Asianet Suvarna News Asianet Suvarna News

ಜೋಧ್‌ಪುರ್ ವಾಯುನೆಲೆಯಲ್ಲಿ 'ಬಹದ್ದೂರ್' ಕೊನೆ ಹಾರಾಟ: ಇತಿಹಾಸ ಪುಟ ಸೇರಿದ ಮಿಗ್‌-27!

ಇತಿಹಾಸ ಪುಟ ಸೇರಿದ ಮಿಗ್‌-27 ವಿಮಾನ| ಜೋಧ್‌ಪುರ ವಾಯುನೆಲೆಯಲ್ಲಿ ಕೊನೆಯ ಹಾರಾಟ

MiG 27 goes into history Legacy of Indian Air Force bahadur valiant
Author
Bangalore, First Published Dec 28, 2019, 8:47 AM IST

ಜೋಧ್‌ಪುರ[ಡಿ.28]: ಭಾರತೀಯ ವಾಯು ಪಡೆಯಿಂದ ಬಹದ್ದೂರ್‌ ಎಂದು ಕರೆಸಿಕೊಂಡಿದ್ದ ಮಿಗ್‌-27 ವಿಮಾನಗಳು ಜೋಧಪುರದ ವಾಯು ನೆಲೆಯಲ್ಲಿ ಶುಕ್ರವಾರ ಕೊನೆಯ ಹಾರಾಟ ನಡೆಸುವ ಮೂಲಕ ಸೇವೆಯಿಂದ ನಿವೃತ್ತಿ ಹೊಂದಿತು.

ಮಿಗ್‌ 27 ಶ್ರೇಣಿಯ ಕೊನೆಯ ಸ್ಕ್ವಾರ್ಡನ್‌ನ 7 ವಿಮಾನಗಳು ಜೋಧಪುರ ವಾಯು ನೆಲೆಯ ಮೂಲಕ ಕಾರ್ಯಚರಣೆ ನಡೆಸುತ್ತಿದ್ದವು. ಪೈಲಟ್‌ ಅನುಪಮ್‌ ಬ್ಯಾನರ್ಜಿ ಅವರು ಮಿಗ್‌- 27 ವಿಮಾನವನ್ನು ಕೊನೆಯ ಬಾರಿ ಹಾರಾಟ ನಡೆಸಿದರು. ಹಾರಾಟದ ಬಳಿಕ ಮಿಗ್‌- 27 ವಿಮಾನವನ್ನು ಸುಖೋಯ್‌ - 30 ವಿಮಾನಗಳ ಬೆಂಗಾವಲಿನಲ್ಲಿ ಇಳಿಸಲಾಯಿತು. ಬಳಿಕ ಸಾಂಪ್ರದಾಯಿಕ ಜಲಫಿರಂಗಿ ಹಾರಿಸಿ ಸೆಲ್ಯೂಟ್‌ ಸಲ್ಲಿಸಲಾಯಿತು. ಈ ಮೂಲಕ ಮಿಗ್‌ ವಿಮಾನ ಇತಿಹಾಸ ಪುಟ ಸೇರಿತು. ಮಿಗ್‌-27 ವಿಮಾನದ ಬೀಳ್ಕೊಡುಗೆ ಸಮಾರಂಭದ ವೇಳೆ ಏರ್‌ ಮಾರ್ಷಲ್‌ ಎಸ್‌.ಕೆ. ಘೋತಿಯಾ ಅವರು ಉಪಸ್ಥಿತರಿದ್ದರು.

ಮಿಗ್‌ ಸರಣಿಯ ಮಿಗ್‌- 23 ಬಿಎನ್‌ ಮತ್ತು ಮಿಗ್‌ 23 ಎಂಎಫ್‌ ಮತ್ತು ಮೂಲ ಮಿಗ್‌-27 ವಿಮಾನಗಳು ಈಗಾಗಲೇ ವಾಯು ಪಡೆಯಿಂದ ನಿವೃತ್ತಿ ಆಗಿವೆ.

1980ರ ದಶಕದಲ್ಲಿ ಸೋವಿಯತ್‌ ಒಕ್ಕೂಟದಿಂದ ಖರೀದಿಸಿದ್ದ ಮಿಗ್‌ 27 ವಿಮಾನಗಳು ಈಗ ತೀರಾ ಹಳೆದಾಗಿದ್ದು, ಪದೇ ಪದೆ ಅಪಘಾತಕ್ಕೀಡಾಗುತ್ತಿರುವುದರಿಂದ ಈ ವಿಮಾನಗಳ ಸೇವೆಯನ್ನು ಅಂತ್ಯಗೊಳಿಸಲಾಗಿದೆ. ಪಾಕಿಸ್ತಾನದ ವಿರುದ್ಧದ 1999ರ ಕಾರ್ಗಿಲ್‌ ಯುದ್ಧದ ವೇಳೆ ಮಿಗ್‌-27 ವಿಮಾನ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. 1985ರಿಂದ ಆರಂಭಿಸಿ ಭಾರತೀಯ ವಾಯು ಸೇನೆ ಇದುವರೆಗೆ 165 ಮಿಗ್‌-27 ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಂಡಿದೆ.

Follow Us:
Download App:
  • android
  • ios