Asianet Suvarna News Asianet Suvarna News

ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮೊಬೈಲ್ ಬಿಲ್ 5000 ದಾಟುತ್ತಿತ್ತು, ಕಾಂಗ್ರೆಸ್ ಕುಟುಕಿದ ಮೋದಿ!

ಕಾಂಗ್ರೆಸ್‌ನದ್ದು ಪೂರ್ವವನ್ನು ಲೂಟಿ ಹೊಡೆಯವು ಯೋಜನೆ, ಬಿಜೆಪಿಯದ್ದು ಕಾರ್ಯಗತ ಗೊಳಿಸುವ ಯೋಜನೆ. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮೊಬೈಲ್ ಬಿಲ್ 5000 ರೂಪಾಯಿ ದಾಟುತ್ತಿತ್ತು ಎಂದು ಪ್ರಧಾನಿ ಮೋದಿ ಕುಟುಕಿದ್ದಾರೆ. 2ಜಿ ಹಗರಣ ಸೇರಿದಂತೆ ಹಲವು ವಿಷಯ ಪ್ರಸ್ತಾಪಿಸಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

Mobile Monthly bill may cross rs 5000 if Congress been in power says PM Modi ckm
Author
First Published Apr 17, 2024, 7:29 PM IST

ಅಗರ್ತಲ(ಏ.17) ಕಾಂಗ್ರೆಸ್ ಅಧಿಕಾರದದಲ್ಲಿದ್ದರೆ ಇದೀಗ ಮೊಬೈಲ್ ಬಿಲ್ 5,000 ರೂಪಾಯಿ ದಾಟುತ್ತಿತ್ತು. ಇದೀಗ 400 ರೂಪಾಯಿಯಿಂದ 500 ರೂಪಾಯಿಯಲ್ಲಿ ತಿಂಗಳ ಅನ್‌ಲಿಮಿಟೆಡ್ ಕಾಲ್ ಹಾಗೂ ಡೇಟಾ ಸೇವೆ ಲಭ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತ್ರಿಪುರಾದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಪೂರ್ವದ ತ್ರಿಪುರಾ ಸೇರಿದಂತೆ ದೇಶವನ್ನು ಲೂಟಿ ಹೊಡೆಯುವುದನ್ನೇ ಕಾಂಗ್ರೆಸ್ ಕಾಯಕ ಮಾಡಿಕೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ನದ್ದೂ ಪೂರ್ವವನ್ನು ಲೂಟಿ ಹೊಡೆಯುವ ಯೋಜನೆಯಾಗಿದ್ದರೆ, ಬಿಜೆಪಿಯದ್ದು ಪರಿಣಾಮಕಾರಿಯಾಗಿ ಸೌಲಭ್ಯಗಳನ್ನು ಕಾರ್ಯಕರ್ತಗೊಳಿಸುವುದೇ ಯೋಜನೆಯಾಗಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ತ್ರಿಪುರಾ ಸೇರಿದಂತೆ ಪೂರ್ವ ಭಾಗದಲ್ಲಿ ಸರಿಯಾದ ಮೊಬೈಲ್ ಟವರ್ ಇರಲಿಲ್ಲ. ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ನಗರದ ಕೆಲವೇ ಕೆಲವು ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಲಭ್ಯವಿತ್ತು. ಆದರೆ ಬಿಜೆಪಿ ಸರ್ಕಾರ 5ಜಿ ಸೇವೆಯನ್ನು ಸುಧಾರಿಸುತ್ತಿದೆ. ಅನ್‌ಲಿಮಿಟೆಡ್ ಕಾಲ್, ಡೇಟಾ ಹೀಗೆ ತಿಂಗಳ ಮೊಬೈಲ್ ಬಿಲ್ ಈಗ 400 ರೂಪಾಯಿಂದ 500 ರೂಪಾಯಿ ಸಾಕು. ಆದರೆ ಕಾಂಗ್ರೆಸ್ ಸರ್ಕಾರ ಇದ್ದರೆ ತಿಂಗಳ ಮೊಬೈಲ್ ಬಿಲ್ 4,000 ರೂಪಾಯಿಯಿಂದ 5000 ರೂಪಾಯಿ ದಾಟುತ್ತಿತ್ತು ಎಂದು ಮೋದಿ ಹೇಳಿದ್ದಾರೆ.

ಉಗ್ರರ ಮನೆಗೆ ನುಗ್ಗಿ ಹೊಡೆಯಲಾಗುವುದು... ಪ್ರಧಾನಿ ಮೋದಿ ಹೇಳಿಕೆಗೆ ಅಮೆರಿಕಾ ರಿಯಾಕ್ಷನ್

ಕಾಂಗ್ರೆಸ್ ಈಶಾನ್ಯ ರಾಜ್ಯಗಳನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿತ್ತು. ಈ ಭಾಗಕ್ಕೆ ಕಾಂಗ್ರೆಸ್ ಯಾವತ್ತೂ ನ್ಯಾಯ ಕೊಡಲಿಲ್ಲ. ಈ ಭಾಗದ ರಾಜ್ಯಗಳ ಸಂಪನ್ಮೂಲ, ಭವಿಷ್ಯವನ್ನೇ ಕಮ್ಯೂನಿಸ್ಟ್ ಪಾರ್ಟಿಗಳು ಹಾಳುಮಾಡಿತು. ಆದರೆ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಮಾಡಿದೆ. ಈ ರಾಜ್ಯಗಳು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರ 3 ಕೋಟಿ ಮನೆಗಳನ್ನು ನಿರ್ಮಿಸುತ್ತಿದೆ. ಈ ಸೌಲಭ್ಯ ತ್ರಿಪುರಾದ ಬಹುತೇಕರಿಗೆ ಲಭ್ಯವಾಗಲಿದೆ. ತ್ರಿಪುರಾ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆಏರಿಸಲು 3,000 ಕೋಟಿ ರೂಪಾಯಿಯಲ್ಲಿ ಕಾಮಗಾರಿಗಳು ನಡೆಯಲಿದೆ. ದಕ್ಷಿಣ ತ್ರಿಪುರಾದಿಂದ ಬಾಂಗ್ಲಾದೇಶ ಸಂಪರ್ಕ ಕಲ್ಪಿಸುವ ಫೆನಿ ಸೇತುವೆ ನಿರ್ಮಾಣವಾಗಲಿದೆ.

ಇದೇ ವೇಳೆ ರಾಮನವಮಿ ಕುರಿತು ಮೋದಿ ಮಾತನಾಡಿದ್ದಾರೆ. 500 ವರ್ಷಗಳ ಹೋರಾಟಗಳ ಬಳಿಕ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇದೀಗ ಮೊದಲ ರಾಮನವಮಿ ಆಚರಿಸಲಾಗಿದೆ. ದೇಶದ ಭವ್ಯ ಪರಂಪರೆ ಮರುಕಳಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಶ್ರೀಮಂತ ವ್ಯಕ್ತಿಗಳ ದಾಳ: ರಾಹುಲ್‌ ಗಾಂಧಿ ಕಿಡಿ
 

Follow Us:
Download App:
  • android
  • ios