entertainment
By Suvarna Web Desk | 07:03 PM July 14, 2017
ಜೆಡಿಎಸ್ ಮುಖಂಡನ ಜೊತೆ ಸ್ಯಾಂಡಲ್'ವುಡ್ ಖ್ಯಾತ ನಟಿಯ ಸೀಕ್ರೇಟ್ ವಿವಾಹ: ವರ ಶಾಸಕ ಜಮೀರ್ ಸಂಬಂಧಿ

Highlights

ಜೆಡಿಎಸ್ ಮುಖಂಡನ ಜೊತೆ ಖ್ಯಾತ ಸ್ಯಾಂಡಲ್'ವುಡ್ ನಟಿಯ ಸೀಕ್ರೇಟ್ ವಿವಾಹ: ವರ ಶಾಸಕ ಜಮೀರ್ ಸಂಬಂಧಿ

ಬೆಂಗಳೂರು(ಜು.14): ಹುಡುಗರು, ಪಂಚರಂಗಿ,ಬುಲ್'ಬುಲ್ ಪರಮಾತ್ಮ, ಲೈಫು ಇಷ್ಟೇನೆ ಸೇರಿದಂತೆ  ಸ್ಯಾಂಡಲ್'ವುಡ್'ನ ಹಲವು ಚಿತ್ರಗಳಲ್ಲಿ ನಟಿಸಿದ್ದ  ಖ್ಯಾತ ನಟಿ ರಮ್ಯಾ ಬರ್ನಾ ಗೌಪ್ಯವಾಗಿ ವಿವಾಹವಾಗಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ನಟರು ತಾವು ಮದುವೆ ಯಾಗಬೇಕಿದ್ದರೆ  ಮಾಧ್ಯಮಗಳಿಗೆ ಹೆಚ್ಚು ಪ್ರಚಾರ ನೀಡುತ್ತಾರೆ. ಆದರೆ ರಮ್ಯಾ ಬರ್ನಾ ಯಾರಿಗೂ ಹೇಳದೆ ಮೇ.29ರಂದು ಶಿವಾಜಿ ನಗರದ ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ಉದ್ಯಮಿ, ಜೆಡಿಎಸ್ ಮುಖಂಡ ಫಹಾನ್​​​​ ಅಲಿಖಾನ್ ಅವರೊಂದಿಗೆ ಮದುವೆಯಾಗಿದ್ದಾರೆ.

ಫಹದ್ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ಸಂಬಂಧಿಕರಾಗಿದ್ದು, 2010ರ ಬಿಬಿಎಂಪಿ ಚುನಾವಣೆಯಲ್ಲಿ ಜಯಮಹಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮದುವೆಯಾಗಿರುವ ವಿಷಯ ತಮಗೆ ತಿಳಿದಿಲ್ಲವೆಂದು ಶಾಸಕ ಜಮೀರ್ ಅಹಮದ್ ಖಾನ್ ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ಅವರ ಹೊಸ ಚಿತ್ರ ಟಾಸ್ ಇನ್ನೇನು ಬಿಡುಗಡೆಯಾಗಲಿದ್ದು, ಇದು ನನ್ನ ಕೊನೆಯ ಚಿತ್ರ ಮುಂದೆ ಸಿನಿಮಾ ಕ್ಷೇತ್ರ ಬಿಟ್ಟು ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಮಾಧ್ಯಮದವರಿಗೆ ತಿಳಿಸಿದ್ದರು. ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿರುವುದು ನಿಜ. ನಮ್ಮದು ಪ್ರೇಮ ವಿವಾಹ. ನಮ್ಮ ಪತಿ ನನಗೆ ತುಂಬ ವರ್ಷಗಳಿಂದ ಪರಿಚಯ ಎಂದು ' ಸುವರ್ಣ ನ್ಯೂಸ್'ಗೆ ಹೇಳಿಕೆ ನೀಡಿದ್ದಾರೆ.        

Show Full Article


Recommended


bottom right ad