Asianet Suvarna News Asianet Suvarna News

ಬಿಗ್'ಬಾಸ್ ಮನೆಗೆ ಪ್ರವೇಶಿಸಿದ 17 ಸ್ಪರ್ಧಿಗಳಿವರು!: ಸೆಲೆಬ್ರಿಟಿಗಳೊಂದಿಗೆ , ಶ್ರೀ ಸಾಮಾನ್ಯರ ಕಲರವ

ಕನ್ನಡದ ಬಿಗ್​ಬಾಸ್​ ಮತ್ತೆ ಬಂದಿದೆ. ಈ ಬಾರಿ ಸೆಲೆಬ್ರಿಟಿಗಳ ಕೊತೆ ಶ್ರೀ ಸಾಮಾನ್ಯರಿಗೂ  ಅವಕಾಶ ನೀಡಲಾಗಿದೆ. ಹಾಗಾದ್ರೆ ಯಾಱರೆಲ್ಲಾ  ಬಿಗ್​ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದಾರೆ ಇಲ್ಲಿದೆ ವಿವರ.

Big Boss season 5 contestants

ಬೆಂಗಳೂರು(ಅ.16): ಕನ್ನಡದ ಬಿಗ್​ಬಾಸ್​​ 5ನೇ ಸೀಸನ್ ಶುರುವಾಗಿದೆ . ಶೋ ಆರಂಭಿಸುವ ಮೊದಲು ಬಿಗ್​ಬಾಸ್​​ ಮನೆ ಹೇಗಿದೆ ಅನ್ನೋದನ್ನು ನಟ ಸುದೀಪ್​ ಪರಿಚಯಿಸಿ ಕೊಟ್ರು.

ಬಳಿಕ ವೇದಿಕೆಗೆ ಬಂದ ನಟ ಸುದೀಪ್​ ಸ್ಪರ್ಧಾಳುಗಳನ್ನು ಆಹ್ವಾನಿಸಿದರು. ಬಿಗ್​'ಬಾಸ್​ ಮನೆಗೆ ಕಳುಹಿಸುವ ಮೊದಲು ಪ್ರತಿಯೊಬ್ಬರೊಂದಿಗೂ ಸುದೀಪ್​ ಕುಶಲೋಪರಿ ನಡೆಸಿದರು. ಇದೇ ಮೊದಲ ಬಾರಿಗೆ ಸುದೀಪ್​ ಸ್ಪರ್ಧಾಳುಗಳ ತೂಕ ಚೆಕ್​ ಮಾಡಿಸಿ, ಬಿಗ್​ಬಾಸ್​ ಮನೆಯೊಳಗೆ ಕಳುಹಿಸಿದ್ರು.

ಯಾಱರಿದ್ದಾರೆ ಬಿಗ್'​ಬಾಸ್​ ಮನೆಯಲ್ಲಿ?`

ಮೊದಲನೇ ಸ್ಪರ್ಧಿ ಜ್ಯೋತಿಷಿ ಜಯಶ್ರೀನಿವಾಸನ್

ಎರಡನೇ ಸ್ಪರ್ಧಿ ಕೊಡಗಿನ  ಮೇಘಾ ( ಜನಸಾಮಾನ್ಯ)

ಮೂರನೇ ಸ್ಪರ್ಧಿ ನಿರ್ದೇಶಕ ದಯಾಳ್ ಪದ್ಮನಾಭ

ನಾಲ್ಕನೇ ಸ್ಪರ್ಧಿ ಸಿಹಿಕಹಿ ಚಂದ್ರು

5ನೇ ಸ್ಪರ್ಧಿ ಬಾಲಿವುಡ್​ ಕಿರುತೆರೆ ನಟಿ ​ಶ್ರುತಿ (ಬೆಳಗಾವಿ ಹುಡುಗಿ)

6ನೇ ಸ್ಪರ್ಧಿ ಕನ್ನಡದ ಕಿರುತೆರೆ ನಟಿ ಅನುಪಮಾ

7ನೇ ಸ್ಪರ್ಧಿ ಆರ್​ಜೆ  ರಿಯಾಸ್​ ಭಾಷಾ

8ನೇ ಸ್ಪರ್ಧಿ ಮೈಸೂರಿನ   ನಿವೇದಿತಾಗೌಡ (ಜನಸಾಮಾನ್ಯ)

9ನೇ ಸ್ಪರ್ಧಿ ಹುಬ್ಬಳ್ಳಿಯ ಸಮೀರ್​ ಆಚಾರ್ಯ

10ನೇ ಸ್ಪರ್ಧಿ ನಟ ಜೆಕೆ -ಕಾರ್ತಿಕ್ ಜಯರಾಂ

11ನೇ ಸ್ಪರ್ಧಿ ಸೇಲ್ಸ್​​ ಮ್ಯಾನ್​ ದಿವಾಕರ್​  ( ಜನಸಾಮಾನ್ಯ)

12ನೇ ಸ್ಪರ್ಧಿ  ಕಿರುತೆರೆ ನಟಿ ಆಶಿತಾ ಚಂದ್ರಪ್ಪ

13ನೇ ಸ್ಪರ್ಧಿ  ನಟಿ ತೇಜಸ್ವಿನಿರಾವ್​

14ನೇ ಸ್ಪರ್ಧಿ ಚಂದನ್​ಶೆಟ್ಟಿ

15ನೇ  ಸ್ಪರ್ಧಿ ಸುಮಾ ರಾಜಕುಮಾರ್​(ಜನಸಾಮಾನ್ಯ)

16ನೇ ಸ್ಪರ್ಧಿ ನಟಿ ಕೃಷಿ ತಾಪಂಡ

17 ನೇ ಸ್ಪರ್ಧಿ ಕಿರುತೆರೆ ನಟ ಜಗನಾಥ್​

ಬಿಗ್​ಬಾಸ್​ ಮನೆ ಪ್ರವೇಶ ಮಾಡಿದ್ರು. ಒಟ್ಟಿನಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್​ಬಾಸ್​​ ಮನೆಗೆ 17 ಜನರು ನೂರಾರು ಕನಸುಗಳು ಇಟ್ಟುಕೊಂಡು ಪ್ರವೇಶ ಮಾಡಿದ್ದಾರೆ.

Follow Us:
Download App:
  • android
  • ios