Asianet Suvarna News Asianet Suvarna News

ಮಂಡ್ಯ: ನಿಖಿಲ್ ರಾಜಕೀಯ ಭವಿಷ್ಯ ಬಿಚ್ಚಿಟ್ಟ ಗುಪ್ತಚರ ಇಲಾಖೆ ವರದಿ

ಸಿಎಂ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಅಖಾಡಕ್ಕಿಳಿಸಿದ್ದು, ಗುಪ್ತಚರ ಇಲಾಖೆ ವರದಿ ನಿಖಿಲ್ ರಾಜಕೀಯ ಭವಿಷ್ಯ ಬಿಚ್ಚಿಟ್ಟದೆ. ವರದಿಯನ್ನು ನೋಡಿ ಕುಮಾರಸ್ವಾಮಿ ಬೆಚ್ಚಿಬಿದ್ದಿದ್ದಾರೆ. ಹಾಗಾದ್ರೆ ವರದಿಯಲ್ಲೇನಿದೆ..?

Situation is against Nikhil Kumaraswamy in Mandya says intelligence report
Author
Bengaluru, First Published Mar 13, 2019, 5:29 PM IST

ಮಂಡ್ಯ, (ಮಾ.13): ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುತ್ತಿರುವುದರಿಂದ ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ.

 7ಕ್ಕೆ 7 ವಿಧಾನಸಭಾ ಕ್ಷೇತ್ರಗಳದಲ್ಲಿ ಜೆಡಿಎಸ್ ಶಾಸಕರಿದ್ದು, ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಆದಾಗ್ಯೂ  ಸಿಎಂ ಕುಮಾರಸ್ವಾಮಿ ಅವರಿಗೆ ಮಂಡ್ಯ  ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ.

ಪುತ್ರನ ರಾಜಕೀಯ ಭವಿಷ್ಯಕ್ಕೆ ರಾತ್ರೋರಾತ್ರಿ ಜ್ಯೋತಿಷಿ ಮನೆಗೆ ಸಿಎಂ

ವಿಧಾನಸಭೆಯಲ್ಲಿ ಇದ್ದ ಅಲೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಪೂರಕವಾದ ವಾತಾವರಣವಿಲ್ಲ. ಕಾರಣ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿ. ಹಾಗೂ ಸುಮಲತಾ ಅಂಬರೀಶ್ ಸ್ಪರ್ಧೆ. ಅಂಬರೀಶ್ ಅವರ ಅನುಕಂಪ ಜೊತೆಗೆ ಜೆಡಿಎಸ್ ನಾಯಕರುಗಳು ಹೇಳಿಕೆಗಳು ಸುಮಲತಾ ಪರವಾಗಿ ಜನರು ಒಲವು ಹೊಂದಿದ್ದಾರೆ.

 ಇನ್ನು ಸಾಮಾಜಿಕ ಜಾಲತಾಣಗಳಲ್ಲಿ 'ಗೋ ಬ್ಯಾಕ್' ನಿಖಿಲ್ ಕುಮಾರಸ್ವಾಮಿ ಅಭಿಯಾನ ನಡೆಯುತ್ತಿದೆ. ಇದ್ರಿಂದ ಕುಮಾರಸ್ವಾಮಿ ಅವರು ಮತ್ತಷ್ಟು ಆತಂಕಕ್ಕೊಳಗಾಗಿದ್ದು, ಗುಪ್ತಚರ ಇಲಾಖೆ ಮೊರೆ ಹೋಗಿದ್ದಾರೆ. 

ಗುಪ್ತಚರ ಇಲಾಖೆ ನೀಡಿದ ವರದಿಯಲ್ಲೇನಿದೆ..?
ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರು ಅವರಿಗೆ ಬೆಂಬಲ ನೀಡುತ್ತಿರುವುದರಿಂದ ಸಮಲತಾ ಪರ ಅಲೆ ಇದೆ. ಅಷ್ಟೇ ಅಲ್ಲದೇ ಸಚಿವ ಡಿ.ಸಿ. ತಮ್ಮಣ್ಣ ಹಾಗೂ ರೇವಣ್ಣ ಹೇಳಿಕೆಗಳು ಸೇರಿದಂತೆ ಅಂಬರೀಶ್ ಅನುಕಂಪದ ಅಲೆ ಸುಮಲತಾ ಅವರತ್ತ ಒಲವು ಹೆಚ್ಚಾಗುತ್ತಿದೆ ಎಂದು ಗುಪ್ತಚರ ವರದಿಯಿಂದ ತಿಳಿಬಂದಿದೆ.

ಇದ್ರಿಂದ ಕುಮಾರಸ್ವಾಮಿ ಅವರು ಪುತ್ರನ ರಾಜಕೀಯ ಭವಿಷ್ಯ ಬಗ್ಗೆ ಆತಂಕಗೊಂಡಿದ್ದಾರೆ. ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನುವುದರ ಜತೆಗೆ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ. ಈ ಹಿನ್ನೆಲೆಯಲ್ಲಿ ನಿಖಿಲ್ ಅವರ ಗೆಲುವು ಕುಮಾರಸ್ವಾಮಿ ಪಾಲಿಗೆ ಪ್ರತಿಷ್ಠೆಯಾಗಿದೆ.

 ಆದ್ದರಿಂದ, ಶತಾಯಗತಾಯವಾಗಿ ಮಂಡ್ಯದಲ್ಲಿ ಗೆಲ್ಲಲೇಬೇಕೆಂದು ಕುಮಾರಸ್ವಾಮಿ ಅವರು ಹಲವು ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.

Follow Us:
Download App:
  • android
  • ios