Asianet Suvarna News Asianet Suvarna News

Zodiac Sign: ಅಬ್ಬಬ್ಬಾ, ಸಾಕಪ್ಪಾ ಸಾಕು ಇವರ ಸಹವಾಸ, ಸಂಗಾತಿ ಮೇಲೂ ಅಸೂಯೆ ಇವ್ರಿಗೆ!

ಕೆಲವರಲ್ಲಿ ಅಸೂಯೆ ತೀವ್ರವಾಗಿರುತ್ತದೆ. ತಮ್ಮವರ ಬಗ್ಗೆಯೇ  ಅಸೂಯೆ ತಾಳುವುದು, ದ್ವೇಷಿಸಿದಂತೆ ಮಾಡುವುದು ಇವರ ಗುಣ. ಆದರೆ, ಇವರು ತಮ್ಮಲ್ಲಿರುವ ಅಭದ್ರತೆ ಅಥವಾ ಪ್ರೀತಿಯ ಅಗತ್ಯವನ್ನು ಅಸೂಯೆ ಪಡುವ ಮೂಲಕ ವ್ಯಕ್ತಪಡಿಸುತ್ತಾರೆ. 
 

Why These people jealousy according to zodiac signs sum
Author
First Published Apr 19, 2024, 6:43 PM IST

ಜಲಸಿ ಅಥವಾ ಅಸೂಯೆ ಎನ್ನುವುದು ಮನುಷ್ಯ ಸಹಜ ಭಾವನೆ. ಎಲ್ಲರಲ್ಲೂ ಒಂದಲ್ಲ ಒಂದು ಬಾರಿ, ಒಂದಲ್ಲ ಒಂದು ರೀತಿಯಲ್ಲಿ ಜಲಸಿ ಇದ್ದೇ ಇರುತ್ತದೆ. ಆದರೆ, ಅಸೂಯೆಯಿಂದಾಗುವ ಎಡವಟ್ಟುಗಳ ಬಗ್ಗೆ ತಿಳಿದಿರುವ ಬಹಳಷ್ಟು ಜನ ಅದನ್ನು ದೂರವಿಡುತ್ತಾರೆ. ಆದರೆ, ಕೆಲವರು ಹಾಗಲ್ಲ, ಅದು ಒಳ್ಳೆಯ ಗುಣವಲ್ಲ ಎನ್ನುವ ಅರಿವಿದ್ದರೂ ಸಂಬಂಧದಲ್ಲಿ ಅದನ್ನೊಂದು ಆಯುಧದಂತೆ ಬಳಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈರ್ಷ್ಯೆಯ ಗುಣವನ್ನು ನಿಭಾಯಿಸುವ ಅಭ್ಯಾಸ ಅವರವರ ರಾಶಿಚಕ್ರಕ್ಕೆ ಸಂಬಂಧಿಸಿದೆ. ಕೆಲವರು ಉದ್ದೇಶಪೂರ್ವಕವಾಗಿ ಅದನ್ನು ಮನದಿಂದ ದೂರವಿಡುತ್ತಾರೆ. ಅದನ್ನೇ ಆಧರಿಸಿ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ ಹಾಗೂ ಅಸೂಯೆಯನ್ನು ಅವಲಂಬಿಸಿ ಇನ್ನೊಬ್ಬರೊಂದಿಗೆ ಸ್ಪರ್ಧೆಗೆ ಬೀಳುವುದಿಲ್ಲ, ದ್ವೇಷ ಮಾಡುವುದಿಲ್ಲ. ಆದರೆ, ಕೆಲವರು ಹಾಗಲ್ಲ. ಅದನ್ನು ಪ್ರಮುಖ ಆಯುಧವನ್ನಾಗಿ ಬಳಸಿಕೊಂಡು ಮತ್ತೊಬ್ಬರನ್ನು ಹೈರಾಣಾಗಿಸಬಲ್ಲರು. ಈ ಗುಣ ಮುಖ್ಯವಾಗಿ ಐದು ರಾಶಿಗಳಲ್ಲಿ ಕಂಡುಬರುತ್ತದೆ. ಅಸೂಯೆಯ ಗುಣವನ್ನು ಸಂಬಂಧದಲ್ಲೂ ತಂದು ಅದನ್ನು ಸಲಕರಣೆಯಂತೆ ಬಳಸುವ ಜನ ಕೆಟ್ಟವರೇನೂ ಅಲ್ಲ. ಆದರೆ, ಇದು ಅವರ ಸ್ವಭಾವ.   

•    ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ತಮ್ಮ ಆಳವಾದ ಭಾವನೆಗಳಿಗೆ (Emotions), ತೀವ್ರತೆಗೆ (Intensity) ಹೆಸರುವಾಸಿ. ಎಲ್ಲ ರಾಶಿಗಳಿಗಿಂತ ಅಸೂಯೆ (Jealousy) ಇವರಲ್ಲಿ ಸ್ವಲ್ಪ ಜಾಸ್ತಿಯೇ ಕಂಡುಬರುತ್ತದೆ. ಇವರ ಜಲಸಿ ಹುಟ್ಟುವುದು ವಿಚಿತ್ರ ಮನೋಭೂಮಿಕೆಯಲ್ಲಿ. ತಮ್ಮ ಸಂಗಾತಿ (Partner) ತಮಗೆ ಮೋಸ ಮಾಡಿದರೆ ಎನ್ನುವ ಭಯ ಹಾಗೂ ಆಳವಾದ, ತುಂಡಾಗದ ಬಾಂಧವ್ಯದ ತುಡಿತದಿಂದ ಇವರಲ್ಲಿ ಅಸೂಯೆ ಜನಿಸುತ್ತದೆ. ಇವರು ಸಂಬಂಧದಲ್ಲಿ ಆಗಾಗ ಭರವಸೆಯನ್ನು ಬಯಸುತ್ತಿರುತ್ತಾರೆ. ಸುಲಭವಾಗಿ ನಂಬಲು ಕಷ್ಟಪಡುತ್ತಾರೆ. ಪ್ಯಾಷನೇಟ್‌ ಗುಣ ಇವರನ್ನು ಅದ್ಭುತ ಲವರ್‌ (Lover) ಆಗಿ ರೂಪಿಸುತ್ತದೆ ಆದರೆ, ಇವರ ಅಸೂಯೆ ತಡೆದುಕೊಳ್ಳುವುದು ಕಷ್ಟವೆನಿಸಿಬಿಡುತ್ತದೆ.

ಈ ರಾಶಿಗೆ ಯಾರನ್ನ ಪ್ರೀತಿಸಬೇಕೆಂದು ಗೊತ್ತಾಗಲ್ಲ, ಲವ್‌ ಅಲ್ಲಿ ಎಡವುದು ಜಾಸ್ತಿ

•    ವೃಷಭ (Taurus)
ಸಂಬಂಧದಲ್ಲಿ ಸ್ಥಿರತೆ (Stability) ಮತ್ತು ಭದ್ರತೆ (Security) ಬಯಸುವ ವೃಷಭ ರಾಶಿಯ ಜನ ಸಿಕ್ಕಾಪಟ್ಟೆ ಪೊಸೆಸಿವ್‌ (Possessive) ಗುಣ ಹೊಂದಿರುತ್ತಾರೆ. ತಮ್ಮವರ ಬಗ್ಗೆ, ತಮ್ಮ ಪ್ರೀತಿಪಾತ್ರರ ಕುರಿತು ಭಾರೀ ಬದ್ಧತೆ ಹೊಂದಿರುತ್ತಾರೆ. ಭೂಮಿ ತತ್ವದ ಈ ಜನ ಪ್ರೀತಿಪಾತ್ರರನ್ನು ತಮ್ಮ ಜೀವನದ ಮುಖ್ಯ ಭಾಗವನ್ನಾಗಿ ಪರಿಗಣಿಸುತ್ತಾರೆ. ಈ ಭಾವನೆಗೆ ಧಕ್ಕೆ ಬಂದಾಗ ಅಸೂಯೆಗೆ ತುತ್ತಾಗುತ್ತಾರೆ. ಅಸೂಯೆ ಗುಣವನ್ನು ತಮ್ಮ ಸಂಬಂಧ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬಳಸುತ್ತಾರೆ. ಆಳವಾದ ಬದ್ಧತೆಯನ್ನು (Commitment) ಇವರ ಪೊಸೆಸಿವ್‌ ನೆಸ್ಸೇ ತೋರ್ಪಡಿಸುತ್ತದೆ. 

•    ಸಿಂಹ (Leo)
ಎಲ್ಲರ ಕೇಂದ್ರಬಿಂದುವಾಗಿರಲು ಇಷ್ಟಪಡುವ ಸಿಂಹ ರಾಶಿಯ ಜನ ತಾವು ಸ್ವಲ್ಪ ನಿರ್ಲಕ್ಷ್ಯಕ್ಕೆ (Neglect) ಒಳಗಾಗಿದ್ದೇವೆ ಎನ್ನುವ ಭಾವನೆ ಬಂದಾಗ ಅಸೂಯೆಗೆ ಒಳಗಾಗುತ್ತಾರೆ. ನಂಬಿಕೆಯ ಕೊರತೆಯಿಂದ ಇವರಲ್ಲಿ ಅಸೂಯೆ ಮೊಳೆಯುವುದಿಲ್ಲ, ಬದಲಿಗೆ ಇವರ ಈಗೋದಿಂದ (Ego) ಬರುತ್ತದೆ. ಇದನ್ನು ಹೊರತುಪಡಿಸಿದರೆ ಸಿಂಹ ರಾಶಿಯವರು ತುಂಬ ಸೌಹಾರ್ದ ಗುಣದವರು. ಆದರೆ, ಇವರಲ್ಲಿ ಅಸೂಯೆ ಎನ್ನುವುದು ತಮಗೆ ಬೇಕಾಗಿರುವ ಪ್ರೀತಿ (Love) ಅಥವಾ ಗೌರವದ ಅಗತ್ಯವನ್ನು ತೋರ್ಪಡಿಸುವ ಮಾರ್ಗವಾಗಿರುತ್ತದೆ. 

•    ಕರ್ಕಾಟಕ (Cancer)
ಅತ್ಯಂತ ಸೂಕ್ಷ್ಮ ಗುಣದ, ಭಾವನಾತ್ಮಕವಾಗಿ ಆಳವಾದ ಸಂಪರ್ಕ ಹೊಂದುವ ಕರ್ಕಾಟಕ ರಾಶಿಯ ಜನರಿಗೂ ಅಸೂಯೆ ಸಿಕ್ಕಾಪಟ್ಟೆ ಕಾಡುತ್ತದೆ. ಪ್ರೀತಿಪಾತ್ರರಿಂದ ದೂರವಾಗುವ ಭಯದಿಂದ ಇವರಲ್ಲಿ ಅಸೂಯೆ ಮೂರುತ್ತದೆ. ಸಂಗಾತಿಯ ಆಳವಾದ ಬಾಂಧವ್ಯ (Relation) ಅರಿಯಲು ಅಸೂಯೆಯನ್ನು ಬಳಸಿಕೊಳ್ಳುತ್ತಾರೆ. ಭಾವನಾತ್ಮಕ ಸಂಪರ್ಕದ ಅಗತ್ಯ ಹೊಂದಿರುವ ಇವರು ಮುಕ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ, ಸುಲಭವಾಗಿ ಹರ್ಟ್‌ ಆಗುತ್ತಾರೆ. ಇವರೊಂದಿಗೆ ಮುಕ್ತ ಸಂವಹನ (Open Communication) ಮಾಡುವುದು, ಸುರಕ್ಷಿತ ಭಾವನೆ ಮೂಡಿಸುವುದು ಅಗತ್ಯ.

ಅಕ್ಷಯ ತೃತೀಯದಲ್ಲಿ ಮಂಗಳ ಬುಧ ನಿಂದ ರಾಜಯೋಗ, ಈ ರಾಶಿಗೆ ಲಕ್ಷಾಧಿಪತಿ ಯೋಗ

•    ಮೀನ (Pisces)
ಆಳವಾದ ಭಾವನೆಗಳ ಸಂಗ್ರಹದಂತಿರುವ ಮೀನ ರಾಶಿಯ ಜನ ಸಹಾನುಭೂತಿ (Empathy) ಹೊಂದಿರುವವರು. ಇವರಲ್ಲಿ ಅಸೂಯೆ ಅಂತರ್ಗತವಾಗಿರುತ್ತದೆ. ತಮ್ಮ ದೃಷ್ಟಿಕೋನ ಹಾಗೂ ಸಂಬಂಧವನ್ನು ಯಾರಾದರೂ ಅಪಾಯಕ್ಕೆ ಈಡು ಮಾಡಬಹುದು ಎನ್ನುವ ಭಯದಿಂದ ಇವರಲ್ಲಿ ಅಸೂಯೆ ಮೂಡುತ್ತದೆ. ಇವರು ತಮ್ಮ ಅಸೂಯೆಯನ್ನು ನೇರವಾಗಿ ವ್ಯಕ್ತಪಡಿಸುವುದಿಲ್ಲ ಆದರೆ, ಇವರ ಮೂಡ್‌ (Mood) ಮತ್ತು ಭಾವನೆಗಳ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರುತ್ತದೆ. 

Follow Us:
Download App:
  • android
  • ios