ಇದು ಭಾರತದ ಅತ್ಯಂತ ಸುರಕ್ಷಿತ ನಗರ: NCRB ವರದಿ!
ವಾಸಿಸಲು ಭಾರತದ ಅತ್ಯಂತ ಸುರಕ್ಷಿತ ನಗರ ಯಾವುದು?| 2018ರ NCRB ವರದಿಯಲ್ಲಿ ಕೋಲ್ಕತ್ತಾಗೆ ಪ್ರಥಮ ಸ್ಥಾನ| 'ಭಾರತದ ಅತ್ಯಂತ ಸುರಕ್ಷಿತ ಹಾಗೂ ಅಪರಾಧ ಪ್ರಮಾಣ ಕಡಿಮೆ ಇರುವ ನಗರ'| ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿ | ಮಹಿಳೆಯ ವಿರುದ್ಧದ ಅಪೊರಾಧ ಪ್ರಕರಣಗಳು ಅತ್ಯಂತ ಕಡಿಮೆ| ನಂತರದ ಸ್ಥಾನದಲ್ಲಿ ಹೈದರಾಬಾದ್, ಪುಣೆ, ಮುಂಬೈ ನಗರಗಳು|
ನವದೆಹಲಿ(ಜ.10): ಪ.ಬಂಗಾಳ ರಾಜಧಾನಿ ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ಹಾಗೂ ಅಪರಾಧ ಪ್ರಮಾಣ ಕಡಿಮೆ ಇರುವ ನಗರ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿ ಹೇಳಿದೆ.
2018ರ ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿ ಪ್ರಕಟಿಸಿರುವ NCRB, ಕೋಲ್ಕತ್ತಾದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಅಪರಾಧ ಪ್ರಕರಣ ದಾಖಲಾಗಿದೆ ಎಂದು ಉಲ್ಲೇಖಿಸಿದೆ.
152.2 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಕೋಲ್ಕತ್ತಾ, ವಾಸಿಸಲು ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2016ರಿಂದಲೇ ಕೋಲ್ಕತ್ತಾ ಪ್ರಥಮ ಸ್ಥಾನದಲ್ಲಿರುವುದು ವಿಶೇಷ.
ಬೆಂಗಳೂರಿನಲ್ಲಿ ಕಾಮುಕರಿಗೆ ಉಳಿಗಾಲವಿಲ್ಲ..ಇವು ಮಾಮೂಲಿ ಸಿಸಿ ಕ್ಯಾಮರಾ ಅಲ್ಲ!
ಇಷ್ಟೇ ಅಲ್ಲದೇ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಕೋಲ್ಕತ್ತಾದಲ್ಲಿ ಶೂನ್ಯ ಎನಿಸುವಷ್ಟು ಕಡಿಮೆ ಎಂದು NCRB ವರದಿ ಸ್ಪಷ್ಟಪಡಿಸಿದೆ.
ಹರಿಯಾಣ, ರಾಜಸ್ಥಾನ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚು ಎಂಬುದು NCRB ವರದಿಯಿಂದ ಬಹಿರಂಗವಾಗಿದೆ.
ಇನ್ನು ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಎರಡನೇ, ಪುಣೆ ಮೂರನೇ ಹಾಗೂ ಮುಂಬೈ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿವೆ.