ಫಸ್ಟ್ ಕಾಂಡೋಮ್ ಧರಿಸಿದ್ದು ಹೆಣ್ಣು! ಆಕೆ ಧರಿಸಿದ ಕಾಂಡೋಮ್ ಹೇಗಿತ್ತು ಗೊತ್ತಾ?

ಕಾಂಡೋಮ್ ಬಂದ ಆರಂಭದಲ್ಲಿ ಇದನ್ನು ಧರಿಸಿ ಸೆಕ್ಸ್ ಮಾಡಲು ಹಲವರು ಸಂಕೋಚಪಟ್ಟುಕೊಳ್ಳುತ್ತಿದ್ದರು. ಕ್ರಮೇಣ ಅದು ಇತರೆ ಉತ್ಪನ್ನಗಳಂತೆ ಮಾರಾಟವಾಗತೊಡಗಿತು. ಇಂದು ಜಗತ್ತಿನಾದ್ಯಂತ ಎಷ್ಟೋ ಸಾವಿರ ಕೋಟಿ ವಹಿವಾಟು ನಡೆಸುತ್ತಿರುವ ಉದ್ಯಮ ಕಾಂಡೋಮ್ ತಯಾರಿಕೆ. ಆದರೆ ಈ ಕಾಂಡೋಮ್ ಸೃಷ್ಟಿಯಾದದ್ದು, ಅದರ ಹಿನ್ನೆಲೆ ಸಖತ್ ಇಂಟೆರೆಸ್ಟಿಂಗ್ ಆಗಿದೆ.

First condom was used by woman and this is how it is invented

ಒಂದು ಕಾಲದಲ್ಲಿ ಸೆಕ್ಸ್ ಅಂದರೆ ಜನ ಹೆದರುತ್ತಿದ್ದರು. ಎಲ್ಲಿ ಮಕ್ಕಳಾಗಿ ಬಿಡಬಹುದೋ ಅನ್ನುವ ಭಯ. ಆದರೆ ಯಾವಾಗ ಕಾಂಡೋಮ್ ಗಳು ಸೆಕ್ಸ್ ಜಗತ್ತಿಗೆ ಎಂಟ್ರಿ ಕೊಟ್ಟವೋ ಆಮೇಲಿಂದ ಜನರಲ್ಲಿ ಲೈಂಗಿಕತೆ ಬಗ್ಗೆ ನಿರ್ಭೀತಿ ಹುಟ್ಟಿಕೊಂಡಿತು. ಇಂದು ಜಗತ್ತಿನಾದ್ಯಂತ ಕೋಟ್ಯಾಂತರ ಜನ ಕಾಂಡೋಮ್ ಬಳಸುತ್ತಿದ್ದಾರೆ. ಇದರಿಂದ ಮಕ್ಕಳಾಗಲ್ಲ ಅನ್ನೋದಕ್ಕಿಂತ ಹೆಚ್ಚಾಗಿ ಇದು ಲೈಂಗಿಕ ರೋಗ ಬರದ ಹಾಗೆ ತಡೆಯುತ್ತದೆ. ಸೋಂಕು ಹರಡದ ಹಾಗೆ ಮಾಡುತ್ತದೆ ಅನ್ನೋದೂ ಮುಖ್ಯವಾಗುತ್ತಿದೆ. ಕಾಂಡೋಮ್ ಬಂದ ಆರಂಭದಲ್ಲಿ ಇದನ್ನು ಧರಿಸಿ ಸೆಕ್ಸ್ ಮಾಡಲು ಹಲವರು ಸಂಕೋಚಪಟ್ಟುಕೊಳ್ಳುತ್ತಿದ್ದರು. ಕ್ರಮೇಣ ಅದು ಇತರೇ ಉತ್ಪನ್ನಗಳಂತೆ ಮಾರಾಟವಾಗತೊಡಗಿತು. ಇಂದು ಜಗತ್ತಿನಾದ್ಯಂತ ಎಷ್ಟೋ ಸಾವಿರ ಕೋಟಿ ವಹಿವಾಟು ನಡೆಸುತ್ತಿರುವ ಉದ್ಯಮ ಕಾಂಡೋಮ್ ತಯಾರಿಕೆ. ಆದರೆ ಈ ಕಾಂಡೋಮ್ ಸೃಷ್ಟಿಯಾದದ್ದು, ಅದರ ಹಿನ್ನೆಲೆ ಸಖತ್ ಇಂಟೆರೆಸ್ಟಿಂಗ್ ಆಗಿದೆ. 

ಕಿರಿಕಿರಿ ಇಲ್ಲದ ಕೇರ್‌ಫ್ರೀ ಪಿರಿಯಡ್ಸ್‌ಗೆ ಮೆನ್‌ಸ್ಟ್ರುವಲ್ ಕಪ್! 

ಮೊದಲು ಕಾಂಡೋಮ್ ಧರಿಸಿದ್ದು ಹೆಣ್ಣು!

ಇವತ್ತು ಜಗತ್ತಿನಾದ್ಯಂತ ಅನೇಕ ವೆರೈಟಿ ಕಾಂಡೋಮ್‌ಗಳು ಸಿಗುತ್ತವೆ. ಆದರೆ ಮೊದಲ ಸಲ ಕಾಂಡೋಮ್ ಧರಿಸಿದ ದಾಖಲೆ ಹೆಣ್ಣಿನದು. ಆ ಬಗ್ಗೆ ಒಂದು ಇಂಟೆರೆಸ್ಟಿಂಗ್ ಕತೆ ಇದೆ. ನಮ್ಮ ಪುರಾಣಗಳಂತೆ ಗ್ರೀಕ್ ಪುರಾಣಗಳೂ ಫೇಮಸ್. ಗ್ರೀಕ್‌ನ ಒಬ್ಬ ದೊರೆ ಕಿಂಗ್ ಮಿನೋಸ್ ಕ್ರಿಸ್ತಪೂರ್ವ 3000ನೇ ಇಸವಿಯಲ್ಲಿ ಆಳ್ವಿಕೆ ಮಾಡುತ್ತಿದ್ದ. ಈತನ ಬಗ್ಗೆ ವಿಚಿತ್ರ ಕತೆ ಇತ್ತು. ಈತನ ಪತ್ನಿಯರಲ್ಲಿ ಯಾರೂ ಬದುಕಿ ಉಳಿಯುತ್ತಿರಲಿಲ್ಲ. ಈತನ ವೀರ್ಯದಲ್ಲಿ ಹಾವು, ಚೇಳು ಬರುತ್ತದೆ. ಅದರಿಂದಾಗಿ ಆ ರಾಣಿಯರು ಸಾಯುತ್ತಾರೆ ಎಂಬ ವದಂತಿ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈ ರಾಜನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ ರಾಣಿಯರೆಲ್ಲ ಅಸುನೀಗುತ್ತಿದ್ದರು. ಇವನನ್ನು ಹೊಸತಾಗಿ ಮದುವೆಯಾದ ಪಸಿಫೆ ಎಂಬ ಹುಡುಗಿ ಧೈರ್ಯವಂತೆ. ಆದರೆ ಈ ವದಂತಿಗಳು, ರಾಜನ ಪತ್ನಿಯರ ಸಾವು ಆಕೆಯನ್ನೂ ಕಂಗೆಡಿಸಿತು. ಹೇಗಾದರೂ ಮಾಡಿ ಇದರಿಂದ ಪಾರಾಗಬೇಕಲ್ಲಾ ಅಂತ ಯೋಚಿಸಿದ ಅವಳಿಗೆ ಒಂದು ಐಡಿಯಾ ಬರುತ್ತದೆ. ಹೇಗಾದರೂ ಮಾಡಿ ರಾಜನ ವೀರ್ಯ ತನ್ನೊಳಗೆ ಹೋಗದ ಹಾಗೆ ತಡೆಯಬೇಕು ಅಂತ. ಆಗ ಆಕೆಯ ಕಣ್ಮುಂದೆ ಬಂದದ್ದು ಆಡಿನ ಕರುಳು ಚೀಲ. ಅದನ್ನೇ ತನ್ನ ಯೋನಿಯೊಳಗೆ ಹಾಕಿ ರಾಜ ವೀರ್ಯ ತನ್ನೊಳಗೆ ಹೋಗದ ಹಾಗೆ ತಡೆದಳು. ಆಕೆ ಬದುಕುಳಿದಳಂತೆ. ಹೀಗೆ ಕಾಂಡೋಮ್ ನ ಇತಿಹಾಸದಲ್ಲಿ ಮೊದಲು ಇದನ್ನು ಧರಿಸಿದ ಖ್ಯಾತಿ ಪೆಸಿಫೆ ಗೆ ಸಲ್ಲುತ್ತದೆ. 

ಆ ಬಳಿಕ ಉಳಿದ ಕೆಲವು ಹೆಂಗಸರು ಈ ಟೆಕ್ನಿಕ್ ಬಳಸ ತೊಡಗಿದರಂತೆ. ಇದಾಗಿ ಕೆಲವು ವರ್ಷಗಳ ನಂತರ ಈಜಿಪ್ಶಿಯನ್ನರು ಬಿಲೇಝಿಯಾ ಅನ್ನುವ ರೋಗದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಲೈಂಗಿಕ ಕ್ರಿಯೆ ನಡೆಸುವಾಗ ಪ್ರಾಣಿಗಳ ಅಂಗಗಳಿಂದ ಮಾಡಿದ ಕ್ಯಾಪ್ ಗಳನ್ನು ಬಳಸಲಾರಂಭಿಸಿದರು.

ಅವಳು ನಂಗೆ ಬಿದ್ಲಾ? ಗೊತ್ತಾಗೋದು ಹೇಗೆ? 

ಮುಂದಿನ ದಿನಗಳಲ್ಲಿ ರೋಮನ್ನರು ಪ್ರಾಣಿಗಳ ಕರುಳಿನ ಚೀಲವನ್ನು ಕಾಂಡೋಮ್ ನಂತೆ ಬಳಸಲಾರಂಭಿಸಿದರು. ಆದರೆ ಇವೆಲ್ಲ ಲೈಂಗಿಕ ರೋಗಗಳನ್ನು ತಡೆಯುತ್ತಿದ್ದವೇ ಹೊರತು ಮಕ್ಕಳಾಗೋದನ್ನು ತಪ್ಪಿಸುತ್ತಿರಲಿಲ್ಲ. ಆ ಬಳಿಕ ಪುರಾತನ ಚೀನಾದಲ್ಲಿ ಕೆಲವರು ಬಟ್ಟೆಗೆ ಉಪಯೋಗಿಸುವ ಸಿಲ್ಕ್ ಅನ್ನು ಕಾಂಡೋಮ್ ನಂತೆ ಬಳಸುತ್ತಿದ್ದರು ಎಂಬ ಉಲ್ಲೇಖವಿದೆ. ಆಧುನಿಕ ಕಾಂಡೋಮ್ ಗಳನ್ನು ಸೃಷ್ಟಿಸಿದಾತ ಚಾರ್ಲ್ ಗುಡ್ ಯಿಯರ್. ಈತನನ್ನು ಆಧುನಿಕ ಕಾಂಡೋಮ್‌ಗಳ ಸೃಷ್ಟಿಕರ್ತ ಎನ್ನುತ್ತಾರೆ. ಈತ ರಬ್ಬರ್‌ನಿಂದ ಕಾಂಡೋಮ್‌ಗಳನ್ನು ಸೃಷ್ಟಿಸಿದ. ಇದು ರೋಗ ಹರಡದಂತೆ ತಡೆಯುವ ಜೊತೆಗೆ ಮಕ್ಕಳಾಗೋದನ್ನೂ ತಪ್ಪಿಸುತ್ತದೆ ಎಂದಾಗ ಜಗತ್ತೇ ಈತನೆಡೆಗೆ ಅಚ್ಚರಿಯಿಂದ ನೋಡಿತ್ತು. ಇಪ್ಪತ್ತು ಹಾಗೂ ಇಪ್ಪತ್ತೊಂದನೇ ಶತಮಾನದಲ್ಲಿ ವಿಶ್ವಾದ್ಯಂತ ಎಚ್ಐವಿ ಸೋಂಕು ಹೆಚ್ಚಾದಾಗ ಈ ಕಾಂಡೋಮ್ ಬಳಕೆ ಹೆಚ್ಚುತ್ತ ಹೋಯಿತು. ಕ್ರಮೇಣ ಇದು ರೋಗಕ್ಕಿಂತ ಹೆಚ್ಚಾಗಿ ಮಕ್ಕಳಾಗದಂತೆ ತಡೆಯಲು ಗಂಡ ಹೆಂಡತಿಯರ ಲೈಂಗಿಕತೆ ವೇಳೆ ಬಳಕೆಗೆ ಬಂತು. ಈಗ ವಿಶ್ವಾದ್ಯಂತ ಸುಮಾರು ೨೦ ಬಿಲಿಯನ್ ಕಾಂಡೋಮ್ ಗಳು ವರ್ಷದಲ್ಲಿ ಬಳಕೆಯಾಗುತ್ತಿವೆಯಂತೆ!

Latest Videos
Follow Us:
Download App:
  • android
  • ios