Asianet Suvarna News Asianet Suvarna News

ಮುಂಗಾರು ಮಳೆಯೇ... 12 ವರ್ಷದ ಬಳಿಕವೂ ಏನು ನಿನ್ನ ಲೀಲೆ...

ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದೆ ಮುಂಗಾರು ಮಳೆ | ಗಣೇಶ್‌ಗೆ ಭಾರೀ ಸಕ್ಸಸ್ ತಂದು ಕೊಟ್ಟ ಚಿತ್ರ ಮುಂಗಾರು ಮಳೆ | 

Mungaru Male completes 12 years in Sandalwood
Author
Bengaluru, First Published Dec 29, 2018, 12:36 PM IST

ಬೆಂಗಳೂರು (ಡಿ. 29): ಸ್ಯಾಂಡಲ್ ವುಡ್ ಸೂಪರ್ ಹಿಟ್ ಮೂವಿ ’ಮುಂಗಾರು ಮಳೆ’ ತೆರೆ ಕಂಡು ಇಂದಿಗೆ 12 ವರ್ಷ ತುಂಬುತ್ತದೆ. 12 ನೇ ವರ್ಷದ ಆ್ಯನಿವರ್ಸರಿ ಇಂದು. 2006 ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಗೆ ಭಾರೀ ಹೆಸರು ತಂದುಕೊಟ್ಟ ಚಿತ್ರ ಇದು. 

ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಅನಿಸುತಿದೆ ಯಾಕೋ ಇಂದು.... ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.... ಹಾಡುಗಳು ಲವರ್ಸ್ ಗಳ ಬಾಯಲ್ಲಿ ಗುನುಗುವಂತೆ ಮಾಡಿದೆ. 

ನವಿರಾದ ಪ್ರೇಮಕಥೆ ಮೂಲಕ ಜನರ ಮನಸೂರೆಗೊಂಡ ಚಿತ್ರವಿದು. ಈ ಚಿತ್ರದ ನಂತರ ಯೋಗರಾಜ್ ಭಟ್, ಗಣೇಶ್ ಹಾಗೂ ಪೂಜಾ ಗಾಂಧಿ ಸ್ಟಾರ್ ಬದಲಾಗಿ ಹೋಯಿತು. ಚಿತ್ರದ ಯಶಸ್ಸಿನ ಬಗ್ಗೆ ಯೋಗರಾಜ್ ಭಟ್ ಮಾತನಾಡುತ್ತಾ, ಈ ಪರಿ ಯಶಸ್ಸು ಹೇಗೆ ಸಿಕ್ತು? ಇವೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದಕ್ಕೆ ಅನೇಕ ಸಂಗತಿಗಳು ಕಾರಣ. ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಲ್ಯಾಂಡ್ ಮಾರ್ಕ್ ಆಗಿದೆ. ಇದೊಂದು ಅದೃಷ್ಟ’ ಎಂದು ಹೇಳಿದ್ದಾರೆ. 

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಮುಂಗಾರು ಮಳೆ ಚಿತ್ರ ನನಗೆ ಎಲ್ಲವನ್ನು ಕೊಟ್ಟಿದೆ. ನಾನು ಇಂದು ಏನಾಗಿದ್ದೆನೋ ಅದಕ್ಕೆಲ್ಲಾ ಕಾರಣ ಮುಂಗಾರು ಮಳೆ’  ಎಂದಿದ್ದಾರೆ.     

Follow Us:
Download App:
  • android
  • ios