entertainment
By Suvarna Web Desk | 09:55 AM May 16, 2017
ಗೂಡಂಗಡಿಯಲ್ಲಿ ಟೀ ಕುಡಿದ ರಾಜಕುಮಾರ!

Highlights

ಸೂಪರ್ ಸ್ಟಾರ್'ಗಳು ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವುದು, ಗೂಡಂಗಡಿಯಲ್ಲಿ ಟೀ ಕುಡಿಯುವುದು ಅಪರೂಪದಲ್ಲಿ ಅಪರೂಪ. ಅಲ್ಲೆಲ್ಲಾ ಹೋಗದಿರಲು ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿರುತ್ತವೆ. ಕೆಲವರಿಗೆ ಜನರು ಮುತ್ತಿಕೊಳ್ಳುತ್ತಾರೆಂಬ ಭಯವಾದರೆ, ಹಲವರಿಗೆ ಆರೋಗ್ಯದ ಬಗ್ಗೆ ಹೆದರಿಕೆ ಇರುತ್ತದೆ.

ಬೆಂಗಳೂರು(ಮೇ.16): ಸೂಪರ್ ಸ್ಟಾರ್'ಗಳು ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವುದು, ಗೂಡಂಗಡಿಯಲ್ಲಿ ಟೀ ಕುಡಿಯುವುದು ಅಪರೂಪದಲ್ಲಿ ಅಪರೂಪ. ಅಲ್ಲೆಲ್ಲಾ ಹೋಗದಿರಲು ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿರುತ್ತವೆ. ಕೆಲವರಿಗೆ ಜನರು ಮುತ್ತಿಕೊಳ್ಳುತ್ತಾರೆಂಬ ಭಯವಾದರೆ, ಹಲವರಿಗೆ ಆರೋಗ್ಯದ ಬಗ್ಗೆ ಹೆದರಿಕೆ ಇರುತ್ತದೆ.

ಆದರೆ ಇತ್ತೀಚೆಗೆ ಯಾವ ಹಿಂಜರಿಕೆಯೂ ಇಲ್ಲದೇ, ತಾನೊಬ್ಬ ಸೆಲೆಬ್ರಿಟಿಯಾದರೂ ಯಾವ ಹಿಂಜರಿಕೆಯೂ ಇಲ್ಲದೆ ಸಾಮಾನ್ಯರಂತೆ ಗೂಡಂಗಡಿಯೊಂದರಲ್ಲಿ ಕೂತು ಟೀ ಕುಡಿದು, ಬನ್ ತಿಂದು ಫೋಟೋ ಹೊಡೆಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಪುನೀತ್ ರಾಜ್ ಕುಮಾರ್'ರವರ 'ರಾಜಕುಮಾರ' ಸಿನಿಮಾ ಅದ್ಭುತ ಪ್ರದರ್ಶನ ಕಂಡಿತ್ತು ಹಾಗೂ ಪುನೀತ್ ರಾಜ್ ಕುಮಾರ್'ಗೆ ಮತ್ತಷ್ಟು ಪ್ರಸಿದ್ದಿ ತಂದುಕೊಟ್ಟಿತ್ತು. ಹೀಗಿದ್ದರೂ ಯಾವುದೇ ದೊಡ್ಡಸ್ತಿಕೆ ತೋರದಿರುವ ಪುನೀತ್ ವರ್ತನೆ ಜನರಿಗೆ ಇಷ್ಟವಾಗಿದೆ. ಅವರ ಸರಳತೆಯನ್ನು ಜನ ಕೊಂಡಾಡಿದ್ದಾರೆ.

-ಕನ್ನಡಪ್ರಭ, ಸಿನಿವಾರ್ತೆ

Show Full Article


Recommended


bottom right ad