ಡಿಫೆನ್ಸ್ ಎಕ್ಸ್‌ಪೋದಲ್ಲಿ ಅಸಾಲ್ಟ್ ರೈಫಲ್ ಎತ್ತಿದ ಪ್ರಧಾನಿ ಮೋದಿ!

ಡಿಫೆನ್ಸ್ ಎಕ್ಸ್ ಪೋ-2020ಗೆ ಚಾಲನೆ ನೀಡಿದ ಪ್ರಧಾನಿ ಮೋದಿ| ಅತ್ಯಾಧುನಿಕ ಮಿಲಿಟರಿ ಸಲಕರಣೆಗಳ ಪ್ರದರ್ಶನ| ಅಸಾಲ್ಟ್ ರೈಫಲ್ ಬಳಸಿ ಗಮನ ಸೆಳೆದ ಪ್ರಧಾನಿ ಮೋದಿ| ಅಸಾಲ್ಟ್ ರೈಫಲ್ ಗುರಿ ಇಡುತ್ತಿರುವ ಮೋದಿ ಫೋಟೋ ವೈರಲ್| ವಿಶ್ವ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದ ಮೋದಿ| ಮೇಕ್ ಇನ್ ಇಂಡಿಯಾದಡಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು| ಸಮಾರಂಭದಲ್ಲಿ 70 ದೇಶಗಳ ಉದ್ಯಮಿಗಳು ಹಾಗೂ ರಕ್ಷಣಾ ತಜ್ಞರು ಭಾಗಿ| 

PM Modi Seen Aiming Assault Rifle At Defence Expo 2020 In Luknow

ಲಕ್ನೋ(ಫೆ.05): ಇಲ್ಲಿ ನಡೆದ ಡಿಫೆನ್ಸ್ ಎಕ್ಸ್ ಪೋ-2020 ಮೇಳದಲ್ಲಿ ಪ್ರಧಾನಿ ಮೋದಿ ಅತ್ಯಾಧುನಿಕ ಅಸಾಲ್ಟ್ ರೈಫಲ್ ಬಳಕೆಯ ಕುರಿತು ಮಾಹಿತಿ ಪಡೆದರು.

ಡಿಫೆನ್ಸ್ ಎಕ್ಸ್ ಪೋ-2020ಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಅತ್ಯಾಧುನಿಕ ಮಿಲಿಟರಿ ಸಲಕರೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ಅಸಾಲ್ಟ್ ರೈಫಲ್’ನ್ನು ಎತ್ತಿ ಗುರಿ ಇಡುವ ಮೂಲಕ ಪ್ರಧಾನಿ ಮೋದಿ ಗಮನ ಸೆಳೆದರು.

ಇದಕ್ಕೂ ಮೊದಲು ರಕ್ಷಣಾ ವಿಚಾರ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಶ್ವ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ರಕ್ಷಣಾ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮೇಕ್ ಇನ್ ಇಂಡಿಯಾದಡಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು ನೀಡಿದೆ ಎಂದು ಮೋದಿ ಹೇಳಿದರು.

ಮೋದಿ ಕೈಯಲ್ಲಿ ಅಸ್ಸಾಲ್ಟ್ ರೈಫಲ್: ಸಿಕ್ಕ ಬಲಕ್ಕೆ ಸೈನಿಕರಿಗೆ ಖುಷಿಯಾಗಿದೆ ಫುಲ್!

ಸಮಾರಂಭದಲ್ಲಿ 70 ದೇಶಗಳ ಉದ್ಯಮಿಗಳು ಹಾಗೂ ರಕ್ಷಣಾ ತಜ್ಞರು ಭಾಗವಹಿಸಿದ್ದು, ಸುಧಾರಿತ ಮಿಲಿಟರಿ ಉಪಕರಣಗಳ ಕುರಿತು ಮಾಹಿತಿ ಪಡೆದರು.

Latest Videos
Follow Us:
Download App:
  • android
  • ios