂಗಳ ಮಗುವೊಂದನ್ನು ಕಚ್ಚಿ ಕೊಂದು ಹಾಕಿದ ಆಘಾತಕಾರಿ ಘಟನೆ ತೆಲಂಗಾಣದ ವಿಕರಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಗುವನ್ನು ಬಾಬುಸಾಯಿ ಎಂದು ಗುರುತಿಸಲಾಗಿದ್ದು, ನಾಯಿ ದಾಳಿ ಮಾಡಿದ ವೇಳೆ ಮಗು ಮನೆಯಲ್ಲಿ ನಿದ್ದೆ ಮಾಡುತ್ತಿತ್ತು. ಪೋಷಕರು ಕೆಲಸದ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿದ್ದು, ಘಟನೆ ನಡೆಯುವ ವೇಳೆ ಮಗುವಿನ ರಕ್ಷಣೆಗೆ ಯಾರು ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಮಗುವಿನ ಪೋಷಕರು ಸ್ಥಳೀಯ ಸ್ಟೋನ್ ಪಾಲಿಶ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿ ವಾಸ ಮಾಡುವ ಪ್ರದೇಶದಲ್ಲಿರುವ ಜನ ಯಾವಾಗಲೂ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಿದ್ದೆ ಘಟನೆಗೆ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ. ಮಗುವನ್ನು ಮಲಗಿಸಿ ಬೇರೆ ಕೆಲಸಗಳಿಗಾಗಿ ತಾಯಿ ಹೊರಗಡೆ ಹೋಗಿದ್ದಾಳೆ. ಈ ವೇಳೆ ನಾಯಿ ಮನೆಗೆ ನುಗ್ಗಿದ್ದು, ಮಗುವಿನ ಮೇಲೆ ದಾಳಿ ಮಾಡಿದೆ.  ದಾಳಿಯಿಂದ ಮಗು ಗಂಭೀರ ಗಾಯಗೊಂಡಿದೆ. ಕತ್ತಿಗೆ ಗಂಭೀರ ಗಾಯವಾಗುವುದರ ಜೊತೆಗೆ ಮಗುವಿನ ದೇಹದ ಕೆಲ ಭಾಗಗಳನ್ನು ಕೂಡ ನಾಯಿ ತಿಂದಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯ ಜನ ನಾಯಿಯನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ನಿರ್ಬಂಧವಿಲ್ಲ; ಸ್ಪಷ್ಟೀಕರಣ ಕೊಟ್ಟ ಬಿಬಿಎಂಪಿ!

ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಡಿಸೆಂಬರ್ 2023 ರಲ್ಲಿ ಬಿಡುಗಡೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿಯ ಪ್ರಕಾರ, ನಾಯಿ ಕಡಿತದ ಘಟನೆಗಳು 2022 ರಿಂದ 2023 ರವರೆಗೆ ವರ್ಷದಿಂದ ವರ್ಷಕ್ಕೆ ಶೇ.26.5 ರಷ್ಟು ಹೆಚ್ಚಾಗಿದೆ. ಕಳೆದ ವಾರ  ಉತ್ತರ ಪ್ರದೇಶದ ನೋಯ್ಡಾದಲ್ಲಿ ಲಿಫ್ಟ್‌ವೊಂದರಲ್ಲಿ ಪುಟ್ಟ ಬಾಲಕಿಯ ಮೇಲೆ ನಾಯಿ ದಾಳಿ ನಡೆಸಿದ ಘಟನೆ ನಡೆದಿತ್ತು.

#Watch: ಆಜಾನುಬಾಹು ವ್ಯಕ್ತಿಯ ಮೇಲೆ ದಾಳಿ ಮಾಡಿದ ರಕ್ಕಸ ಬೀದಿ ನಾಯಿಗಳು; ಇನ್ನು ಚಿಕ್ಕ ಮಕ್ಕಳ ಪಾಡೇನು?

Latest Videos
Follow Us:
Download App:
  • android
  • ios