Asianet Suvarna News Asianet Suvarna News

ಶಿಲ್ಪಾ ಶೆಟ್ಟಿಗೆ ಒಲಿದ ಪೇಟಾ ಪ್ರಶಸ್ತಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಹೀರೋ ಟು ಅನಿಮಲ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪೀಪಲ್ ಪಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ)ದಿಂದ  ಈ ಪ್ರಶಸ್ತಿಯನ್ನು ನೀಡಲಾಗಿದೆ.

Shilpa Shetty wins PETAs Hero To Animals Award

ಮುಂಬೈ (ಡಿ.17): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಹೀರೋ ಟು ಅನಿಮಲ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪೀಪಲ್ ಪಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ)ದಿಂದ  ಈ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಾಣಿಗಳ ಮೇಲಿನ ವಿವಿಧ ರೀತಿಯ ಹಿಂಸೆಯನ್ನು ತಡೆಯುವ ಬಗ್ಗೆ ಧ್ವನಿ ಎತ್ತಿದ ನಿಟ್ಟಿನಲ್ಲಿ ಹಾಗೂ ಶಿಲ್ಪಾ ಅವರಿಗೆ ಪ್ರಾಣಿಗಳ ಮೇಲೆ ಇರುವಂತಹ ಸಹಾನುಭೂತಿಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪೇಟಾ ಸಂಸ್ಥೆ ಹೇಳಿದೆ.

ಶಿಲ್ಪಾ ಹೆಚ್ಚು ಅಂತರಂಗದ ಸೌಂದರ್ಯವನ್ನು ಹೊಂದಿದ್ದಾರೆ. ಪ್ರಾಣಿಗಳ ಮೇಲೆ ಹೆಚ್ಚಿನ ಪ್ರೀತಿ ವಾತ್ಸಲ್ಯವನ್ನು ಹೊಂದಿದ್ದು,  ಈ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ಈ ಎಲ್ಲಾ ಕಾರ್ಯಗಳನ್ನೂ ಕೂಡ ಪರಿಗಣನೆಗೆ ತೆಗೆದುಕೊಂಡು  ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪೇಟಾದ ಸೆಲೆಬ್ರಿಟಿ ಮತ್ತು ಪಬ್ಲಿಕ್ ರಿಲೇಶನ್ ವಿಭಾಗದ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಸಚಿನ್ ಬಂಗೇರಾ ಹೇಳಿದ್ದಾರೆ.

Follow Us:
Download App:
  • android
  • ios