Asianet Suvarna News Asianet Suvarna News

ಕರ್ನಾಟಕ ಮತದಾರರಿಗೆ ಗುಡ್ ನ್ಯೂಸ್, ಮತದಾನ ದಿನ ರಜೆ ನೀಡದಿದ್ದರೆ ಕ್ರಮದ ಎಚ್ಚರಿಕೆ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಭರ್ಜರಿ ಪ್ರಚಾರಗಳು ನಡೆಯುತ್ತಿದೆ. ಇತ್ತ ಸುಸೂತ್ರವಾಗಿ ಚುನಾವಣೆ ನಡೆಯಲು ಆಯೋಗ ಸಿದ್ಧತೆ ನಡೆಸುತ್ತಿದೆ. ಇದೀಗ ಕರ್ನಾಟಕ ಚುನಾವಣಾಧಿಕಾರಿ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಐಟಿ ಕಂಪನಿಗಳು ಸೇರಿದಂತೆ ಯಾವುದೇ ಸಂಸ್ಥೆಗಳು ಮತದಾನ ದಿನ ರಜೆ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
 

Lok Sabha Election 2024 Action Will be taken if holiday denied for Karnataka voting day says Electoral Officer ckm
Author
First Published Apr 16, 2024, 12:26 PM IST

ಬೆಂಗಳೂರು(ಏ.16) ಲೋಕಸಭಾ ಚುನಾವಣೆ ಕಸರತ್ತು ಜೋರಾಗಿದೆ. ಒಂದೆಡೆ ಪಕ್ಷಗಳು, ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಚುನಾವಣಾ ಆಯೋಗ ನ್ಯಾಯಸಮ್ಮತ-ಶಾಂತಿಯುತ ಮತದಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ ನಗರ ಪ್ರದೇಶದಲ್ಲಿ ಸೇರಿ ಒಟ್ಟಾರೆಯಾಗಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಈ ಸಮಸ್ಯೆ ತಗ್ಗಿಸಿ ಮತದಾನ ಹೆಚ್ಚಿಸಲು ಮತದಾನ ದಿನ ರಜೆ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಈ ದಿನ ಸಂಸ್ಥೆಗಳು, ಕಂಪನಿಗಳು ರಜೆ ನೀಡಬೇಕು. ಈ ಮೂಲಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತಾಗಬೇಕು ಎಂದು ಕರ್ನಾಟಕ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ. ಒಂದು ವೇಳೆ ರಜೆ ನೀಡಿದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಹಾಗೂ ಮೇ7 ರಂದು ಮತದಾನ ನಡೆಯಲಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಇದಕ್ಕಾಗಿ ಎರಡು ರಜೆಗಳನ್ನು ನೀಡಲಾಗಿದೆ.  ಐಟಿ ಕ್ಷೇತ್ರದ ಸಿಇಒ, ಮ್ಯಾನೇಜ್ಮೆಂಟ್ ಸೇರಿದಂತೆ ಹಲವು ಪ್ರಮುಖರನ್ನು ಸಂಪರ್ಕಿಸಲಾಗಿದೆ. ಈ ದಿನ ಉದ್ಯೋಗಿಗಳಿಗೆ, ಸಿಬ್ಬಂದಿಗಳಿಗೆ ರಜೆ ನೀಡಬೇಕು. ಒಂದು ವೇಳೆ ರಜೆ ನೀಡಿದಿದ್ದರೆ ಕಾರ್ಮಿಕ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

ಚುನಾವಣಾ ಆಯೋಗದಿಂದ ಶಾಕ್; 6 ರಾಜ್ಯದ ಗೃಹ ಕಾರ್ಯದರ್ಶಿಗಳನ್ನು ಹುದ್ದೆಯಿಂದ ಕೆಳಗಿಳಿಯಲು ಆದೇಶ!

ಕಡಿಮೆ ಮತದಾನ ದಾಖಲಾಗುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 1800 ಬೂತ್ ಹಾಗೂ ರಾಜ್ಯದಲ್ಲಿ 5000 ಬೂತ್‌ಗಳನ್ನು ಗುರುತಿಸಿದ್ದೇವೆ. ರಾಜ್ಯದಲ್ಲಿನ ಕಡಿಮೆ ಮತದಾನವಾಗುತ್ತಿರು ಬೂತ್ ಪೈಕಿ ಕಲ್ಯಾಣ ಕರ್ನಾಟಕ ಹಾಗೂ ಬೀದರ್ ಕೂಡ ಸೇರಿದೆ. ಬೆಂಗಳೂರು ಹಾಗೂ ರಾಜ್ಯದ ಈ ಬೂತ್‌ಗಳಲ್ಲಿ ಸರಾಸರಿ  ಶೇಕಡಾ 35ಕ್ಕಿಂತ ಕಡಿಮೆ ಮತದಾನವಾಗುತ್ತಿದೆ. ಕಡಿಮೆ ಮತಾದಾನವಾಗುತ್ತಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಐಟಿ ಕಂಪನಿಗಳು ಸೇರಿದಂತೆ ವಿವಿದ ಕಂಪನಿಗಳು ಹೆಚ್ಚಾಗಿದೆ. ಹೀಗಾಗಿ ಯಾವುದೇ ಕಂಪನಿ ರಜೆ ನೀಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

ಅಪಾರ್ಟ್‌ಮೆಂಟ್, ರೆಸಿಡೆನ್ಸಿ ವಲಯ ಸೇರಿದಂತೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ. ನಾವು ಜನರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಮತದಾರರು ಸ್ವಯಂಪ್ರೇರಿತರಾಗಿ ಮತದಾನ ಮಾಡಬೇಕು. ಏಪ್ರಿಲ್ 25 ಶುಕ್ರವಾರ. ಐಟಿ ಕಂಪನಿಗಳಲ್ಲಿರುವ ಮತದಾರರು ಮತದಾನ ಮಾಡಿ ಬಳಿಕ ರಜಾ ದಿನವನ್ನು ಸವಿಯಬಹುದು. ಹೀಗಾಗಿ ಮತದಾರರು ವಾರಾಂತ್ಯ ರಜೆ ಕಾರಣ ನೀಡಿ ಮತದಾನದಿಂದ ತಪ್ಪಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇತರ ಸಂಸ್ಥೆಗಳು ಆಯಾ ಕ್ಷೇತ್ರದ ಮತದಾರರಿಗೆ ಸಂದೇಶದ ಮೂಲಕ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. 

Lok Sabha Election 2024: ಚಳಿಗಾಲದ ಚುನಾವಣೆ ಬಿರು ಬೇಸಿಗೆಗೆ ಶಿಫ್ಟ್!
 

Follow Us:
Download App:
  • android
  • ios