Asianet Suvarna News Asianet Suvarna News

ತಿನ್ನುವ ಮುನ್ನ ಎಚ್ಚರ, ಅವಧಿ ಮುಗಿದ ಚಾಕ್ಲೆಟ್ ತಿಂದು ಒಂದೂವರೆ ವರ್ಷದ ಪುಟ್ಟ ಕಂದ ಮೃತ!

ತಿನಿಸು, ಚಾಕೋಲೇಟ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಖರೀದಿಸಿ ತಿನ್ನುವಾಗ ಎಚ್ಚರ ವಹಿಸಬೇಕು. ಇದೀಗ ಎಕ್ಸ್‌ಪೈರ್ ಡೇಟ್ ಮುಗಿದು ಹೋಗಿದ್ದ ಚಾಕೋಲೇಟ್ ತಿಂದ ಪುಟ್ಟ ಕಂದಮ್ಮ ರಕ್ತ ವಾಂತಿ ಮಾಡಿ ಮೃತಪಟ್ಟ ಘಟನೆ ನಡೆದಿದೆ.
 

One and half year toddler dies after consuming expired chocolate in Ludhiana ckm
Author
First Published Apr 20, 2024, 4:54 PM IST

ಲುಧಿಯಾನ(ಏ.20) ಭಾರತದಲ್ಲಿ ಆರೋಗ್ಯದ ಕುರಿತ ಕಾಳಜಿ ಹೆಚ್ಚಾಗುತ್ತಿದ್ದಂತೆ, ಆತಂಕಗಳು ಹೆಚ್ಚಾಗಿದೆ. ಇದೀಗ ಬಳಸುವ ಪ್ರತಿ ಉತ್ಪನ್ನ ಎಷ್ಟು ಸುರಕ್ಷಿತ, ಆರೋಗ್ಯಕರ ಅನ್ನೋ ಅನುಮಾನ ಮೂಡುವುದು ಸಹಜ. ಇತ್ತೀಚೆಗೆ ಹುಟ್ಟುಹಬ್ಬಕ್ಕೇ ಕೇಕ್ ಕತ್ತರಿಸಿ ತಿಂದ 10 ವರ್ಷದ ಬಾಲಕಿ ಮೃತಪಟ್ಟ ಘಟನೆ ಬೆನ್ನಲ್ಲೇ ಇದೀಗ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಅವಧಿ ಮುಗಿದ ಚಾಕೋಲೇಟ್ ತಿಂದು ಮೃತಪಟ್ಟ ಘಟನೆ ನಡೆದಿದೆ. ಚಾಕೋಲೇಟ್ ತಿಂದ ಕೆಲವೇ ಕ್ಷಣಗಲ್ಲಿ ಹೆಣ್ಣು ಮಗು ವಾಂತಿ ಮಾಡಲು ಆರಂಭಿಸಿದೆ. ಕೊನೆಗ ರಕ್ತ ವಾಂತಿ ಮಾಡಿ ತೀವ್ರ ಅಸ್ವಸ್ಥಗೊಂಡು ಮಗು ಮೃತಪಟ್ಟ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದೆ.

ಲುಧಿಯಾನ ನಿವಾಸಿಗಳು ಪಟಿಯಾಲದ ಶಾಪ್‌ನಿಂದ ಕೆಲ ವಸ್ತುಗಳ ಜೊತೆ ಒಂದೂವರೆ ವರ್ಷದ ಕಂದನಿಗೆ ಚಾಕೋಲೇಟ್ ಖರೀದಿಸಿದ್ದಾರೆ. ಈ ಚಾಕೋಲೇಟನ್ನು ಮಗುವಿಗೆ ನೀಡಿದ್ದಾರೆ. ಸಿಹಿ ಕಾರಣ ಮಗು ಕೂಡ ಸ್ವಲ್ಪ ಹೆಚ್ಚೇ ಚಾಕೋಲೇಟ್ ತಿಂದಿದೆ. ಚಾಕೋಲೇಟ್ ತಿಂದ ಕೆಲವೇ ಕ್ಷಣಗಳಲ್ಲಿ ಮಗು ಅಸ್ವಸ್ಥಗೊಂಡಿದೆ. ಜೊತೆಗೆ ವಾಂತಿ ಮಾಡಲು ಆರಂಭಿಸಿದೆ. ಗಾಬರಿಯಾದ ಪೋಷಕರು ಮಗುವಿಗೆ ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ.

ಹುಟ್ಟುಹಬ್ಬ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ತಿಂದ 10 ವರ್ಷ ಬಾಲಕಿ ನಿಧನ, ಕುಟುಂಬಸ್ಥರು ಅಸ್ವಸ್ಥ!

ಇತ್ತ ಮಗು ರಕ್ತ ವಾಂತಿ ಮಾಡಲು ಆರಂಭಿಸಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ. ಅಷ್ಟರಲ್ಲೇ ಮಗು ಮೃತಪಟ್ಟಿದೆ. ತಪಾಸಣೆ ನಡೆಸಿದ ವೈದ್ಯರು ವಿಷಕಾರಿ ಅಂಶ ಮಗುವಿನ ದೇಹ ಸೇರಿದೆ ಎಂದಿದ್ದಾರೆ. ಚಾಕೋಲೇಟ್ ರ್ಯಾಪರ್ ಪರೀಶೀಲಿಸಿದಾಗ ಅವಧಿ ಮುಗಿದಿತ್ತು. ಇತ್ತ ಮಗುವಿನ ಕುಟುಂಬಸ್ಥರು ಆಹಾರ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

 

 

ಅವಧಿ ಮುಗಿದ ಚಾಕೋಲೇಟ್ ಇಟ್ಟಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಆಹಾರ ಇಲಾಖೆ ಅಧಿಕಾರಿಗಳು ಪಟಿಯಾಲ ಚಾಕೋಲೇಟ್ ಶಾಪ್‌ಗೆ ಭೇಟಿ ನೀಡಿ ಇತರ ಚಾಕೋಲೇಟ್ ಹಾಗೂ ಉತ್ಪನ್ನಗಳ ಪರಿಶೀಲಿಸಿ ಮಾದರಿ ಸಂಗ್ರಹಿಸಿದ್ದಾರೆ. 

ಗಂಗಾವತಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ!

ಇತ್ತೀಚೆಗೆ ಪಟಿಯಾಲದ ಕುಟುಂಬ ತಮ್ಮ ಮಗಳ 10ನೇ ವರ್ಷದ ಹುಟ್ಟು ಹಬ್ಬಕ್ಕೆ ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿತ್ತು. ಸಂಬಂಧಿಕರು, ಆಪ್ತರನ್ನು ಮನೆಗೆ ಕರೆಯಿಸಿ ಕೇಕ್ ಕತ್ತರಿಸಿದ್ದರು. ಈ ವೇಳೆ ಬರ್ತ್‌ಡೇ ಗರ್ಲ್ ಮಾನ್ವಿಗೆ ಎಲ್ಲರೂ ಕೇಕ್ ತಿನ್ನಿಸಿದ್ದರು. ಜೊತೆಗೆ ಮಾನ್ವಿ ಕೂಡ ದೊಡ್ಡ ಕೇಕ್ ಪೀಸ್ ತೆಗೆದು ತಿಂದಿದ್ದಳು. ಕೆಲ ಹೊತ್ತಲ್ಲೇ ಮಾನ್ವಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಳು. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಮಾನ್ವಿ ಬದುಕುಳಿಯಲಿಲ್ಲ. ಇತ್ತ ಹುಟ್ಟುಹಬ್ಬಕ್ಕೆ ಆಗಮಿಸಿ ಕೇಕ್ ತಿಂದ ಎಲ್ಲರಿಗೂ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಪಟಿಯಾಲದ ಶಾಪ್‌ನಿಂದ ಖರೀದಿಸಿದ ಚಾಕೋಲೇಟ್ ತಿಂದು ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
 

Follow Us:
Download App:
  • android
  • ios