Asianet Suvarna News Asianet Suvarna News

ಗಂಗಾವತಿ: ಹೇಮಗುಡ್ಡದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ, ಗತ ವೈಭವದ ದಸರಾಕ್ಕೆ ಕ್ಷಣಗಣನೆ

 ಆ. 15 ರಿಂದ ದಸರಾ ಉತ್ಸವ ಪ್ರಾರಂಭಗೊಂಡಿದ್ದು, ದಿನ ನಿತ್ಯ 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. 9 ದಿನಗಳ ಕಾಲ ಮೈಸೂರು ಮಾದರಿಯಲ್ಲಿ ಉತ್ಸವ ನಡೆಯಲಿದೆ.
 

Preparations for the Jambo Savari at Hemagudda in Gangavathi grg
Author
First Published Oct 22, 2023, 11:00 PM IST

ರಾಮಮೂರ್ತಿ ನವಲಿ

ಗಂಗಾವತಿ(ಅ.22): ತಾಲೂಕಿನ ಐತಿಹಾಸಿಕ ಸ್ಥಳ ಎನಿಸಿಕೊಂಡಿರುವ ದಸರಾ ಉತ್ಸವ ಜಂಬು ಸವಾರಿಗೆ ಸಿದ್ದತೆ  ನಡೆದಿದ್ದು, ಇದಕ್ಕಾಗಿ ಆನೆ.ಒಂಟೆ ಸೇರಿದಂತೆ ಕಲಾ ತಂಗಳು ಆಗಮಿಸಿವೆ. ಆ. 15 ರಿಂದ ದಸರಾ ಉತ್ಸವ ಪ್ರಾರಂಭಗೊಂಡಿದ್ದು, ದಿನ ನಿತ್ಯ 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. 9 ದಿನಗಳ ಕಾಲ ಮೈಸೂರು ಮಾದರಿಯಲ್ಲಿ ಉತ್ಸವ ನಡೆಯಲಿದೆ.

ಗಂಗಾವತಿ, ಕೊಪ್ಪಳ ರಸ್ತೆಯ ಮಾರ್ಗದಲ್ಲಿ ಆಲಂಕಾರಗೊಂಡಿದೆ. 39  ವರ್ಷದಿಂದ ದಸರಾ  ಉತ್ಸವ ನಡೆಯುತ್ತಿದ್ದುಅ.23  ರಂದು ಆನೆಯ ಮೇಲಿ ಅಂಬಾರಿ ಮೆರವಣಿಗೆ ಹಾಗೂ ಪೂಜೆ ನಡೆಯಲಿದ್ದು, ಆ 24 ರಂದು ಮಹಾರಥೋತ್ಸವ ಮತ್ತು ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. 

ಪೇ ಆನ್ ಲೈನ್ ಚರ್ಚಾ ಸ್ಪರ್ಧೆ: ಗಂಗಾವತಿ ಬಾಲಕನಿಗೆ ಪ್ರಧಾನಿಯಿಂದ ಅಭಿನಂದನಾ ಪ್ರಮಾಣ ಪತ್ರ

ಗಂಗಾವತಿ ನಗರದದಿಂದ 11ಕಿಮೀ ದೂರದಲ್ಲಿ ಹೇಮಗುಡ್ಡ ಇದ್ದು, ಇಲ್ಲಿ ಪ್ರಸಿದ್ಧವಾಗಿರುವ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ, 7 ಗುಡ್ಡಗಳ ಸಾಲಿನಲ್ಲಿ ಹೇಮ ಒಂದಾಗಿದೆ.. ವಿಜಯನಗರ ಅರಸರಿಗೆ ಪಾಳೆಯಗಾರನಾಗಿದ್ದ ನಾಯಕ ಜನಾಂಗದವರು 15ನೇ ಶತಮಾನದೊತ್ತಿಗೆ ರಾಜ್ಯ ವನ್ನು ಆಳತೊಡಗಿ ವಿಜಯನಗರ ಪ್ರೌಢದೇವರಾಯನ ಕಾಲದಲ್ಲಿ 12 ಗ್ರಾಮಗಳನ್ನು ಉಂಬಳಿಯಾಗಿ ನಡೆದ ಗುಜ್ಜಲ ವಂಶದ ಪರಸಪ್ಪನಾಯಕ  ಹೆಸರು ಸಂಪಾದಿಸಿದ್ದ. ಪರಸಪ್ಪ ನಾಯಕನ ಮಗ ಉಡಚಪ್ಪ ನಾಯಕ ಪ್ರಭಾವಶಾಲಿ ನಾಯಕನಾಗಿದ್ದ. ಈ ನಾಯಕನೇ ಕನಕಗಿರಿಯನ್ನು ವಿಸ್ತರಿಸಿದರು. ಉಡಚಪ್ಪ ನಾಯಕ ಹೇಮಗಿರಿ ಕೋಟೆಯನ್ನು ನಿರ್ಮಿಸಿದ. ಅದೇ ಹೇಮಗುಡ್ಡ ಕೋಟೆ ಎಂದು ಹೆಸರಾಯಿತು, ಈ ಹೇಮಗುಡ್ಡದಲ್ಲಿರುವ ಲಕ್ಷ್ಮೀ ಕನಕಾಚಲ ದೇವಸ್ಥಾನ, ಈಶ್ವರ ದೇವಸ್ಥಾನ, ಚಾಮುಂಡಿ ದೇವಸ್ಥಾನ, ಹನುಮಂತ ದೇವರ ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ಉಡಚಪ್ಪನಾಯಕರಿಗೆ ಸಲ್ಲುತ್ತದೆ.

ಮೈಸೂರು ಅಂಬಾರಿ ಇಲ್ಲಿದೆಃ : 

ಮೈಸೂರು ದಸರಾ ಪ್ರಾರಂಭವಾಗಿದ್ದೇ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ, ಕುಮ್ಮಟದುರ್ಗದಲ್ಲಿ (ಹೇಮಗುಡ್ಡ) ದುರ್ಗಾ ಪರಮೇಶ್ವರಿಯನ್ನು ಪೂಜಿಸಲಾಗುತ್ತಿತ್ತು. ಕುಮ್ಮಟದುರ್ಗದ ಅರಸರ ನಂತರ ಕಂಪಿಲರಾಯರ ಮೊಮ್ಮಕ್ಕಳಾದ ಹಕ್ಕ- ಬುಕ್ಕರು ಇದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು.

ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಕುಮ್ಮಟದುರ್ಗದ ಪಾತ್ರ ಹಿರಿದಾದದ್ದು ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ವಿಜಯನಗರ ಇತಿಹಾಸ ಒಂದು ವಿಶಿಷ್ಟವಾದದ್ದು. ಅದು ಸಾಹಿತ್ಯ, ಸಂಗೀತ, ಕಲೆ, ಧರ್ಮ, ವೀರ ಪರಂಪರೆಯ ಸಂಕೇತ. 

ಹಳಿ ತಪ್ಪಿದ ಯಶವಂತಪುರ- ಕಾರಟಗಿ ಎಕ್ಸ್‌ಪ್ರೆಸ್‌ ರೈಲು: ತಪ್ಪಿದ ಭಾರಿ ಅನಾಹುತ

ಇಂತಹ ಪ್ರಸಿದ್ದ ಐತಿಹಾಸಿಕವಾಗಿರುವ ಹೇಮಗುಡ್ಡದಲ್ಲಿ ದಸರಾ ಉತ್ಸವದ ಅಂಗವಾಗಿ ಆನೆಯ ಮೇಲೆ ದುರ್ಗಾಪರಮೇಶ್ವರಿ ವಿಗ್ರಹ ಅಲಂಕರಿಸಿ  ಅಂಬಾರಿ ಮೆರವಣಿಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಿದ್ದತೆ ನಡೆದಿದ್ದು, ವಿವಿಧ ಜಿಲ್ಲೆಗಳಿಂದ ಸಹಸ್ರಾರು ಜನರು ಭಾಗವಹಿಸಲಿದ್ದಾರೆ.

ಕಳೆದ 39 ವರ್ಷಗಳಿಂದ ಹೇಮಗುಡ್ಡದಲ್ಲಿ ದಸರಾ ಉತ್ಸವ ನಡೆಸುತ್ತಾ ಬಂದಿದೆ. ಮೈಸೂರು ಮಾದರಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು,  ಮೈಸೂರಿನಲ್ಲಿ ನಡೆಯುವ ಜಂಬು ಸವಾರಿಗೆ  ಅಂಬಾರಿ ಇಲ್ಲಿಯದೇ ಎಂಬ ತಿಹಾಸ ಇದೆ.  ಪ್ರತಿ ವರ್ಷ ಸಾಮೂಹಿಕ ವಿವಾಹಗಳು ನಡೆಯುತ್ತವೆ ಎಂದು ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿಯ ವ್ಯವಸ್ಥಾಪಕರು ಹಾಗೂ ಮಾಜಿ ಶಾಸಕ ಎಚ್.ಆರ್.ಶ್ರೀನಾಥ ತಿಳಿಸಿದ್ದಾರೆ. 

Follow Us:
Download App:
  • android
  • ios