Asianet Suvarna News Asianet Suvarna News

ಒಂದೇ ದಿನ ದಚ್ಚು-ಕಿಚ್ಚಾ ಸಿನಿಮಾ! ಮುಖಾಮುಖಿಯಾಗಲಿದ್ದಾರೆ ಹಳೆ ಗೆಳೆಯರು

ತಾರಕ್ ಚಿತ್ರದ ಕ್ರೇಜ್ ತಾರಕಕ್ಕೇರುತ್ತಿದೆ.ಕಿಚ್ಚನ ರಾಜು ಕನ್ನಡ ಮೀಡಿಯಂ ಕೂಡಾ ಸಕತ್ ಸೌಂಡ್ ಮಾಡುತ್ತಿದೆ. ಈ ಹಳೆ ಗೆಳೆಯರು ಒಂದೇ ದಿನ ಮುಖಾಮುಖಿ ಆಗೋ ಸಾಧ್ಯತೆ ಇದೆ.

Sudeep and Darshan Cinema Released same Day

ಬೆಂಗಳೂರು (ಸೆ.19): ತಾರಕ್ ಚಿತ್ರದ ಕ್ರೇಜ್ ತಾರಕಕ್ಕೇರುತ್ತಿದೆ.ಕಿಚ್ಚನ ರಾಜು ಕನ್ನಡ ಮೀಡಿಯಂ ಕೂಡಾ ಸಕತ್ ಸೌಂಡ್ ಮಾಡುತ್ತಿದೆ. ಈ ಹಳೆ ಗೆಳೆಯರು ಒಂದೇ ದಿನ ಮುಖಾಮುಖಿ ಆಗೋ ಸಾಧ್ಯತೆ ಇದೆ.

ಹಳೇ ಗೆಳೆಯರ ಹೊಸ ಸಿನಿಮಾಗಳು  ಒಂದೇ ದಿನ ಬರ್ತಿವೆ. ದಸರಾ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಕತ್ ಕಿಕ್ ಕೊಡಲಿದ್ದಾರೆ. ತಾರಕ್ ಅಂತ ದರ್ಶನ್ ಬೆಳ್ಳಿ ತೆರೆ ರಂಗೇರಿಸಲು ಸಜ್ಜಾಗಿದ್ದಾರೆ. ಈಗಾಗಲೇ 10 ಲಕ್ಷ ಹಿಟ್ಸ್'ಗಳು ಯುಟ್ಯೂಬ್ ನಲ್ಲಿ ಬಂದಿವೆ. ಸುದೀಪ್ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ರಾಜು ಕನ್ನಡ ಮೀಡಿಯಂ ಕೂಡಾ ಭಾರೀ ಹವಾ ಮಾಡಿದೆ. ಅದರ ಒಂದೇ ಒಂದು ಟೀಸರ್ 11 ಲಕ್ಷದಷ್ಟು ಹಿಟ್ಸ್ ಪಡೆದು ಹೊಸ ಕಿಚ್ಚು ಹಚ್ಚಿದೆ. ಇವರೆಡೂ ಸಿನಿಮಾ ಒಂದೇ ದಿನ ಬರೋ ಸಾಧ್ಯತೆ ಬಹುತೇಕ ಇದೆ. ಅದೇ ಸುದ್ದಿನೇ ಎಲ್ಲೆಡೆ ಹರೆದಾಡುತ್ತಿದೆ. ಸೆಪ್ಟೆಂಬರ್ 29 ಕ್ಕೆ ಬರುತ್ತೇವೆ ಅಂತ ತಾರಕ್ ಡೈರೆಕ್ಟರ್ ಮಿಲನಾ ಪ್ರಕಾಶ್ ಅನೌನ್ಸ್ ಮಾಡಿ ಆಗಿದೆ. ರಾಜು ಕನ್ನಡ ಮೀಡಿಯಂ ಚಿತ್ರವೂ ಇದೇ ದಿನ ಬರಲು  ಪ್ಲಾನ್ ಆಗಿದೆ.

ಮೈ ಆಟೋಗ್ರಾಫ್ ಮತ್ತು ಸುಂಟರಗಾಳಿ ಕೂಡ ಈ ಹಿಂದೆ ಒಂದೇ ದಿನ ಬಂದಿದ್ದವು. ಆದರೆ,ಈಗ ಈ ಸ್ಟಾರ್​ಗಳ ಎದುರು,ಟಾಲಿವುಡ್​'ನ ಪ್ರಿನ್ಸ್ ಮಹೇಶ್ ಬಾಬು ಕೂಡ ಸ್ಪೈಡರ್ ಆಗಿ ಬರ್ತಿದ್ದಾರೆ. ಕರ್ನಾಟಕದಲ್ಲೂ ಈ ತಾರೆಗೆ ಅಭಿಮಾನಿಗಳಿದ್ದಾರೆ. ಅದರಲ್ಲೂ ಎರಡು ದಿನ ಮುಂಚೇನೆ ಈ ಸಿನಿಮಾ ರಿಲೀಸ್ ಆಗುತ್ತಿದೆ. 27 ಕ್ಕೆ ಸ್ಪೈಡರ್ ಬಂದ್ರೆ, 29 ಕ್ಕೆ ತಾರಕ್ ಮತ್ತು ರಾಜು ಕನ್ನಡ ಮೀಡಿಯಂ ರಿಲೀಸ್ ಆಗುತ್ತಿದೆ.

 

Follow Us:
Download App:
  • android
  • ios