ಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

ವೀರಶೈವ ಧರ್ಮಸ್ಥಾಪಿತ ಪಂಚಪೀಠಗಳಲ್ಲಿ ಒಂದಾದ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ. ಶಿವನ ವಾಮದೇವ ಮುಖಸಂಜಾತಾರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಮಾಳವ ದೇಶದ ಕ್ಷಿಪ್ರ ನದಿ ತಟದಲ್ಲಿರುವ ಶ್ರೀ ಸಿದ್ಧೇಶ್ವರ ಜ್ಯೋತಿರ್ಲಿಂಗ ಮುಖದಿಂದ ದಿವ್ಯ ದೇಹಿಯಾಗಿ ಅವತರಿಸಿ ಅಲ್ಲಿಯೇ ಶ್ರೀ ಪೀಠವನ್ನು ಸ್ಥಾಪಿಸಿ ವೇದಾಂತ ಸಮ್ಮತವಾದ ಶಿವಾದ್ವೈತ ಸಿದ್ಧಾಂತವನ್ನು ಮಾನವ ಕುಲದ ಉದ್ಧಾರಕ್ಕಾಗಿ ಸಂಸ್ಥಾಪಿಸಿ ಅದನ್ನು ಬೋಧಿಸಿ ಆ ಪರಂಪರೆ ಮುಂದುವರೆಸಿದ ಮಹಾಮಹಿಮರಾಗಿದ್ದಾರೆ.

Sri ujjaini marulasiddeshwara Jatra mahotsav 2024 kottur ballari district rav

ಲೇಖಕರು-
ನಿರಂಜನ ದೇವರಮನೆ ಚಿತ್ರದುರ್ಗ.

ಭಾರತೀಯರ ಬದುಕಿನಲ್ಲಿ ಹಬ್ಬಗಳು ಮತ್ತು ಜಾತ್ರೆಗಳಿಗೆ ಒಂದು ವಿಶೇಷವಾದ ಅರ್ಥ ಹಾಗೂ ಅತಿಶಯವಾದ ಸ್ಥಾನಮಾನವಿದೆ. ಅವುಗಳು ಧಾರ್ಮಿಕ ಹಿನ್ನೆಲೆ ಹೊಂದಿ ಮಹತ್ತರವಾದ ಸಂದೇಶಗಳನ್ನು ಸಾರುತ್ತವೆ. ಸಾಮಾಜಿಕ ಜೀವನದಲ್ಲಿ ಧರ್ಮದ ಬಗ್ಗೆ ಸದಾ ಜಾಗೃಕನಾಗಿರುವಂತೆ ಮಾಡುವುದೇ ಈ ಆಚರಣೆಗಳ ಮಹೋದ್ದೇಶವಾಗಿರುತ್ತದೆ. ಎಲ್ಲ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ಎಲ್ಲರೂ ಯಾವುದೇ ಭೇದ-ಭಾವವಿಲ್ಲದೇ ಒಗ್ಗಟ್ಟಿನಿಂದ ಜಾತ್ರೆ ಆಚರಿಸುವುದರೊಂದಿಗೆ ರಥ ಎಳೆಯುವ ಮುಖೇನ ಸಾಮಾಜಿಕ ಸೌಹಾರ್ದತೆ ಪ್ರದರ್ಶಿಸುತ್ತಾರೆ. ಪರಸ್ಪರ ದ್ವೇಷಾಸೂಯೆಗಳನ್ನು ಮರೆತು ಸಹಬಾಳ್ವೆಯಿಂದ ವರ್ತಿಸುತ್ತಾರೆ. ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಲ್ಲಿ ಸಹಕಾರಿಯಾಗುತ್ತಾರೆ. 

ಇಂಥ ವೈಶಿಷ್ಯವಾದ ಆಲೋಚನೆ, ಆಚರಣೆಗಳನ್ನಿಟ್ಟುಕೊಂಡು ನಿರಂತರ ಸಾಮಾಜೋ-ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುತ್ತಿರುವ ಈ ನಾಡಿನ ಅನೇಕ ಧರ್ಮಪೀಠಗಳು ಹಾಗೂ ದೇವಮಂದಿರಗಳು ಜನತೆ ಪಾಲಿಗೆ ಸದಾ ಜೀವನ್ಮುಕ್ತಿಯ ಪುಣ್ಯತಾಣಗಳಾಗಿ ಕಂಗೊಳಿಸುತ್ತಿವೆ.

ಪರಶಿವನ ಪಂಚಮುಖಗಳಿಂದ ಪ್ರಾದುರ್ಭವಿಸಿ ವೀರಶೈವ ಮತವನ್ನು ಸ್ಥಾಪಿಸಿ, ಶಿವಸರ್ವೋತ್ತಮತೆ ಪ್ರಶಂಸಿಸಿ, ಶಿವಭಕ್ತಿ ಪ್ರಸಾರವನ್ನು ಕೈಗೊಂಡು ತಮ್ಮ ತಪಃಪ್ರಭಾವ ಹಾಗೂ ಕ್ರಿಯಾತ್ಮಕ ಶಕ್ತಿಯಿಂದ ಜಗತ್ತಿನ ಪವಿತ್ರ ಸ್ಥಳಗಳಲ್ಲಿ ಶಿವಲಿಂಗಗಳನ್ನು ಸ್ಥಾಪಿಸಿ, ಶಿವಪೂಜಾ ವೈಭವವನ್ನು ಪ್ರದರ್ಶಿಸಿ ಶೈವ-ವೀರಶೈವ-ಲಿಂಗಾಯತ ಕ್ಷೇತ್ರಗಳನ್ನು ಉದ್ಧರಿಸಿದ ಶ್ರೀ ಜಗದ್ಗುರು ಪಂಚಾಚಾರ್ಯರು ಇಡೀ ವಿಶ್ವಕ್ಕೆ ಲೋಕಪೂಜ್ಯರೆನ್ನಿಸಿದ್ದಾರೆ.

ಅಕ್ಷಯ ತೃತೀಯದಂದು ಚಿನ್ನ – ಬೆಳ್ಳಿಯಲ್ಲಿ ಯಾವುದು ಕೊಳ್ಳೋದು ಬೆಸ್ಟ್ ?
 
ಇಂಥ ವೀರಶೈವ ಧರ್ಮಸ್ಥಾಪಿತ ಪಂಚಪೀಠಗಳಲ್ಲಿ ಒಂದಾದ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ. ಶಿವನ ವಾಮದೇವ ಮುಖಸಂಜಾತಾರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಮಾಳವ ದೇಶದ ಕ್ಷಿಪ್ರ ನದಿ ತಟದಲ್ಲಿರುವ ಶ್ರೀ ಸಿದ್ಧೇಶ್ವರ ಜ್ಯೋತಿರ್ಲಿಂಗ ಮುಖದಿಂದ ದಿವ್ಯ ದೇಹಿಯಾಗಿ ಅವತರಿಸಿ ಅಲ್ಲಿಯೇ ಶ್ರೀ ಪೀಠವನ್ನು ಸ್ಥಾಪಿಸಿ ವೇದಾಂತ ಸಮ್ಮತವಾದ ಶಿವಾದ್ವೈತ ಸಿದ್ಧಾಂತವನ್ನು ಮಾನವ ಕುಲದ ಉದ್ಧಾರಕ್ಕಾಗಿ ಸಂಸ್ಥಾಪಿಸಿ ಅದನ್ನು ಬೋಧಿಸಿ ಆ ಪರಂಪರೆ ಮುಂದುವರೆಸಿದ ಮಹಾಮಹಿಮರಾಗಿದ್ದಾರೆ.

Sri ujjaini marulasiddeshwara Jatra mahotsav 2024 kottur ballari district rav

ಈ ಪರಂಪರೆಯ ಶ್ರೀ ದಾರುಕಾಚಾರ್ಯರು ಹಿಂದುಳಿದ ಜಾತಿಯ ಕೀಲಿಗನಾದ ದಧೀಚಿಗೆ ಶಿವಾದ್ವೈತವನ್ನು ಬೋಧಿಸಿ ಕುಲ-ಹದಿನೆಂಟು ಜಾತಿಯನ್ನು ಉದ್ಧರಿಸಿದ ಸಮಾಜ ಪರಿವರ್ತನ ಮಹಾ ಪ್ರವರ್ತಕರಾಗಿದ್ದಾರೆ.  

ಕಾಲಾಂತರದಲ್ಲಿ ಕರ್ನಾಟಕದ ಉಜ್ಜಯಿನಿ ಪರಿಸರಕ್ಕೆ ಸ್ಥಳಾಂತರವಾದ ಈ ಪೀಠ ಅಂದಿನ ತನ್ನ ಧರ್ಮ-ಸಂಸ್ಕೃತಿ-ಪರಂಪರೆಯನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ. ಈ ಪೀಠದ ಆಚರಣೆಗಳಲ್ಲಿ ಬಹುಮುಖ್ಯವಾದ ಶ್ರೀ ಮರುಳಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ತೈಲಾಭಿಷೇಕ ಬಹುವಿಶಿಷ್ಟವಾಗಿದ್ದು, ಅವುಗಳು ವೈಭವಪೂರ್ಣವಾಗಿ ಜರುಗುವುದರೊಂದಿಗೆ ರಾಷ್ಟ್ರದ ಭಾವೈಕ್ಯತೆಯ ಬೆಸುಗೆಯಾಗಿ, ಸರ್ವಧರ್ಮ ಸಹಿಷ್ಣುತೆಯ ಸಂಬಂಧಿಯಾಗಿ, ಸಾಮಾಜಿಕ ಸಂವೇದನೆಯ ಸೇತುಬಂಧವಾಗಿ ತನ್ನ ಆಚರಣೆಗಳನ್ನು ಅನಾವರಣಗೊಳಿಸಿಕೊಂಡಿದೆ.

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೀಠ ಪರಂಪರೆಯೊಂದಿಗೆ ಜನಪರ ಕಲ್ಯಾಣವನ್ನು ತಮ್ಮದಾಗಿಸಿಕೊಂಡು ಮಾನವ ಧರ್ಮ ಎತ್ತಿ ಹಿಡಿಯುವ ಕೈಂಕರ್ಯವನ್ನು ಸದಾ ನಿರ್ವಹಿಸುತ್ತಿದ್ದಾರೆ. ಈ ನಾಡು ವಿಶ್ವಕಲ್ಯಾಣ ರಾಷ್ಟ್ರವಾಗಲಿ, ಸರ್ವರೂ ಸುಖ-ಸಂತೋಷದಿಂದ ಬಾಳಲಿ, ನಾಡಿನ ಕ್ಷಾಮ-ಡಾಮರಗಳು ದೂರವಾಗಿ ಕ್ಷೇಮ-ಸಂಪತ್ತುಗಳು ಸದಾ ನೆಲೆಸುವಂತಾಗಲಿ, ಭಕ್ತರು ವಾಸಿಸುವ ಊರು-ಕೇರಿಗಳು ಒಂದಾಗಿ ಧರ್ಮ-ಸಂಸ್ಕೃತಿಯ ನೆಲೆಗಳಾಗಲಿ ಎಂಬ ಪ್ರೇರಕ ಧರ್ಮಶಕ್ತಿಯನ್ನು ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅನುಷ್ಠಾನಗೊಳಿಸುತ್ತಾರೆ. 

ಅಕ್ಷಯ ತದಿಗೆ ಅಮವಾಸ್ಯೆಯೆಂದು ಕ್ಷೇತ್ರನಾಥ ಶ್ರೀ ಮರುಳಸಿದ್ಧೇಶ್ವರಸ್ವಾಮಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರತಿ ದಿವಸ ವಿವಿಧ ವಾಹನೋತ್ಸವಗಳನ್ನು ನಡೆಸಲಾಗುತ್ತದೆ. ಇವುಗಳು ಧರ್ಮ-ಸಂಸ್ಕೃತಿಯನ್ನು ರಕ್ಷಿಸಿ, ಪೋಷಿಸುವಂತಹ ಕಾರ್ಯಕ್ರಮಗಳ ಧ್ಯೋತಕವಾಗಿರುತ್ತವೆ. 

ಈ ನಾಡಿನ ರೈತರಿಗೆ ಶ್ರೀ ಮರುಳಸಿದ್ಧೇಶ್ವರನ ಕೃಪೆ ಇದ್ದರೇ ಮಳೆ, ಬೆಳೆ ಸಮೃದ್ಧವಾಗಿ ಬರುತ್ತದೆಂಬ ಗಾಢ ನಂಬಿಕೆ ಭಕ್ತರಲ್ಲಿರುವುದರಿಂದ ಈ ಜಾತ್ರಾ ಮಹೋತ್ಸವಕ್ಕೆ ಬರುವ ರೈತರು, ಭಕ್ತಾದಿಗಳು ತಮ್ಮ ದಾಸೋಹ ಸೇವೆಯನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ. 
ಹತ್ತಾರು ದಿನಗಳವರೆಗೆ ಜರುಗುವ ಈ ಜಾತ್ರಾ ಮಹೋತ್ಸವ ನೂರಾರು ಚಿಂತನೆಗಳನ್ನು ಇಟ್ಟುಕೊಂಡು ಸಮಾಜೋ-ಧಾರ್ಮಿಕ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಸಾಮಾಜಿಕ ಸೌಹಾದರ್ತೆಯ ತತ್ವ-ಸಿದ್ಧಾಂತಗಳನ್ನು ಸಾರಿ ಸತ್ವಪೂರ್ಣ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತದೆ. 

ಪ್ರಸ್ತುತ ಶ್ರೀ ಜಗದ್ಗುರುಗಳು ಶ್ರೀ ಪೀಠದ ಧರ್ಮ-ಸಂಸ್ಕೃತಿ-ಪರಂಪರೆಯನ್ನು ಆಧುನಿಕತೆಯೊಂದಿಗೆ ಮುಖಾ-ಮುಖಿಯಾಗಿಸಿ ಶ್ರೀ ಪೀಠದ ಅಸ್ಮಿತೆಯನ್ನು ಇಡೀ ನಾಡಿಗೆ ಅನಾವರಣಗೊಳಿಸುತ್ತಿರುವುದು ಬಹುವಿಶೇಷವಾಗಿದೆ. ಹಾಗೆಯೇ ಇಂದಿನ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಭವ್ಯತೆಯನ್ನು ಬೆಳಗಿಸಿ ಎಂಬ ಘೋಷವಾಕ್ಯವನ್ನು ಶ್ರೀಪೀಠದ ವತಿಯಿಂದ ಪ್ರಕಟಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದ ಪರಿ ತುಂಬಾ ಶ್ಲಾಘನೀಯವಾಗಿದೆ. 

Sri ujjaini marulasiddeshwara Jatra mahotsav 2024 kottur ballari district rav

ಕಾರ್ಯಕ್ರಮಗಳ ವಿವರ

ಮೇ.12ರ ಭಾನುವಾರ ಇಳಿಹೊತ್ತು 5 ಗಂಟೆಗೆ ಶ್ರೀ ಮರುಳಸಿದ್ಧೇಶ್ವರಸ್ವಾಮಿಯ ಮಹಾರಥೋತ್ಸವ ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಾವಿರಾರು ಶಿವಾಚಾರ್ಯರ ನೇತೃತ್ವದಲ್ಲಿ, ನೂರಾರು ವಿರಕ್ತ ಚರಮೂರ್ತಿಗಳ ಸಮ್ಮುಖದಲ್ಲಿ ನಾಡಿನ ಲಕ್ಷಾಂತರ ಜನತೆಯ ಉಪಸ್ಥಿತಿಯಲ್ಲಿ ವಿವಿಧ ಜಾನಪದ ಕಲಾಮೇಳಗಳೊಂದಿಗೆ ಸಾಲಂಕೃತ ವರ್ಣರಂಜಿತ ಭವ್ಯವಾದ ಮಹಾರಥ ಉಜ್ಜಯಿನಿ ಪೀಠ ಪರಿಸರದಲ್ಲಿ ಅತ್ಯಂತ ಶ್ರದ್ಧಾ-ಭಾವ-ಭಕ್ತಿಯೊಂದಿಗೆ ಎಳೆಯಲ್ಪಡುತ್ತದೆ. ಈ ಸಂದರ್ಭದಲ್ಲಿ ಭಕ್ತರ ಮನಸ್ಸು, ಭಾವನೆಗಳು ಧನ್ಯತಾ ಭಾವ ಪಡೆಯುವುದರೊಂದಿಗೆ ಪ್ರಫುಲ್ಲವಾಗುತ್ತವೆ. ಹಾಗೆಯೇ ಆ ವಿಹಂಗಮ ನೋಟ ಅತ್ಯಂತ ಮನೋಹರವಾಗಿರುತ್ತದೆ. ಅಂದು ಸಂಜೆ 7ಕ್ಕೆ ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಸದ್ಧರ್ಮ ಜನಜಾಗೃತಿ ಧರ್ಮ ಸಮಾರಂಭ ಅತ್ಯಂತ ಸಡಗರ-ಸಂಭ್ರಮಗಳಿಂದ ಜರುಗುತ್ತದೆ. ಶ್ರೀ ದಾರುಕರ ಜನಹಿತ ಕಾರ್ಯಗಳು ಹಾಗೂ ಅವರು ಕೈಗೊಂಡ ಅಪ್ರತಿಮ ಪವಾಡ ಸದೃಶ ಕಾರ್ಯಗಳನ್ನು ಈ ಸಂದರ್ಭದಲ್ಲಿ ವಿಧ್ವತ್‌ಪೂರ್ಣ ಉಪನ್ಯಾಸದ ಮುಖೇನ ಅನಾವರಣಗೊಳಿಸಲಾಗುತ್ತದೆ.

 ಮೇ13ರ ಸೋಮವಾರ ಸಂಜೆ 5 ಗಂಟೆಗೆ ಸರಿಯಾಗಿ ಶ್ರೀ ಮರುಳಸಿದ್ಧೇಶ್ವರಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭಿಷೇಕವನ್ನು ನೆರವೇರಿಸಲಾಗುತ್ತದೆ. ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಮತ್ತು ಶ್ರೀಮದ್ ಕಾಶಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಅಂದು ನಾಡಿನ ಮೂಲೆ-ಮೂಲೆಗಳಿಂದ ಆಗಮಿಸುವ ಅಸಂಖ್ಯಾತ ಭಕ್ತಾದಿಗಳು ಹಾಗೂ ಜರೀಮಲೆ ರಾಜವಂಶಸ್ಥರಿಂದ ಅತ್ಯಂತ ಭಕ್ತಿಪೂರ್ವಕವಾಗಿ ಶಿಖರಕ್ಕೆ ತೈಲವನ್ನು ಎರೆಯಲಾಗುತ್ತದೆ. ಈ ಕಾರ್ಯದಿಂದ ನಾಡಿನ ಜನತೆಗೆ ಬಂದೊಂದಗಿದ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಸುಖ-ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಹಾಗೂ ಶನಿದೋಷನಿವಾರಣೆಗೆ ಈ ಕಾರ್ಯವನ್ನು ನಡೆಸಲಾಗುತ್ತದೆ.

 

ಜೂನ್ 6 ರವರೆಗೆ ಈ ರಾಶಿಗೆ ಉತ್ತಮ ಹಣ ಸಿಗುತ್ತದೆಯೇ? ದೇವಗುರುವಿನ ಅಧಃಪತನದಿಂದಾಗಿ ಆದಾಯದಲ್ಲಿ ಭಾರೀ ಏರಿಕೆ

ಮೇ.14ರ ಮಂಗಳವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವೀರಮಾಹೇಶ್ವರ ಜಂಗಮ ವಟುಗಳಿಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಹಾಗೂ ಧರ್ಮೋದೇಶ. ಮೇ.17ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ನಡೆಯುತ್ತದೆ. ಕೊನೆ ದಿವಸ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಆಘ್ರವಣೆ ನೀಡುವ ಮುಖೇನ ಕಂಕಣ ವಿಸರ್ಜನೆ ಹಾಗೂ ದೇವಾಲಯ ಶುದ್ಧೀಕರಣ ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios